ಬೆಂಗಳೂರು: ದರೋಡೆಗೆ ಸಂಚು: ಸಿಸಿಬಿ ಪೊಲೀಸರಿಂದ ಆರು ಮಂದಿ ಆರೋಪಿಗಳ ಬಂಧನ

ದರೋಡಗೆ ಸಂಚು ರೂಪಿಸುತ್ತಿದ್ದ ಆರು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಖಚಿತ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು, ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ದರೋಡಗೆ ಸಂಚು ರೂಪಿಸುತ್ತಿದ್ದ ಆರು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೊತ್ತನೂರು ದೊಡ್ಡ ಗುಬ್ಬಿಯ ಕರ್ನಾಟಕ ಬ್ಯಾಂಕ್ ಹತ್ತಿರದ ನಿವಾಸಿ ಪ್ರತಾಪ್ ಎಚ್ ಕೆ (38) ಕೆ. ಆರ್ . ಪುರ ದೇವಸಂದ್ರ ಲಿಟ್ಲ್ ಬ್ಲೂಮ್ ಶಾಲೆ ಹತ್ತಿರದ ರೈಲ್ವೆ ಕಾಲೋನಿಯ ನಿವಾಸಿ ಪಿ . ಹರೀಶ್ (31) ದೇವಸಂದ್ರ ಮಸೀದಿ ರಸ್ತೆಯ ಲಕ್ಷ್ಮಿ ನರಸಿಂಹ ನಿಲಯ ನಿವಾಸಿ ನದೀಂ (26) ದೇವಸಂದ್ರದ ಅಭಿಷೇಕ್ ( 23)  ಹಾಗೂ ಶಿವ (24)   ಜೆ. ಸಿ. ಲೇಔಟ್ ನ ಸುಮನ್ (26) ಬಂಧಿತ ಆರೋಪಿಗಳು.
ಆರೋಪಿಗಳು ಕೆ. ಆರ್. ಪುರಂ ಠಾಣಾ ವ್ಯಾಪ್ತಿಯ ಐಟಿಐ ಬಸ್ ಡಿಪೋ ರಸ್ತೆ ಬದಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ದಾರಿಯಲ್ಲಿ ಬರುವವರ ಮೇಲೆ ಹಲ್ಲೆ ಮಾಡಿ ಅವರ ಬಳಿ ಇರುವ ನಗದು- ಚಿನ್ನಾಭರಣ ದೋಚಲು ಸಜ್ಜಾಗಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು, ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com