ಅನುದಾನದ ಕೊರತೆಯಿಲ್ಲ: ಸಚಿವ ರೇವಣ್ಣಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿರುಗೇಟು

ಬರ ನಿರ್ವಹಣೆ ಕೆಲಸ ಸಮರ್ಪಕವಾಗಿ ನಡೆಯುತ್ತಿದ್ದು, ಯಾವುದೇ ಸಮಸ್ಯೆಯಿಲ್ಲ ಬರ ಪರಿಹಾರ ಅನುದಾನ ಸಕಾಲಕ್ಕೆ ಬಿಡುಗಡೆಯಾಗುತ್ತಿದ್ದು, ಹಣಕಾಸಿನ ಕೊರತೆಯಿಲ್ಲ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಅನುದಾನದ ಕೊರತೆಯಿಲ್ಲ: ಸಚಿವ ರೇವಣ್ಣಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿರುಗೇಟು
ಅನುದಾನದ ಕೊರತೆಯಿಲ್ಲ: ಸಚಿವ ರೇವಣ್ಣಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿರುಗೇಟು
Updated on: 
ಹಾಸನ: ಬರ ನಿರ್ವಹಣೆ ಕೆಲಸ ಸಮರ್ಪಕವಾಗಿ ನಡೆಯುತ್ತಿದ್ದು, ಯಾವುದೇ ಸಮಸ್ಯೆಯಿಲ್ಲ ಬರ ಪರಿಹಾರ ಅನುದಾನ ಸಕಾಲಕ್ಕೆ ಬಿಡುಗಡೆಯಾಗುತ್ತಿದ್ದು, ಹಣಕಾಸಿನ ಕೊರತೆಯಿಲ್ಲ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸಚಿವ ರೇವಣ್ಣ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ ಎಂಬ ರೇವಣ್ಣ ಅವರ ಆರೋಪಕ್ಕೆ ಸ್ಪಷ್ಟೀಕರಣ ನೀಡಿದರು. ಜಿಲ್ಲೆಯ ಬರ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದೇವೆ. ಅರಸೀಕೆರೆಯಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರು ಖರೀದಿಸಿ ಪೂರೈಕೆ ಮಾಡಲಾಗುತ್ತಿದೆ. ಅಗತ್ಯವಿರುವ ಕಡೆಗಳಲ್ಲಿ ಟ್ಯಾಂಕರ್​ಗಳಿಂದಲೂ ನೀರು ಪೂರೈಸುವ ಕಾರ್ಯ ನಡೆಯತ್ತಿದೆ. ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದೇವೆ. ಅಂತೆಯೇ ಬಹುಗ್ರಾಮ ಕುಡಿಯುವ ನೀರಿನ‌ ಯೋಜನೆ ಕಾಮಗಾರಿ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಸಕಾಲಕ್ಕೆ ಬರ‌ನಿರ್ವಣೆಯ ಹಣವನ್ನು ತಹಶೀಲ್ದಾರ್ ಖಾತೆಗೆ ಬಿಡುಗಡೆ ಮಾಡಿದ್ದೇವೆ ಎಂದರು.
ಅರಸೀಕೆರೆ, ಬೇಲೂರು ತಾಲೂಕಿನಲ್ಲಿ ನೀರಿನ ಸಮಸ್ಯೆ ಇದೆ. ಬಿತ್ತನೆ ಆಲೂಗಡ್ಡೆಗೆ ಸಬ್ಸಿಡಿ ಕುರಿತು ತೋಟಗಾರಿಕಾ ಇಲಾಖೆಗೆ ಸೂಕ್ತ ನಿರ್ದೇಶನ ನೀಡುತ್ತೇವೆ. ಇಲಾಖೆಯಿಂದ ಬಿತ್ತನೆ ಆಲೂಗಡ್ಡೆ ನೀಡುವುದಿಲ್ಲ. ವರ್ತಕರೇ ಬಿತ್ತನೆಗೆ ಉತ್ತಮವಾದ ಆಲೂಗೆಡ್ಡೆ ಮಾರಾಟ ಮಾಡುತ್ತಾರೆ. ಸರ್ಕಾರದ ಸೂಚನೆಯಂತೆ ವರ್ತಕರು ನಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com