ಮಡಿಕೇರಿ: ಒಬ್ಬನಿಗೆ ಕೈಕೊಟ್ಟು ಮತ್ತೊಬ್ಬನೊಂದಿಗೆ ರಿಜಿಸ್ಟರ್ ಮದುವೆ, ಮಾಜಿ ಲವರ್‌ನಿಂದ ಕಿರುಕುಳ, ಯುವತಿ ಆತ್ಮಹತ್ಯೆ!

ಯುವತಿಯೋರ್ವಳು ಮೊದಲಿಗೆ ಯುವಕನೋರ್ವನ ಜೊತೆ ಬ್ರೇಕ್ ಅಪ್ ಮಾಡಿಕೊಂಡು ಪೋಷಕರಿಗೆ ತಿಳಿಯದಂತೆ ಇನ್ನೊಬ್ಬನ ಜೊತೆ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಮಡಿಕೇರಿ: ಯುವತಿಯೋರ್ವಳು ಮೊದಲಿಗೆ ಯುವಕನೋರ್ವನ ಜೊತೆ ಬ್ರೇಕ್ ಅಪ್ ಮಾಡಿಕೊಂಡು ಪೋಷಕರಿಗೆ ತಿಳಿಯದಂತೆ ಇನ್ನೊಬ್ಬನ ಜೊತೆ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದು ಈ ವಿಷಯ ತಿಳಿದ ಮಾಜಿ ಲವರ್ ಕಿರುಕುಳ ನೀಡಿದ್ದರಿಂದ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮಡಿಕೇರಿಯ ಡೈರಿ ಫಾರ್ಮ್ ನಿವಾಸಿಯಾಗಿದ್ದ 19 ವರ್ಷದ ದಿವ್ಯಜ್ಯೋತಿ ಆತ್ಮಹತ್ಯೆಗೆ ಶರಣಾದ ದುರ್ದೈವಿ. ದಿವ್ಯಜ್ಯೋತಿ ಮೊದಲಿಗೆ ಪವನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಮನೆಯಲ್ಲಿ ಗೊತ್ತಾಗಿದ್ದರಿಂದ ಪವನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದಳು. 
ಇದಾದ ನಂತರ ಪೋಷಕರಿಗೆ ತಿಳಿಯದಂತೆ ದಿವ್ಯ ಬ್ರಿಜೇಶ್ ಎಂಬಾತನನ್ನು ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಳು. ಈ ವಿಷಯ ತಿಳಿದ ಪವನ್ ದಿವ್ಯಜ್ಯೋತಿಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ನೀನು ಆತನೊಂದಿಗೆ ಹೇಗೆ ಬದುಕುತ್ತೀಯಾ ಎಂದು ನಾನು ನೋಡುತ್ತೇನೆ ಎಂದು ಧಮ್ಕಿ ಹಾಕುತ್ತಿದ್ದ. 
ಇದರಿಂದ ಬೇಸತ್ತ ದಿವ್ಯಜ್ಯೋತಿ ಪವನ್ ನಿಂದ ಟಾರ್ಚರ್ ಇದೆ ಎಂದು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಕರಣ ಸಂಬಂಧ ಮಡಿಕೇರಿ ನಗರ ಪೊಲೀಸರು ಪವನ್ ಮತ್ತು ಬ್ರಿಜೇಶ್ ಇಬ್ಬರನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com