ರಾಜ್ಯ

ಹೊಯ್ಸಳ ವಾಹನದಲ್ಲಿದ್ದ ಟ್ಯಾಬ್ ಅನ್ನೇ ಎಗರಿಸಿದ ಖತರ್ನಾಕ್ ಕಳ್ಳ!, ಬೇಸ್ತು ಬಿದ್ದ ಪೊಲೀಸರು

ಹೊಯ್ಸಳ ವಾಹನದಲ್ಲಿದ್ದ ಟ್ಯಾಬ್ ಅನ್ನೇ ಎಗರಿಸಿದ ಖತರ್ನಾಕ್ ಕಳ್ಳ!, ಬೇಸ್ತು ಬಿದ್ದ ಪೊಲೀಸರು
ಸಂಗ್ರಹ ಚಿತ್ರ
Published On :

ಬೆಂಗಳೂರು: ರಸ್ತೆಯಲ್ಲಿ ನಡೆಯುತ್ತಿದ್ದ ಗಲಾಟೆ ನಿಯಂತ್ರಿಸಲು ಪೊಲೀಸರು ಹೋಗಿದ್ದಾಗ, ಅವರ ಹೊಯ್ಸಳ ವಾಹನದಲ್ಲಿದ್ದ ಟ್ಯಾಬ್ ಅನ್ನೇ ಖತರ್ನಾಕ್ ಕಳ್ಳ ಕದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಹೊಯ್ಸಳ ಗಸ್ತು ವಾಹನದಲ್ಲಿ ಕರ್ತವ್ಯನಿರತರಾಗಿದ್ದ ಕೇಶವ್ ರೆಡ್ಡಿ ಎಂಬುವವರು ದೂರು ಸಲ್ಲಿಕೆ ಮಾಡಿದ್ದಾರೆ. 

ಪೊಲೀಸ್ ಮೂಲಗಳ ಪ್ರಕಾರ ಕೇಶವ್ ರೆಡ್ಡಿ ಹಾಗೂ ಕಾನ್ ಸ್ಟೇಬಲ್ ದರ್ಶನ್ ಎಂಬುವವರು ರಾತ್ರಿ ಪಾಳಿ ಕರ್ತವ್ಯ ನಿರತರಾಗಿದ್ದರು. ಪೊಲೀಸ್ ನಿಯಂತ್ರಣ ಕೊಠಡಿಯಿಂದ ಕರೆ ಮಾಡಿದ್ದ ಸಿಬ್ಬಂದಿ, ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಇಂದಿರಾನಗರದ ಮುಖ್ಯರಸ್ತೆಯಲ್ಲಿ ಗಲಾಟೆ ನಡೆಯುತ್ತಿದೆ ಎಂಬ ಸಂದೇಶ ಬಂದಿದೆ. ಅದರಂತೆ ಸ್ಥಳಕ್ಕೆ ಇಬ್ಬರೂ ದೌಡಾಯಿಸಿದ್ದು, ಈ ವೇಳೆ ರಸ್ತೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿ ಗಲಾಟೆಯಲ್ಲಿ ತೊಡಗಿದ್ದರು. 

ಅಕ್ರಮ ಸಂಬಂಧ ಪ್ರಕರಣಕ್ಕೆ ಸಂಬಂಧಿಸಿದಂತೆ 2 ಕುಟುಂಬಗಳು ರಾತ್ರಿ ಗಲಾಟೆಯಲ್ಲಿ ತೊಡಗಿತ್ತು. ಇದನ್ನು ಕಂಡ ದರ್ಶನ್ ಹಾಗೂ ಕೇಶವ್ ರೆಡ್ಡಿ ವಾಹನದಿಂದ ಕೆಳಗೆ ಇಳಿದು ಗಲಾಟೆ ನಿಯಂತ್ರಿಸಲು ತೆರಳಿದ್ದಾರೆ. ಗಲಾಟೆ ನಿಯಂತ್ರಿಸಿ ಮತ್ತೆ ವಾಹನಕ್ಕೆ ವಾಪಸ್ ಆದಾಗ ವಾಹನದಲ್ಲಿದ್ದ ಇಲಾಖೆಯ ಟ್ಯಾಬ್ ಕಳ್ಳತನವಾಗಿತ್ತು. ಸಿಬ್ಬಂದಿಗಳು ಗಲಾಟೆ ಬಿಡಿಸುವುದರಲ್ಲಿ ಮಗ್ನವಾಗಿದ್ದಾಗಲೇ ಖತರ್ನಾಕ್ ಕಳ್ಳರು ಪೊಲೀಸರ ವಾಹನದಲ್ಲಿದ್ದ ಟ್ಯಾಬ್ ಅನ್ನೇ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. 

ಇದರಿಂದ ಹೌಹಾರಿದ ಇಬ್ಬರೂ ಸಿಬ್ಬಂದಿಗಳು ಕೂಡಲೇ ಠಾಣೆಗೆ ತೆರಳಿ ಕಳ್ಳತನ ಸಂಬಂಧ ಎಫ್ ಐಆರ್ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.