3-4 ದಿನಗಳಲ್ಲಿ ಕೇಂದ್ರ ಪರಿಹಾರ ಬಿಡುಗಡೆ ಮಾಡಲಿದೆ: ಸಿಎಂ ಯಡಿಯೂರಪ್ಪ

ರಾಜ್ಯಕ್ಕೆ‌ ನೆರೆಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಂದಿಸಲಿದೆ. ಮೂರ್ನಾಲ್ಕು‌ ದಿನದಲ್ಲಿ ಪರಿಹಾರ ಬಿಡುಗಡೆ ಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ
ಮುಖ್ಯಮಂತ್ರಿ ಯಡಿಯೂರಪ್ಪ
Updated on: 

ಮೈಸೂರು: ರಾಜ್ಯಕ್ಕೆ‌ ನೆರೆಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಂದಿಸಲಿದೆ. ಮೂರ್ನಾಲ್ಕು‌ ದಿನದಲ್ಲಿ ಪರಿಹಾರ ಬಿಡುಗಡೆ ಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಭಾದಿತ ಯಾವ ‌ರಾಜ್ಯಕ್ಕೂ ಹಣ ಬಿಡುಗಡೆಯಾಗಿಲ್ಲ. ವಿರೋಧ ಪಕ್ಷದ ನಾಯಕರು ಈ ವಿಷಯದಲ್ಲಿ ಅನಗತ್ಯ ಗೊಂದಲ ‌ಸೃಷ್ಟಿಸುವ ಕೆಲಸ ಮಾಡುವುದು ಬೇಡ.‌ ದೆಹಲಿಗೆ ‌ಯಾವ ನಿಯೋಗ ಕರೆದೊಯ್ಯುವ ‌ಅಗತ್ಯವಿಲ್ಲ.‌ ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರನ್ನು ಕಡೆಗಣಿಸಿಲ್ಲ.‌ ಈಗಾಗಲೇ, ‌ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕೆಲಸ ನಡೆದಿದೆ ಎಂದರು.

ಟೆಲಿಫೋನ್ ಕದ್ದಾಲಿಕೆ ‌ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಈಗಾಗಲೇ ಸಿಬಿಐ‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಹಂತದಲ್ಲಿ ‌ಯಾವುದೇ ಪ್ರತಿಕ್ರಿಯೆ ‌ನೀಡುವುದು ಸರಿಯಲ್ಲ. ತನಿಖೆ ಪೂರ್ಣಗೊಂಡ ಬಳಿಕ ಯಾರೇ ತಪ್ಪು ಮಾಡಿದ್ದರೂ ಬಹಿರಂಗವಾಗಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com