ಕುವೈತ್‌ನಲ್ಲಿ ಕರಾವಳಿ ಜಿಲ್ಲೆ ಯುವಕರಿಗೆ ಸಂಕಷ್ಟ: ಸಹಾಯಕ್ಕಾಗಿ ಸುಷ್ಮಾ ಸ್ವರಾಜ್ ಗೆ ಸಂಸದ ನಳಿನ್ ಪತ್ರ

ಕುವೈತ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ದಕ್ಷಿಣ ಕನ್ನಡದ 34 ಯುವಕರನ್ನು ರಕ್ಷಿಸಬೇಕಾಗಿ ಕೋರಿ ಸಂಸದ ನಳಿನ್ ಕುಮಾರ್ ಕಟೀಲ್ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದಿದ್ದಾರೆ.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
Updated on: 
ಮಂಗಳೂರು: ಕುವೈತ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ದಕ್ಷಿಣ ಕನ್ನಡದ 34 ಯುವಕರನ್ನು ರಕ್ಷಿಸಬೇಕಾಗಿ ಕೋರಿ ಸಂಸದ ನಳಿನ್ ಕುಮಾರ್ ಕಟೀಲ್ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದಿದ್ದಾರೆ.
"ಯುವಕರನ್ನು ಕುವೈತ್ ಗೆ ಕರೆದೊಯ್ಯುವಾಗ ಅವರಿಗೆ ಆ ದೇಶದಲ್ಲಿ ಒಳ್ಳೆಯ ಉದ್ಯೋಗ ಹಾಗೂ ಸಂಬಳದ ಭರವಸೆ ನಿಡಲಾಗಿತ್ತು, ಆದರೆ ಈಗ ಆ ಯುವಕರಿಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಾಗಿದೆ" ಕಟೀ;ಲ್ ಬರೆದಿದ್ದಾರೆ.
ಕುವೈತ್ ನಲ್ಲಿ ಆ ಯುವಕರಿಗೆ ಕಳೆದ ಆರು ತಿಂಗಳಿನಿಂದ ಉದ್ಯೋಗವಾಗಲಿ, ಸಂಬಳವಾಗಲಿ ಸಿಕ್ಕಿಲ್ಲ. ಅವರು ಅಲ್ಲಿ ಅತ್ಯಂತ ಅಮಾನವೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಬಡ ಕುಟುಂಬಗಳಿಂದ ಬಂದ ಈ ಯುವಕಕ ವೇತನ ಹಾಗೂ ಆರ್ಥಿಕ ನೆರವೇ ಆ ಕುಟುಂಬಗಳಿಗೆ ಇರುವ ಏಕೈಕ ಆಸರೆಯಾಗಿದೆ. ಈಗ ಅವರುಗಳು ದೇಶಕ್ಕೆ ಮರಳಲು ಬಯಸಿದ್ದಾರೆ. ಆದರೆ ಕುವೈತ್ ನಲಿರುವ ಒಂದು ಸಂಸ್ಥೆ ಅವರ ಮೂಲ ಪಾಸ್ ಪೋರ್ಟ್ ಗಳನ್ನು ಹಿಡಿದಿಟ್ಟುಕೊಂಡಿದೆ ಎಂದು ತಿಳಿದುಬಂದಿದೆ.
ನಳಿನ್ ಕಟೀಲ್ ಅವರು ಪತ್ರದೊಡನೆ ಆ ಯುವಕರ ಪಾಸ್ ಪೋರ್ಟ್ ನಕಲಿ ಪ್ರತಿಯನ್ನೂ ಲಗತ್ತಿಸಿ ಸಚಿವರಿಗೆ ರವಾನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com