ಕೊರೋನಾ ವೈರಸ್​​: ಬೆಂಗಳೂರಿನ 38 ವಾರ್ಡ್ ​​ಗಳನ್ನು ಹಾಟ್​ಸ್ಪಾಟ್​​​ ಎಂದು ಗುರುತಿಸಿದ ಬಿಬಿಎಂಪಿ

ಪ್ರಮುಖ ಬೆಳವಣಿಗೆಯಲ್ಲಿ ಅತ್ತ ಕೇಂದ್ರ ಸರ್ಕಾರ ದೇಶದ 170ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಘೋಷಿಸಿದ ಬೆನ್ನಲ್ಲೇ ಇತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೂಡ ತನ್ನ ವ್ಯಾಪ್ತಿಯಲ್ಲಿ ಬರುವ ಬೆಂಗಳೂರಿನ 38 ವಾರ್ಡ್ ಗಳನ್ನು ಗಳನ್ನು ಹಾಟ್​ಸ್ಪಾಟ್​​​ ಎಂದು ಗುರುತಿಸಿದೆ.
ಬೆಂಗಳೂರಿನಲ್ಲಿ ಲಾಕ್ ಡೌನ್
ಬೆಂಗಳೂರಿನಲ್ಲಿ ಲಾಕ್ ಡೌನ್
Updated on: 

ಬೆಂಗಳೂರು: ಪ್ರಮುಖ ಬೆಳವಣಿಗೆಯಲ್ಲಿ ಅತ್ತ ಕೇಂದ್ರ ಸರ್ಕಾರ ದೇಶದ 170ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಘೋಷಿಸಿದ ಬೆನ್ನಲ್ಲೇ ಇತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೂಡ ತನ್ನ ವ್ಯಾಪ್ತಿಯಲ್ಲಿ ಬರುವ ಬೆಂಗಳೂರಿನ 38 ವಾರ್ಡ್ ಗಳನ್ನು ಗಳನ್ನು ಹಾಟ್​ಸ್ಪಾಟ್​​​ ಎಂದು ಗುರುತಿಸಿದೆ.

ಕರ್ನಾಟಕದಲ್ಲಿ ಕೊರೋನಾ ವೈರಸ್​​ ಆರ್ಭಟ ಮುಂದುವರಿದಿದೆ. ಬೆಂಗಳೂರು, ಮೈಸೂರು, ಬೀದರ್​​​, ಕಲಬುರ್ಗಿ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಕೊರೋನಾಗೆ ಬಲಿಯಾಗುವವರ ಸಂಖ್ಯೆ ಏರುತ್ತಲೇ ಇದೆ. ಹೀಗಿರುವಾಗಲೇ ನಿನ್ನೆ ಬೃಹತ್​​ ಬೆಂಗಳೂರು  ಮಹಾನಗರ ಪಾಲಿಕೆ ನಗರದಲ್ಲಿ 38 ವಾರ್ಡ್​​ಗಳನ್ನು ಹಾಟ್​​ಸ್ಪಾಟ್ ಎಂದು ಗುರುತಿಸಿತ್ತು. ಆದರೀಗ ಬಿಬಿಎಂಪಿ ಆದೇಶ ಬದಲಾಗಿದ್ದು, ಕೇವಲ 32 ವಾರ್ಡ್​ಗಳನ್ನು ಮಾತ್ರ ಹಾಟ್​​ ಸ್ಪಾಟ್​​ ಎಂದು ಘೋಷಿಸಲಾಗಿದೆ.  

