ನೋಟಿಸ್ ಹಿನ್ನಲೆಯಲ್ಲಿ ವಿಚಾರಣೆಗೆ ಹಾಜರಾದ ರೆಡ್ಡಿ ಹಾಗೂ ಪ್ರಕರಣದ ಪ್ರಮುಖ ಆರೋಪಿಗಳಾದ ಆ್ಯಂಬಿಡೆಂಟ್ ಕಂಪನಿ ಮಾಲೀಕ ಸೈಯದ್ ಅಹಮ್ಮದ್ ಫರೀದ್ ಮತ್ತು ರೆಡ್ಡಿ ಆಪ್ತ ಸಹಾಯಕ ಅಲಿಖಾನ್ ಅವರನ್ನು ಸಿಸಿಬಿ ಪೊಲೀಸರು ತಡರಾತ್ರಿವರೆಗೂ ವಿಚಾರಣೆಗೊಳಪಡಿಸಿದರು. ನಂತರ ಬಿಡುಗಡೆ ಮಾಡಿದರು. ಆದರೆ, ರೆಡ್ಡಿ ಮತ್ತು ಫರೀದ್ ಅವರ ಬಂಧನ ಅಥವಾ ಬಿಡುಗಡೆಯ ಬಗ್ಗೆ ಅಧಿಕಾರಿಗಳು ಅಧಿಕೃತವಾಗಿ ಹೇಳಿಕೆ ನೀಡಿಲ್ಲ.