ವಿರೋಧದ ನಡುವೆಯೂ ಸಂಬಂಧಿಯೊಂದಿಗೆ ಸಹೋದರಿ ವಿವಾಹ: ನೊಂದ ಸಹೋದರ ಆತ್ಮಹತ್ಯೆಗೆ ಶರಣು

Published On :
ಬೆಂಗಳೂರು: ವಿರೋಧದ ನಡುವೆಯೂ ಮನೆ ಬಿಟ್ಟು ಓಡಿ ಹೋಗಿ, ಸಂಬಂಧಿಯೊಂದಿಗೆ ಸಹೋದರಿ ವಿವಾಹವಾದ ಕಾರಣಕ್ಕೆ ನೊಂದ ಸಹೋದರನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದಿಲೀಪ್ (22) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ. ಇದೇ ರೀತಿಯ ವಿಚಾರಕ್ಕೆ ಕೆಲ ವರ್ಷಗಳ ಹಿಂದೆ ದಿಲೀಪ್ ಪೋಷಕರು ಆತ್ಮಹತ್ಯೆಗೆ ಶರಣಾಗಿದ್ದರು. ಬಳಿಕ ದಿಲೀಪ್ ತನ್ನ ಸಹೋದರ ಹಾಗೂ ಸಹೋದರಿಯನ್ನು ನೋಡಿಕೊಳ್ಳುತ್ತಿದ್ದ.
ಇದರಂತೆ ಕೆಲ ದಿನಗಳ ಹಿಂದಷ್ಟೇ ತನ್ನ ಸಹೋದರಿ ಸಂಬಂಧಿ ಯುವಕನೊಂದಿಗೆ ಓಡಿ ಹೋಗಿ ವಿವಾಹವಾಗಿರುವ ವಿಚಾರ ತಿಳಿದಿದೆ. ಇದರಿಂದ ತೀವ್ರವಾಗಿ ನೊಂದ ದಿಲೀಪ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ದಿಲೀಪ್ ಪಕ್ಕದ ಮನೆಯಲ್ಲಿಯೇ ಸಂಬಂಧಿಕರೂ ಕೂಡ ವಾಸವಿದ್ದರು. ಮನೆಯ ಹೊರಗೆ ದಿಲೀಪ್ ಬೈಕ್ ನಿಲ್ಲಿಸಿದ್ದ. ದಿಲೀಪ್'ನನ್ನು ಭೇಟಿಯಾಗಲು ಸಂಬಂಧಿಯೊಬ್ಬರು ಯತ್ನಿಸಿದ್ದಾರೆ. ಎಷ್ಟು ಕೂಗಿದರೂ ದಿಲೀಪ್ ಬಾಗಿಲು ತೆಗೆದಿಲ್ಲ. ಬಳಿಕ ಕಿಟಕಿಯಲ್ಲಿ ನೋಡಿದಾಗ ದಿಲೀಪ್ ನೇಣು ಬಿಗುದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಾರಗಳ ಹಿಂದಷ್ಚೇ ದಿಲೀಪ್ ಸಹೋದರಿ ಸಂಬಂಧಿಯೊಂದಿಗೆ ಓಡಿ ಹೋಗಿದ್ದು, ಇದರಿಂತ ತೀವ್ರವಾಗಿ ನೊಂದಿದ್ದ ದಿಲೀಪ್ ಅಣ್ಣನೊಂದಿಗೆ ತಂಗಿ ವಿವಾಹವಾಗುವುದಾದರೂ ಹೇಗೆ ಎಂದು ಸಂಬಧಿಕರು ಹಾಗೂ ಸ್ನೇಹಿತರೊಂದಿಗೆ ಪ್ರಶ್ನೆ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


