ಸೇತು ಸೇವೆ: ನೋಯ್ಡಾದಿಂದ ಬೆಂಗಳೂರಿಗೆ ಬಂತು ಔಷಧಗಳು! 

ಭಾರತದ ಆಡಳಿತ ಯಂತ್ರ, ಸಂಸ್ಥೆಗಳು ಜನರ ಸಂಕಷ್ಟದ ಸ್ಥಿತಿಯಲ್ಲಿ ಹೇಗೆ ನೆರವಾಗುತ್ತವೆ ಎಂಬುದನ್ನು ಕೊರೋನಾ ಲಾಕ್ ಡೌನ್ ಪದೇ ಪದೇ ನಿರೂಪಿಸುತ್ತಿದೆ. 
ಇಂದು ತಲ್ರೆಜಾ-ಅಶೋಕ್ ಕುಮಾರ್ ತಲ್ರೆಜಾ
ಇಂದು ತಲ್ರೆಜಾ-ಅಶೋಕ್ ಕುಮಾರ್ ತಲ್ರೆಜಾ
Updated on: 

ಬೆಂಗಳೂರು: ಭಾರತದ ಆಡಳಿತ ಯಂತ್ರ, ಸಂಸ್ಥೆಗಳು ಜನರ ಸಂಕಷ್ಟದ ಸ್ಥಿತಿಯಲ್ಲಿ ಹೇಗೆ ನೆರವಾಗುತ್ತವೆ ಎಂಬುದನ್ನು ಕೊರೋನಾ ಲಾಕ್ ಡೌನ್ ಪದೇ ಪದೇ ನಿರೂಪಿಸುತ್ತಿದೆ. 

ಸಾವಿರಾರು, ನೂರಾರು ಕಿ.ಮೀ ದೂರವಿರುವ ವ್ಯಕ್ತಿಗಳಿಗೆ ಅಗತ್ಯವಿರುವ ಔಷಧಗಳನ್ನು ತಲುಪಿಸುತ್ತಿರುವ ಅನೇಕ ವರದಿಗಳನ್ನು ನೀವು ಓದಿರುತ್ತೀರಿ, ಅಂಥಹದ್ದೇ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ರೈಲ್ವೆ ಇಲಾಖೆಯ ಐಆರ್ ಟಿಎಸ್ ಪ್ರಾರಂಭಿಸಿರುವ ಸೇತು ಆಪ್ ಬೆಂಗಳೂರಿಗೆ ನೋಯ್ಡಾದಿಂದ ಔಷಧಗಳು ತಲುಪುವಂತೆ ಮಾಡಲು ಸಾಧ್ಯವಾಗಿಸಿದೆ.

ಬೆಂಗಳೂರಿನ ವರ್ತೂರು ನಿವಾಸಿಯಾಗಿರುವ ಇಂದು ತಲ್ರೆಜಾ (63) ಎಂಬುವವರು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹೋಮಿಯೋಪತಿ ವೈದ್ಯರು ನೀಡುರುವ ಔಷಧಗಳನ್ನು ದಿನ ನಿತ್ಯ ಸೇವಿಸಬೇಕಾಗುತ್ತದೆ. ಔಷಧಗಳು ಮುಕ್ತಾಯಗೊಂಡಿದ್ದರಿಂದ ಹೆದರಿದ್ದರು. ಆದರೆ ಅವರಿಗೆ ಸಕಾಲದಲ್ಲಿ ಔಷಧ ಲಭ್ಯವಾಗುವಂತೆ ಮಾಡಿದ್ದು ರೈಲ್ವೆ ಇಲಾಖೆಯ ಸೇತು ಆಪ್.  ದೊಮ್ಮಲೂರಿನಲ್ಲಿರುವ ಸೌಮ್ಯ ತಲ್ರೆಜಾ ಇಂದು ತಲ್ರೆಜಾ-ಅಶೋಕ್ ಕುಮಾರ್ ತಲ್ರೆಜಾ ಅವರ ಪುತ್ರಿ. "ದಿನನಿತ್ಯ ಸೇವಿಸುವ ಔಷಧಗಳು ಮುಗಿದಿರುವ ಹಿನ್ನೆಲೆಯಲ್ಲಿ ಅವುಗಳನ್ನು ತರಿಸಿಕೊಳ್ಳುವುದಕ್ಕೆ ಖಾಸಗಿ ಕೊರಿಯರ್ ಸೇವೆಗಳನ್ನು ಸಂಪರ್ಕಿಸಲು ಯತ್ನಿಸಿದ್ದೆ. ಆದರೆ ಅವರೆಲ್ಲರೂ ಕನಿಷ್ಟ 50 ಕೆ.ಜಿಯಷ್ಟು ಸರಕುಗಳಿದ್ದರೆ ಮಾತ್ರ ಬುಕಿಂಗ್ ಸ್ವೀಕರಿಸುವುದಾಗಿ ತಿಳಿಸಿದ್ದರು. ಈ ಮಾಹಿತಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದೆ. ಇದನ್ನು ಗಮನಿಸಿದ ಸೇತು ಆಪ್ ನ ರೈಲ್ವೆ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿ ನೋಯ್ಡಾದಿಂದ ಬೆಂಗಳೂರಿಗೆ ಮಾತ್ರೆಗಳನ್ನು ತಲುಪಿಸಿದ್ದಾರೆ. ಬೆಂಗಳೂರಿನಲ್ಲಿರುವ ಇಲಾಖೆಯ ಅಧಿಕಾರಿಗಳು ನಮ್ಮ ಮನೆಗೆ ಅದನ್ನು ತಲುಪಿಸಿದ್ದಾರೆ ಎಂದು ಧನ್ಯವಾದ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com