ಭಾರತಕ್ಕೆ ಕೇಡುಗಾಲ ಶುರು, ಪಾಕ್ ಪ್ರತೀಕಾರ ತೀರಿಸಲಿದೆ: ಚಾಮರಾಜನಗರ ಯುವಕನ ಸ್ಟೇಟಸ್!

ಭಾರತ ದೇಶದ ಹೊರಗೆ ಮಾಡುವ ಸರ್ಜಿಕಲ್ ಸ್ಟ್ರೈಕ್ ಗಿಂತ ಭಾರತದ ಒಳಗೆ ಮಾಡಬೇಕಿದೆ. ಹೌದು ಭಾರತೀಯ ಸೇನೆಯ ಏರ್ ಸ್ಟ್ರೈಕ್ ಗೆ ಇಡೀ ದೇಶವೇ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಚಾಮರಾಜನಗರ: ಭಾರತ ದೇಶದ ಹೊರಗೆ ಮಾಡುವ ಸರ್ಜಿಕಲ್ ಸ್ಟ್ರೈಕ್ ಗಿಂತ ಭಾರತದ ಒಳಗೆ ಮಾಡಬೇಕಿದೆ. ಹೌದು ಭಾರತೀಯ ಸೇನೆಯ ಏರ್ ಸ್ಟ್ರೈಕ್ ಗೆ ಇಡೀ ದೇಶವೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ಇತ್ತ ಚಾಮರಾಜನಗರದ ಮೊಹಮ್ಮದ್ ನೌಷದ್ ಎಂಬಾತ ದೇಶದ್ರೋಹಿ ಸ್ಟೇಟಸ್ ಹಾಕಿಕೊಂಡು ಹುಚ್ಚಾಟ ಮೆರೆದಿದ್ದಾನೆ. 
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ಗಡಿ ನಿಯಂತ್ರಣ ರೇಖೆ ದಾಟಿ ಉಗ್ರ ಕ್ಯಾಂಪ್ ಗಳನ್ನು ಧ್ವಂಸಗೊಳಿಸಿದೆ. ಹೀಗಿರುವ ಚಾಮರಾಜನಗರದ ಹನೂರು ತಾಲೂಕಿನ ಕೌದಳ್ಳಿ ಗ್ರಾಮದ ಮೊಹಮ್ಮದ್ ನೌಷದ್ ಎಂಬ ದೇಶದ್ರೋಹಿ, ಕಾದು ನೋಡಬೇಕು. ಭಾರತಕ್ಕೆ ಕೇಡುಗಾಲ ಪ್ರಾರಂಭವಾಗಿದ್ದು, ಪಾಕ್ ಪ್ರತೀಕಾರ ತೀರಿಸಲಿದೆ ಎಂಬ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಾನೆ.
ಇದರಿಂದ ಕೆರಳಿದ ಗ್ರಾಮಸ್ಥರು ಯುವಕನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com