ಜಿಂಕೆ ಪಾರ್ಕ್ ಬಳಿ ಪಾಳುಬಿದ್ದ ಮನೆಯಲ್ಲಿ ಈತನಿರುವ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಮುಂದಾದ ವೇಳೆ ಕಾಟನ್ಪೇಟೆ ಠಾಣೆಯ ಪೇದೆ ಕುಮಾರ್ಗೆ ಆರೋಪಿ ನಿರ್ಮಲ್ ಚಾಕು ಇರಿದಿದ್ದಾನೆ. ಆರೋಪಿಯನ್ನು ಹಿಡಿಯಲು ಚಾಮರಾಜಪೇಟೆ ಇನ್ಸ್ಪೆಕ್ಟರ್ ಪ್ರಶಾಂತ್ ಹಾಗೂ ಕಾಟನ್ಪೇಟೆ ಇನ್ಸ್ಪೆಕ್ಟರ್ ಕುಮಾರಸ್ವಾಮಿಯಿಂದ ಎರಡು ಸುತ್ತಿನ ಗುಂಡಿನ ದಾಳಿ ನಡೆದಿದೆ. ರೌಡಿಶೀಟರ್ ಎಡಗಾಲಿಗೆ ಒಂದು ಗುಂಡು ಹೊಕ್ಕಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರೂಪೇಶ್ ಜತೆಯಿದ್ದ ಮತ್ತೊಬ್ಬ ಆರೋಪಿ ಕಿಚ್ಚ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.