ಬೆಂಗಳೂರು: ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಸೀನ ಅಲಿಯಾಸ್ ಸೀಗಡಿ ಸೀನನ ಕಾಲಿಗೆ ಪೊಲೀಸರು ಗುಂಡು
ಹಾರಿಸಿ ನಗರದ ಜಾಲಹಳ್ಳಿಯಲ್ಲಿ ಬಂಧಿಸಿದ್ದಾರೆ.
ರಾಜಗೋಪಾಲನಗರ ಠಾಣೆಯಲ್ಲಿ ಸೀನ ರೌಡಿ ಶೀಟರ್ ಪಟ್ಟಿಯಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆ ಬದಿ ನಿಲ್ಲಿಸಿದ ವಾಹನ ಜಖಂ ಪ್ರಕರಣ ಸಂಬಂಧಿಸಿದಂತೆ ಖಚಿತ ಮಾಹಿತಿ ಮೇರೆಗೆ ರಾಜಗೋಪಾಲನಗರ ಇನ್ಸ್ಪೆಕ್ಟರ್ ದಿನೇಶ್ ಪಾಟೀಲ್ ಮತ್ತು ಸಿಬ್ಬಂದಿ ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿ ಸೀನ, ಪೊಲೀಸ್ ಪೇದೆ ವೀರಭದ್ರಪ್ಪ ಅವರ ಕೈಗೆ ಚಾಕುವಿನಿಂದ ತಿವಿದು ಹಲ್ಲೆಗೆ ಯತ್ನಿಸಿದ್ದಾನೆ. ಆ ವೇಳೆ ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ದಿನೇಶ್ ಪಾಟೀಲ್ ಗುಂಡು ಹಾರಿಸಿದ್ದಾರೆ.
ರಾಜಗೋಪಾಲನಗರದಲ್ಲಿ 11 ಆಟೋ ಹಾಗೂ 4 ಕಾರಿನ ಗಾಜು ಒಡೆದಿದ್ದ ಆರೋಪ ಸೀನನ ಮೇಲಿದೆ. ಘಟನೆಯಲ್ಲಿ ಗಾಯಗೊಂಡ ಪೇದೆಯನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
Advertisement