ನ.22ರಂದು ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಿಎಂ ಯಡಿಯೂರಪ್ಪ ಚಾಲನೆ

ಬಹುನಿರೀಕ್ಷಿತ ಕಲಬುರಗಿ ವಿಮಾನ ನಿಲ್ದಾಣಕ್ಕೆ ನ.22 ರಂದು ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರು ಲೋಕಾರ್ಪಣೆ ಮಾಡಲಿದ್ದಾರೆ. 
ಕಲಬುರಗಿ ವಿಮಾನ ನಿಲ್ದಾಣ
ಕಲಬುರಗಿ ವಿಮಾನ ನಿಲ್ದಾಣ
Updated on: 

ಕಲಬುರಗಿ: ಬಹುನಿರೀಕ್ಷಿತ ಕಲಬುರಗಿ ವಿಮಾನ ನಿಲ್ದಾಣಕ್ಕೆ ನ.22 ರಂದು ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರು ಲೋಕಾರ್ಪಣೆ ಮಾಡಲಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಘೋಷಣೆ ಮಾಡಿದ್ದ ಸ್ಟಾರ್ ಏರ್, ನಿಲ್ದಾಣದಲ್ಲಿ ಬೆಂಗಳೂರು-ಕಲಬುರಗಿ ವಿಮಾನಗಳು ವಾರಕ್ಕೆ ಮೂರು ಬಾರಿ ಪ್ರಯಾಣಗಳನ್ನು ನಡೆಸಲಿವೆ ಎಂದಜು ಹೇಳಿತ್ತು. ನಿಲ್ದಾಣದಲ್ಲಿ ವಿಮಾನಗಳು ಸೋಮವಾರ ಮಧ್ಯಾಹ್ನ 12.22ಕ್ಕೆ ಬೆಂಗಳೂರಿಗೆ ಹೊರಡಿಲಿವೆ. ಇದರಂತೆ ಶುಕ್ರವಾರ ಹಾಗೂ ಭಾನುವಾರ ಕೂಡ ಹಾರಾಟ ನಡೆಸಲಿವೆ. ಮಧ್ಯಾಹ್ನ 1.25ರ ಸುಮಾರಿಗೆ ಈ ವಿಮಾನಗಳು ಕಲಬುರಗಿಗೆ ಆಗಮಿಸಲಿವೆ ಎಂದಿತ್ತು. 

ಶುಕ್ರವಾರ ಮುಖ್ಯಮಂತ್ರಿಗಳು ಸ್ಟಾರ್ ಏರ್ ವಿಮಾನದ ಮೂಲಕ ಕಲಬುರಗಿಗೆ ತಲುಪಲಿದ್ದು, ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದ ಬಳಿಕ ಇದೇ ವಿಮಾನದಲ್ಲಿಯೇ ಮಧ್ಯಾಹ್ನ 1.55ಕ್ಕೆ ಹೊರಟು 3 ಗಂಟೆ ಸುಮಾರಿಗೆ ಮತ್ತೆ ನಗರಕ್ಕೆ ವಾಪಾಸ್ಸಾಗಲಿದ್ದಾರೆ. 

ಕಾರ್ಯಕ್ರಮ ಯಶಸ್ವಿ ಕಾಣಬೇಕೆಂಬ ಉದ್ದೇಶದಿಂದ ಜಿಲ್ಲಾ ಆಡಳಿತ ಮಂಡಳಿ ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳು ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com