ಮಹಿಳಾ ದಿನಕ್ಕೆ 'ನಿರ್ಭಯ ಸಮಾಜ ಕಟ್ಟೋಣ' ಎಂದ ಪವರ್ ಸ್ಟಾರ್ ಪುನೀತ್, ಬಿಎಂಟಿಸಿ ವಿಡಿಯೋ!

ಮಾರ್ಚ್ 20ಕ್ಕೆ ನಿರ್ಭಯ ಅತ್ಯಾಚಾರಿಗಳಿಗೆ ಡೆಟ್ ವಾರಂಟ್ ಗೆ ಆದೇಶಿಸಲಾಗಿದ್ದು ಇನ್ನು ನಾಳೆ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳಾ ಜಾಗೃತಿ ಕುರಿತು ಸಮಾಜಕ್ಕೆ ನಟ ಪುನೀತ್ ರಾಜಕುಮಾರ್ ಪವರ್ ಫುಲ್ ಸಂದೇಶ ನೀಡಿದ್ದಾರೆ.
ಪುನೀತ್ ರಾಜಕುಮಾರ್
ಪುನೀತ್ ರಾಜಕುಮಾರ್

ಬೆಂಗಳೂರು: ಮಾರ್ಚ್ 20ಕ್ಕೆ ನಿರ್ಭಯ ಅತ್ಯಾಚಾರಿಗಳಿಗೆ ಡೆಟ್ ವಾರಂಟ್ ಗೆ ಆದೇಶಿಸಲಾಗಿದ್ದು ಇನ್ನು ನಾಳೆ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳಾ ಜಾಗೃತಿ ಕುರಿತು ಸಮಾಜಕ್ಕೆ ನಟ ಪುನೀತ್ ರಾಜಕುಮಾರ್ ಪವರ್ ಫುಲ್ ಸಂದೇಶ ನೀಡಿದ್ದಾರೆ.

ಮಾರ್ಚ್ 8ರಂದು ಮಹಿಳಾ ದಿನಾಚರಣೆಗಾಗಿ ಬಿಎಂಟಿಸಿ ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಬಿಎಂಟಿಸಿ ತನ್ನ ರಾಯಭಾರಿ ಪುನೀತ್ ರಾಜಕುಮಾರ್ ಮೂಲಕ ಉತ್ತಮ ಸಂದೇಶ ನೀಡಿದೆ. 

ಕೆಲವೊಮ್ಮೆ, ಸಮಾಜವನ್ನು ಉತ್ತಮಗೊಳಿಸಲು ಬೇಕಾಗಿರುವುದು ಒಗ್ಗಟ್ಟು..!!  ಈ ಮಹಿಳಾ ದಿನದಂದು ನಮ್ಮಲ್ಲಿರುವ ಏಕತೆಯನ್ನು ಕಂಡು ಕೊಳ್ಳೋಣ ಹಾಗೂ ಮಹಿಳೆಯರಿಗಾಗಿ ಎಲ್ಲೆಡೆ ಒಟ್ಟಾಗಿ ನಿಲ್ಲೋಣ ಎಂದು ಕರೆ ನೀಡಿದೆ. 

ಇನ್ನು ಈ ವಿಡಿಯೋದಲ್ಲಿ ಮಹಿಳೆಯನ್ನು ಚುಡಾಯಿಸುವ ಪುಂಡರ ವಿರುದ್ಧ ಸುತ್ತಲ ಸಾರ್ವಜನಿಕರೆಲ್ಲರೂ ಒಟ್ಟಾಗಿ ನಿಂತು ಆಕೆಗೆ ಧೈರ್ಯ ನೀಡುವ ದೃಶ್ಯವಿದೆ. ಇದೇ ವೇಳೆ ನೀವು ಬರ್ತೀರಾ? ಎಲ್ಲರೂ ಸೇರಿ ನಿರ್ಭಯ ಸಮಾಜ ಕಟ್ಟೋಣ ಅಂತಾ ಪುನೀತ್ ಕೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com