ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಾಕಾರಗೊಂಡಾಗಲೇ ರಾಜಕೀಯ ಸ್ವಾತಂತ್ರ್ಯ ಪರಿಪೂರ್ಣ: ಸಿದ್ದರಾಮಯ್ಯ

ನಾಡಿನ‌ ಸಮಸ್ತ ಜನಕೋಟಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಭಕೋರಿದ್ದಾರೆ. 
ಸಿದ್ದರಾಮಯ್ಯ ಟ್ವೀಟ್
ಸಿದ್ದರಾಮಯ್ಯ ಟ್ವೀಟ್
Updated on: 

ಬೆಂಗಳೂರು: ನಾಡಿನ‌ ಸಮಸ್ತ ಜನಕೋಟಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ಶುಭಕೋರಿದ್ದಾರೆ. 

ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಾಕಾರಗೊಂಡಾಗಲೇ ರಾಜಕೀಯ ಸ್ವಾತಂತ್ರ್ಯ ಪರಿಪೂರ್ಣಗೊಳ್ಳುವುದು. ಆ ದಿಕ್ಕಿನೆಡೆಗೆ ದೃಢಚಿತ್ತದಿಂದ ಹೆಜ್ಜೆ ಹಾಕುವ ಸಂಕಲ್ಪವನ್ನು 74ನೇ ಸ್ವಾತಂತ್ರ್ಯೊತ್ಸವದ ದಿನ ನಾವೆಲ್ಲರೂ ಕೈಗೊಳ್ಳೋಣ ಎಂದು ಟ್ವೀಟ್ ಮಾಡಿದ್ದಾರೆ.

ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ, ವೀರ ಸಂಗೊಳ್ಳಿ ರಾಯಣ್ಣನವರಂತಹ ದೇಶಪ್ರೇಮಿಗಳ ತ್ಯಾಗ-ಬಲಿದಾನದ ಫಲ. ಈ ಸ್ವಾತಂತ್ರ್ಯವನ್ನು ರಕ್ಷಿಸಿ ಉಳಿಸಿಕೊಳ್ಳುವ ನಿರಂತರ ಹೋರಾಟದಲ್ಲಿ ನಾವು ವಿರಮಿಸದಂತೆ ಸಂಗೊಳ್ಳಿ ರಾಯಣ್ಣನ ಸಾಹಸಗಾಥೆ ಸದಾ ಎಚ್ಚರಿಸುತಿರಲಿ. ನಿತ್ಯ ಸ್ಮರಣೀಯ ರಾಯಣ್ಣನಿಗೆ ನನ್ನ ಗೌರವದ ನಮನ ಎಂದು ಟ್ವೀಟ್
ಸಂದೇಶದ ಮೂಲಕ ತಿಳಿಸಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com