ಅಂತೆಯೇ 'ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಸಂಸ್ಥೆ ಉತ್ಪಾದಿಸುವ ಆಹಾರ ಪದಾರ್ಥಗಳಿಗೆ 600 ಮೆಟ್ರಿಕ್ ಟನ್ ನಂದಿನಿ ಕೆನೆರಹಿತ ಹಾಲಿನ ಪುಡಿ ಒದಗಿಸುತ್ತಿದ್ದು, ನಂದಿನಿ ಚೆದ್ದಾರ್ ಚೀಸ್, ಚೀಸ್ ಸ್ಲೈಸ್ ಸೇರಿದಂತೆ ಬಗೆಬಗೆಯ ಪದಾರ್ಥಗಳು ಹಾಗೂ ನಂದಿನಿ ಸಿಹಿ ತಿನಿಸುಗಳಂತೆ ಮುಂದಿನ ದಿನಗಳಲ್ಲಿ ಸಿರಿಧಾನ್ಯ ಲಡ್ಡು ಮತ್ತು ಹಾಲಿನ ಪುಡಿ ಶೀಘ್ರದಲ್ಲೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. ಅಲ್ಲದೆ, ವಿವಿಧ ಬಗೆಯ 22 ಐಸ್ ಕ್ರೀಂ ಸಿಹಿ ತಿನಿಸುಗಳನ್ನು ಬಿಡುಗಡೆಗೆ ಮಾಡಲಾಗುವುದು. ದೇಶದ 16 ನಗರಗಳಲ್ಲಿ ಮುಂಬೈನ ಟ್ರಾ ಸಂಶೋಧನಾ ಸಂಸ್ಥೆಯು 5 ಸಾವಿರ ವಿವಿಧ ಉತ್ಪನ್ನಗಳನ್ನು ಸಮೀಕ್ಷೆ ನಡೆಸಿದ್ದು, ಅದರಲ್ಲಿ ನಂದಿನಿ ಹಾಲಿಗೆ ದಕ್ಷಿಣ ಭಾರತದ ಅತ್ಯಂತ ಆಕರ್ಷಕ ಹಾಲಿನ ಬ್ರಾಂಡ್ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ' ಎಂದು ಹರ್ಷ ವ್ಯಕ್ತಪಡಿಸಿದರು.