

ಬೆಂಗಳೂರು: ತೀವ್ರ ಪ್ರವಾಹ ಪೀಡಿತ ಕೊಡಗು ಮತ್ತು ಕೇರಳದ ಪ್ರದೇಶಗಳಿಗೆ ಭೇಟಿ ನೀಡಿದ ಪಶ್ಚಿಮ ಘಟ್ಟ ತಂಡ ಅಧ್ಯಯನ ನಡೆಸಿದ್ದು ಭೂಮಿಯ ಬಳಕೆಯಲ್ಲಿ ಅವ್ಯಾಹತ ಬದಲಾವಣೆಯಿಂದ ಪ್ರವಾಹ ಮತ್ತು ಭೂಕುಸಿತವುಂಟಾಗುತ್ತಿದೆ ಎಂದು ಹೇಳಿದೆ.
ಕರ್ನಾಟಕ, ಕೇರಳ, ತಮಿಳುನಾಡು ಮತ್ತು ದೆಹಲಿಯ ಪರಿಸರ ತಜ್ಞರು ಇಂತಹ ಪ್ರದೇಶಗಳನ್ನು ಕಾಪಾಡಲು 'ಸಮರ್ಥನೀಯ ಸಂಪನ್ಮೂಲ ಮತ್ತು ಭೂ ಬಳಕೆ ನೀತಿ' ರಚಿಸಬೇಕು ಎಂದು ಹೇಳುತ್ತಾರೆ.
ಕಡಿದಾದ ಭೂಪ್ರದೇಶದಲ್ಲಿ ಮಣ್ಣು ಸಡಿಲವಾಗಿದ್ದು ಇಲ್ಲಿ ಮಣ್ಣು ಮತ್ತು ನೀರನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಲು ಸಾಕಷ್ಟು ಗಿಡ ಮರಗಳಿರುವುದಿಲ್ಲ. ಪರ್ವತ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಗಳು ಅವೈಜ್ಞಾನಿಕ ರೀತಿಯಲ್ಲಿ ಹೆಚ್ಚು ನಡೆಯುತ್ತಿರುವುದರಿಂದ ಮಣ್ಣು ದುರ್ಬಲವಾಗಿ ಭೂಕುಸಿತವುಂಟಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭೂಕುಸಿತವುಂಟಾಗಲು ಮತ್ತೊಂದು ಕಾರಣ ಜೈವಿಕವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ ಮತ್ತು ಅಭಿವೃದ್ಧಿಪರ ಕೆಲಸಗಳು ನೈಸರ್ಗಿಕ ಕಣಿವೆಗಳಿಗೆ ತೊಂದರೆಯುಂಟುಮಾಡುತ್ತದೆ ಎಂದು ಹೇಳಿದ್ದಾರೆ. ಕೊಡಗಿನ ಕಾಫಿ ಬೆಳೆಗಳ ಬಗ್ಗೆ ವಿಸ್ತ್ರೃತ ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ ಎಂದು ತಂಡ ಶಿಫಾರಸು ಮಾಡಿದೆ.
ತಂಡದ ಸದಸ್ಯ ಬಾಲಕೃಷ್ಣ ನಾಯ್ಡು, ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಒತ್ತುವರಿಯಾಗಿದ್ದು ಕಂಡುಬರುತ್ತಿದೆ, ಅಲ್ಲದೆ ರಾಸಾಯನಿಕಗಳ ಅತಿಯಾದ ಬಳಕೆ, ನೈಸರ್ಗಿಕ ಸಂಪನ್ಮೂಲಗಳ ಅಧಿಕ ನಾಶ ಮತ್ತು ಮಾನವ ನಿರ್ಮಿತ ಆಪತ್ತುಗಳು ಪ್ರವಾಹ, ಭೂಕುಸಿತಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ.
ಸ್ಥಿರ ನಿರ್ಮಾಣ ಮಾದರಿಗಳು, ನೈಸರ್ಗಿಕ ಆವಾಸಸ್ಥಾನ ಮತ್ತು ಮರುಸ್ಥಾಪನೆ ಮತ್ತು ಬಂಜರು ಇಳಿಜಾರು ಮರು-ಹಸಿರು ಮನೆ ಪುನರುತ್ಪಾದನೆಗಳಿಂದ ಪ್ರವಾಹ, ಭೂಕುಸಿತ ಪರಿಸ್ಥಿತಿಗಳನ್ನು ತಡೆಯಬಹುದು ಎನ್ನುತ್ತಾರೆ. ಫಿಕಸ್ ಮತ್ತು ಬಿದಿರು ಜಾತಿಗಳೊಂದಿಗೆ ನೈಸರ್ಗಿಕ ಪುನರುತ್ಪಾದನೆಯ ಮಾದರಿ ಜೈವಿಕ ವೈವಿಧ್ಯತೆ, ನೈಸರ್ಗಿಕ ಕೃಷಿ ವಿಧಾನ ಅಳವಡಿಕೆ ಕೂಡ ಇತರ ಪರಿಹಾರಗಳಾಗಿವೆ.