ದಕ್ಷಿಣ ಮತ್ತು ಪೂರ್ವ ವಲಯದ 9, ಮಹದೇವಪುರ ಮತ್ತು ಪಶ್ಚಿಮ ವಲಯದ ತಲಾ 5, ಯಲಹಂಕದ 2, ಬೊಮ್ಮನಹಳ್ಳಿ ಮತ್ತು ಆರ್ ಆರ್ ನಗರ ವಲಯದ ತಲಾ 1 ವಾರ್ಡ್​ಗಳನ್ನು ಬೆಂಗಳೂರಿನ ಕೊರೋನಾ ಹಾಟ್​ಸ್ಪಾಟ್​​ಗಳು ಎಂದು ಗುರುತಿಸಲಾಗಿದೆ. ಇನ್ನು, ಹಾಟ್​ಸ್ಪಾಟ್​ ಜತೆಗೆ ರೆಡ್​​ ಜೋನ್​​​, ಗ್ರೀನ್​​​ ಜೋನ್​​, ಆರೆಂಜ್​​ ಜೋನ್​ ಎಂದು ಸೋಂಕಿತರ ಸಂಖ್ಯೆ ಮತ್ತು ಕೊರೋನಾ ತೀವ್ರತೆ ಆಧಾರದ ಮೇರೆಗೆ ಕೆಲವು ಪ್ರದೇಶಗಳನ್ನು ಸದ್ಯದಲ್ಲೇ ಗುರುತಿಸಲಿದೆ.

ಬಿಬಿಎಂ ಘೋಷಣೆ ಮಾಡಿರುವ 32 ಹಾಟ್ ಸ್ಪಾಟ್ ವಾರ್ಡ್ ಗಳ ಪಟ್ಟಿ ಇಂತಿದೆ.
ಬೊಮ್ಮನಹಳ್ಳಿ ಝೋನ್ 

ಸಿಂಗಸಂದ್ರ ವಾರ್ಡ್

ಮಹದೇವಪುರ ಝೋನ್
ಹಗದೂರು ವಾರ್ಡ್, ಗರುಡಾಚಾರ್ ಪಾಳ್ಯ ವಾರ್ಡ್, ವರ್ತೂರು ವಾರ್ಡ್, ಹೂಡಿ ವಾರ್ಡ್, ಹೊರಮಾವು ವಾರ್ಡ್

ಈಸ್ಟ್ ಝೋನ್
ವಸಂತ್ ನಗರ ವಾರ್ಡ್, ಲಿಂಗರಾಜಪುರ ವಾರ್ಡ್, ಜೀವನ್‌ಭಿಮಾ ನಗರ ವಾರ್ಡ್, ರಾಧಾಕೃಷ್ಣ ಟೆಂಪಲ್ ವಾರ್ಡ್, ಸಿ.ವಿ.ರಾಮನ್ ನಗರ ವಾರ್ಡ್, ರಾಮಸ್ವಾಮಿ ಪಾಳ್ಯ ವಾರ್ಡ್, ಮಾರುತಿ ಸೇವಾ ನಗರ ವಾರ್ಡ್, ದೊಮ್ಮಲೂರು ವಾರ್ಡ್, ಸಂಪಂಗಿರಾಮನಗರ  ವಾರ್ಡ್

ಸೌಥ್ ಝೋನ್
ಸುಧಾಮನಗರ ವಾರ್ಡ್, ಕರೀಸಂದ್ರ ವಾರ್ಡ್, ಈಜಿಪುರ ವಾರ್ಡ್, ಗುರಪ್ಪನಪಾಳ್ಯ ವಾರ್ಡ್, ಅತ್ತಿಗುಪ್ಪೆ ವಾರ್ಡ್, ಶಾಕಾಂಬರಿ ನಗರ ವಾರ್ಡ್, ಜೆ.ಪಿ.ನಗರ ವಾರ್ಡ್, ಬಾಪೂಜಿನಗರ ವಾರ್ಡ್, ಹೊಸಹಳ್ಳಿ ವಾರ್ಡ್

ವೆಸ್ಟ್ ಝೋನ್
ನಾಗಪುರ ವಾರ್ಡ್, ಸುಭಾಶ್ ನಗರ ವಾರ್ಡ್, ಶಿವನಗರ ವಾರ್ಡ್, ಪಾದರಾಯನಪುರ ವಾರ್ಡ್, ಕೆ.ಆರ್.ಮರ್ಕೆಟ್ ವಾರ್ಡ್

ಯಲಹಂಕ ಝೋನ್
ಥಣಿಸಂದ್ರ ವಾರ್ಡ್, ಬ್ಯಾಟರಾಯನಪುರ ವಾರ್ಡ್

ಆರ್ ಆರ್ ನಗರ ಝೋನ್ 
ಆರ್. ಆರ್. ನಗರ ವಾರ್ಡ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com