

ಚಾಮರಾಜನಗರ: ವಿವಾಹಿತ ಮಹಿಳೆ ಜತೆಗೆ ಕಿರಿಯ ಪುತ್ರ ಪರಾರಿಯಾದ ಹಿನ್ನೆಲೆಯಲ್ಲಿ ಅವಮಾನ ತಾಳಲಾರದೆ ತಾಯಿ, ಸಹೋದರ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಯೊಂದು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೆಳಚವಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ತಾಯಿ ಸುಬ್ಬಮ್ಮ (40), ಸಹೋದರ ಸಿದ್ಧರಾಜು (26) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಿರಿಯ ಮಗ ನಂಜುಂಡಿ ಅದೇ ಗ್ರಾಮದ ವಿವಾಹಿತ ಮಂಜುಳಾ ಎಂಬ ಮಹಿಳೆಯೊಂದಿಗೆ ಪರಾರಿಯಾಗಿದ್ದನು. ಈ ಹಿನ್ನೆಲೆಯಲ್ಲಿ ಅವಮಾನ ತಾಳಲಾರದೇ, ತಾಯಿ ಹಾಗೂ ಆತನ ಸಹೋದರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.