ಇನ್ನು ದುರಂತ ನಡೆದ ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಎಸ್ಡಿಆರ್ಎಫ್ ಮತ್ತು 140 ಎನ್ಡಿಆರ್ಎಫ್ ಸಿಬ್ಬಂದಿ, 250 ಮಂದಿ ಅಗ್ನಿಶಾಮಕ ಸಿಬ್ಬಂದಿ, 3 ಸಾವಿರಕ್ಕೂ ಹೆಚ್ಚು ಪೊಲೀಸರು, 200 ಸ್ವಯಂ ಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. 12 ಜೆಸಿಬಿಗಳಿಂದ ಕಟ್ಟಡ ಅವಶೇಷ ತೆರವು ಕಾರ್ಯ ನಡೆಸಲಾಗುತ್ತಿದೆ. ಬೋಡ್ರಸ್ ಡಿಗ್ಗಿಂಗ್ ವಾಹನಗಳಿಂದ ಭರದ ಕಾರ್ಯಾಚರಣೆ ಸಾಗಿದೆ. 12 ಆ್ಯಂಬುಲೆನ್ಸ್, 50 ಮಂದಿ ವೈದ್ಯಕೀಯ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.