ಬಾಗಲಕೋಟೆ: ಕೋವಿಡ್ ಸೋಂಕಿತ ವ್ಯಕ್ತಿಯ ತಾಯಿ ಹೃದಯಾಘಾತದಿಂದ ಸಾವು

ಕೋವಿಡ್ ಸೋಂಕಿತ ವ್ಯಕ್ತಿಯ ತಾಯಿ  ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಮಖಂಡಿಯಲ್ಲಿ ಶನಿವಾರ ರಾತ್ರಿ  ನಡೆದಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಾಗಲಕೋಟೆ: ಕೋವಿಡ್ ಸೋಂಕಿತ ವ್ಯಕ್ತಿಯ ತಾಯಿ  ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಮಖಂಡಿಯಲ್ಲಿ ಶನಿವಾರ ರಾತ್ರಿ  ನಡೆದಿದೆ

ಹೃದಯಾಘಾತದಿಂದ ಮೃತಪಟಿರುವ ೭೧ ವರ್ಷದ ವಯೋವೃದ್ಧೆಗೆ ಯಾವುದೇ ರೀತಿಯ ಕೋವಿಡ್ ಲಕ್ಷಣಗಳು ಇರಲಿಲ್ಲ ಎಂದು ಜಮಖಂಡಿಯ ತಾಲೂಕು ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಗನಿಗೆ ಸೋಂಕು ಇರುವುದು ಸಂಜೆ ದೃಢಪಟ್ಟಿತ್ತು.

ವಯೋವೃದ್ಧೆ ಅಧಿಕ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದರು ಎಂಬುದು ತಿಳಿದುಬಂದಿದೆ. ಮಗನಿಗೆ ಸೋಂಕು ದೃಢವಾದ ಸುದ್ದಿ ತಿಳಿದು ಬೇಸರಗೊಂಡಿದ್ದ ಅವರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ 

ಮೃತ ವೃದ್ಧೆಯನ್ನು ಕೋವಿಡ್-19 ನಿಯಾಮವಳಿ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com