ದೀಪಾವಳಿ: ಸಿಲಿಕಾನ್ ಸಿಟಿಯಲ್ಲೂ ಹೆಚ್ಚಿದ ಶಬ್ಧ, ವಾಯುಮಾಲಿನ್ಯ

ದೀಪಾವಳಿ ಹಿನ್ನೆಲೆಯಲ್ಲಿ ಸಿಡಿಸಿದ ಪಟಾಕಿಯ ಪರಿಣಾಮವಾಗಿ ರಾಜಧಾನಿ ದೆಹಲಿ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಗುರುವಾರ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿತ್ತು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ದೀಪಾವಳಿ ಹಿನ್ನೆಲೆಯಲ್ಲಿ ಸಿಡಿಸಿದ ಪಟಾಕಿಯ ಪರಿಣಾಮವಾಗಿ ರಾಜಧಾನಿ ದೆಹಲಿ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಗುರುವಾರ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿತ್ತು. 
ವಾಯು ಹಾಗೂ ಶಬ್ಧಮಾಲೀನ್ಯ ಪ್ರಮಾಣದಲ್ಲಿ ಪ್ರತಿ ದಿನಗಳಿಗಿಂತ ಹೆಚ್ಚಿನ ಪ್ರಮಾಣ ದಾಖಲಾಗಿತ್ತು. ನಗರದ ವಿವಿಧ 6 ವಾಯುಮಾಲಿನ್ಯ ಮಾಪನ ಕೇಂದ್ರಗಳ ಪೈಕಿ ನಗರ ಕೇಂದ್ರ ರೈಲ್ವೇ ನಿಲ್ದಾಣ ಕೇಂದ್ರದಲ್ಲಿ ಹೆಚ್ಚಿನ ಮಾಲಿನ್ಯ ದಾಖಲಾಗಿರುವುದಾಗಿ ತಿಳಿದುಬಂದಿದೆ. 
ಉಳಿದ ಮಾಪನ ಕೇಂದ್ರಗಳಲ್ಲಿ ಸಮಾಧಾನಕವಾಗಿ ವಾಯುಮಾಲಿನ್ಯ ಪ್ರಮಾಣ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ. 
ನಿಮ್ಹಾನ್ಸ್ ಆಸ್ಪತ್ರೆ ಆವರಣದಲ್ಲಿ ಶಬ್ಧ 50 ಡೆಸಿಬಲ್ ಮೀರಬಾರದು. ಗುರುವಾರ ರಾತ್ರಿ 9ಕ್ಕೆ 68.1 ಡೆಸಿಬಲ್ ಶಬ್ಧವಿತ್ತು. ವಸತಿ ಪ್ರದೇಶದಲ್ಲಿ ಶಬ್ಧ 55 ಡೆಸಿಬಲ್ ಮೀರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. 
ದೊಮ್ಮಲೂರಿನ ಟೆರಿ ಸಂಸ್ಥೆ ಸಮೀಪದ ವಸತಿ ಪ್ರದೇಶದಲ್ಲಿ 79 ಡೆಸಿಬಲ್, ಮಡಿವಾಳ ಕೆರೆಯ ಬಳಿ ವಸತಿ ಪ್ರದೇಶದಲ್ಲಿ 65 ಡೆಸಿಬಲ್ ಶಬ್ಧ ದಾಖಲಾಗಿದೆ. 
ಕೈಗಾರಿಕಾ ಪ್ರದೇಶದಲ್ಲಿ ಸಾಮಾನ್ಯವಾಗಿ 75 ಡೆಸಿಬಲ್ ಗಿಂತ ಹೆಚ್ಚಿನ ಶಬ್ಧಮಾಲಿನ್ಯವಿರುತ್ತದೆ. 
ಹಬ್ಬದ ಅಂಗವಾಗಿ ಕಾರ್ಖಾನೆಗಳಿಗೆ ರಜೆ ಇದ್ದ ಹಿನ್ನಲೆಯಲ್ಲಿ ಗುರುವಾರ ರಾತ್ರಿ 9ಕ್ಕೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 62.9 ಡೆಸಿಬಲ್, ಯಶವಂತಪುರ ಕೈಗಾರಿಕಾ ಪ್ರದೇಶದಲ್ಲಿ 76.7 ಡೆಸಿಬಲ್ ಶಬ್ಧ ದಾಖಲಾಗಿದೆ. 
ನಗರದ ರೈಲಿ ನಿಲ್ದಾಣದಲ್ಲಿ ಬುಧವಾರ ಸಂಜೆ 4 ರಿಂದ ರಾತ್ರಿ 8ರವರೆಗೆ ಅತ್ಯಧಿಕ ಪ್ರಮಾಣದ ಪಿಎಂ-10 ಧೂಳಿನ ಕಣ ಸೃಷ್ಟಿಯಾಗಿರುವುದು ಮಾಪನ ಕೇಂದ್ರದಲ್ಲಿ ದಾಖಲಾಗಿದೆ. ಸಂಜೆ 4 ರಿಂದ 5ರವರೆಗೆ 157 ಮೈಕ್ರೊ ಗ್ರಾಂ, 5 ರಿಂದ 6ರ ಸಮಯದಲ್ಲಿ 129 ಮೈಕ್ರೋ ಗ್ರಾಂ ಪಿಎಂ-10 ದಾಖಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com