ಹುಡ್ಕೋ ಯೋಜನೆಯ ಅಡಿಯಲ್ಲಿ ಕಡುಬಡವರಿಗೆ ಗೃಹ ನಿರ್ಮಾಣಕ್ಕಾಗಿ ನಡೆಯಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ 1982ರಲ್ಲಿ ಇಂದಿರಾ ಗಾಂಧಿಯವರು ಗದಗ ಜಿಲ್ಲೆಗೆ ಅಧಿಕೃತವಾಗಿ ಭೇಟಿ ನೀಡಿದ್ದರು. ಅಂದು ಗದಗ ಜಿಲ್ಲೆ ಅವಿಭಜಿತ ಧಾರವಾಡದ ಭಾಗವಾಗಿತ್ತು. ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜಕೀಯದ ಉದ್ದೇಶದಿಂದ ಗದಗ ಜಿಲ್ಲೆಗೆ ಬೇಟಿ ನೀಡುತ್ತಿದ್ದಾರೆ.