ನಟ ಯಶ್ ಆಡಿಟರ್ಸ್ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳ ದಾಳಿ

ಈ ಹಿಂದೆ ನಟ ನಿರ್ಮಾಪಕರ ಮನೆ ಕಚೇರಿಗಳ ಮೇಲೆ ದಾಳಿ ಮಾಡಿ ಶಾಕ್ ಕೊಟ್ಟಿದ್ದ ಆದಾಯ ತೆರಿಗೆ ಅಧಿಕಾರಿಗಳು ಇದೀಗ ನಟ ನಿರ್ಮಾಪಕರ ಆಡಿಟರ್ ಗಳ ಕಚೇರಿಗಳ ಮೇಲೂ ದಾಳಿ ಮಾಡಿದ್ದಾರೆ.

Published: 11th January 2019 12:00 PM  |   Last Updated: 11th January 2019 12:03 PM   |  A+A-


Actor Yash Auditors office raided by income tax department Officials

ಸಂಗ್ರಹ ಚಿತ್ರ

Posted By : SVN SVN
Source : Online Desk
ಬೆಂಗಳೂರು: ಈ ಹಿಂದೆ ನಟ ನಿರ್ಮಾಪಕರ ಮನೆ ಕಚೇರಿಗಳ ಮೇಲೆ ದಾಳಿ ಮಾಡಿ ಶಾಕ್ ಕೊಟ್ಟಿದ್ದ ಆದಾಯ ತೆರಿಗೆ ಅಧಿಕಾರಿಗಳು ಇದೀಗ ನಟ ನಿರ್ಮಾಪಕರ ಆಡಿಟರ್ ಗಳ ಕಚೇರಿಗಳ ಮೇಲೂ ದಾಳಿ ಮಾಡಿದ್ದಾರೆ.

ನಟ ಯಶ್ ಮನೆ ಮೇಲೆ ಐಟಿ ದಾಳಿಯ ಬೆನ್ನಲ್ಲೇ ಇದೀಗ ಗುರುವಾರ ಯಶ್ ಆಡಿಟರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀನೆ ನಡೆಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಯಶ್​ ಆಡಿಟರ್ ಬಸವರಾಜು ಎಂಬುವವರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಯಶ್ ಮಾತ್ರವಲ್ಲದೇ ಸ್ಯಾಂಡಲ್ ವುಡ್ ಹಲವು ನಟ-ನಟಿಯರು, ನಿರ್ಮಾಪಕರ ಆಡಿಟರ್ ಆಗಿರುವ ಬಸವರಾಜ್
ಇನ್ನು ಪ್ರಸ್ತುತ ಐಟಿ ಆಧಿಕಾರಿಗಳು ದಾಳಿ ಮಾಡಿರುವ ಆಡಿಟರ್ ಬಸವರಾಜು, ಕೇವಲ ನಟ ಯಶ್ ಮಾತ್ರವಲ್ಲದೇ ಸ್ಯಾಂಡಲ್​ವುಡ್ ಕೆಲ ನಿರ್ಮಾಪಕರ ಹಾಗೂ ನಟರ ಆಡಿಟರ್ ಕೂಡ ಆಗಿದ್ದಾರೆ. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಖಾಸಗಿ ವಾಹನಗಳಲ್ಲಿ ಬಂದು, ಏಕಕಾಲದಲ್ಲಿ ದಾಳಿ ನಡೆಸಿದ  9 ಜನ ಐಟಿ ಅಧಿಕಾರಿಗಳು, ಸತತ 5 ಗಂಟೆಗಳ ಕಾಲ ತಪಾಸಣೆ ನಡೆಸಿದ್ದರು. ಅತೆಯೇ ಆಡಿಟರ್ ಬಸವರಾಜ್​ ಕಚೇರಿಯಲ್ಲಿನ ಕೆಲ ಮಹತ್ವದ ದಾಖಲಾತಿಗಳು ಹಾಗೂ ಕಡತಗಳನ್ನು ಪರಿಶೀಲಿಸಿದ್ದರು. ಬಳಿಕ ಎರಡು ಬ್ಯಾಗ್​ ಹಾಗೂ ಕೆಲ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಸದ್ಯ ಐಟಿ ವಿಚಾರಣೆ ಎದುರಿಸುತ್ತಿರುವ ನಟ ಯಶ್​ ಗೆ ಈಗ ಮತ್ತೊಂದು ಸುತ್ತಿನ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗುತ್ತಿದ್ದು, ದಾಖಲಾತಿಗಳನ್ನು ವಶಕ್ಕೆ ಪಡೆದ ಬೆನ್ನಲ್ಲೇ ನಟ ಯಶ್​ ಆಡಿಟರ್ ಬಸವರಾಜ್ ಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಸಾಧ್ಯತೆ ಇದೆ.

ಈ ಹಿಂದೆ ಕಳೆದವಾರ ನಟ ಶಿವರಾಜ್​ಕುಮಾರ್​, ಸುದೀಪ್​, ಯಶ್​, ಪುನೀತ್​, ನಿರ್ಮಾಪಕರಾದ ರಾಕ್​ಲೈನ್​ ವೆಂಕಟೇಶ್​, ವಿಜಯ್​ ಕಿರಗಂದೂರ್​, ಸಿ.ಆರ್​. ಮನೋಹರ್​, ಜಯಣ್ಣ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp