ಕೊರೋನಾ ವೈರಸ್: ಕರ್ನಾಟಕದಲ್ಲಿ ಮತ್ತೆ 38 ಪಾಸಿಟಿವ್ ಪ್ರಕರಣ, ಸೋಂಕಿತರ ಸಂಖ್ಯೆ 353ಕ್ಕೆ ಏರಿಕೆ

ಬೆಂಗಳೂರು: ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್ ಅರ್ಭಟ ಮುಂದುವರೆದಿದ್ದು ಒಂದೇ ದಿನ ರಾಜ್ಯದಲ್ಲಿ ಸುಮಾರು 38 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ ವೈರಸ್ ಸೋಂಕಿತರ ಸಂಖ್ಯೆ 353ಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 38 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 353ಕ್ಕೆ ಏರಿಕೆಯಾಗಿದೆ. 38 ಮಂದಿ ಸೋಂಕಿತರ ಪೈಕಿ ಬೆಂಗಳೂರಿನಲ್ಲಿ 9, ಮಂಡ್ಯ 3, ಮೈಸೂರಿನಲ್ಲಿ 12, ಚಿಕ್ಕಬಳ್ಳಾಪುರದಲ್ಲಿ 3, ಹೊಸಪೇಟೆ 7, ಬೀದರ್ 1, ದಕ್ಷಿಣ ಕನ್ನಡ 1, ವಿಜಯಪುರದಲ್ಲಿ ಮತ್ತೆ ಇಬ್ಬರು ಸೋಂಕಿಗೆ ತುತ್ತಾಗಿದ್ದಾರೆ. ಆ ಮೂಲಕ ರಾಜ್ಯಾದ್ಯಂತ ಇಂದು ಒಟ್ಟಾರೆ 38 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಆತಂಕಕಾರಿ ಬೆಳವಣಿಗೆ, ಒಂದೇ ದಿನದಲ್ಲಿ 38 ಪ್ರಕರಣ
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಆತಂಕಕಾರಿಯಾಗಿ ಏರಿಕೆಯಾಗುತ್ತಲೇ ಇದೆ. ಗುರುವಾರ ಸಂಜೆ 5ರಿಂದ ಶುಕ್ರವಾರ ಮಧ್ಯಾಹ್ನದವರೆಗೆ 38 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 353ಕ್ಕೇರಿಕೆಯಾಗಿದ್ದು, 13 ಮಂದಿ ಮೃತಪಟ್ಟಿದ್ದಾರೆ. ಒಟ್ಟು 82 ಜನರು ಚೇತರಿಕೆ ಕಂಡಿದ್ದಾರೆ. ಬೆಂಗಳೂರು ನಗರದ 11 ವರ್ಷದ ಹೆಣ್ಣು ಮಗು, 55 ವರ್ಷದ ವೃದ್ಧನಲ್ಲಿ ಸೋಂಕು ಇರುವುದು ವರದಿಯಾಗಿದೆ. ಮೈಸೂರು ನಂಜನಗೂಡಿನಲ್ಲಿ ಒಟ್ಟು 10 ಜನರು ಸೋಂಕಿಗೆ ಗುರಿಯಾಗಿದ್ದಾರೆ.50, 33, 33, 22, 38,26,28,22, 29, 26 ವರ್ಷದ ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಬಳ್ಳಾರಿ ಹೊಸಪೇಟೆಯ 10 ವರ್ಷದ ಮಗು ಸೇರಿ 39, 68 21,48,50,24 ವರ್ಷ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ. ಮೈಸೂರಿನಲ್ಲಿ 41, 38 ವರ್ಷದ ಮಹಿಳೆ,ಮಂಡ್ಯ ಮಳವಳ್ಳಿ 25, 29 ಹಾಗೂ 45 ವರ್ಷದ ವ್ಯಕ್ತಿಗಳು, ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ 39 ವರ್ಷದ ಪುರುಷ, ಬೆಂಗಳೂರು ನಗರದ 6 ವರ್ಷದ ಗಂಡು ಮಗು, 25 ವರ್ಷದ ಮಹಿಳೆ, ಬೀದರ್ ನ 18 ವರ್ಷದ ಯುವಕ, ವಿಜಯಪುರದಲ್ಲಿ 6 ವರ್ಷ ಗಂಡು ಮಗು, 28 ವರ್ಷದ ಮಹಿಳೆ, ಚಿಕ್ಕಬಳ್ಳಾಪುರದ 9 ವರ್ಷದ ಮಗು ಸೇರಿ 36, 20 ವರ್ಷದ ವ್ಯಕ್ತಿಗಳು, ಬೆಂಗಳೂರು ನಗರದ 64 ವರ್ಷದ ವೃದ್ಧೆ, 32, 23, 28, 21 ವರ್ಷದ ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


