ಬೆಂಗಳೂರು: ಪಾದಚಾರಿಗೆ ಬೈಕ್ ಡಿಕ್ಕಿ: ಎಚ್‌ಎಎಲ್ ನಿವೃತ್ತ ಉದ್ಯೋಗಿ ಸಾವು

ಪಾದಚಾರಿಗ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನಿವೃತ್ತ ಉದ್ಯೋಗಿ ಒಬ್ಬರು ಮೃತಪಟ್ಟಿರುವ ಘಟನೆ ಎನ್ ಜಿಇ ಎಫ್ ಜಂಕ್ಷನ್ ಬಳಿ‌ ಸೋಮವಾರ ರಾತ್ರಿ ಸಂಭವಿಸಿದೆ.
ಅಪಘಾತ
ಅಪಘಾತ
Updated on: 

ಬೆಂಗಳೂರು: ಪಾದಚಾರಿಗ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನಿವೃತ್ತ ಉದ್ಯೋಗಿ ಒಬ್ಬರು ಮೃತಪಟ್ಟಿರುವ ಘಟನೆ ಎನ್ ಜಿಇ ಎಫ್ ಜಂಕ್ಷನ್ ಬಳಿ‌ ಸೋಮವಾರ ರಾತ್ರಿ ಸಂಭವಿಸಿದೆ.

ಹೆಚ್ ಎಎಲ್ ನ ನಿವೃತ್ತ ಉದ್ಯೋಗಿ ಸಂಪತ್ (69) ಮೃತ ದುರ್ದೈವಿ. ಮೃತರು ಸೋಮವಾರ ರಾತ್ರಿ 9.30ಕ್ಕೆ ಪತ್ನಿ ಚಿತ್ರವತಿ ಅವರೊಂದಿಗೆ ಎಸ್ ಡಿ ರಸ್ತೆ ಯ ಎಡಿಎ ಗೇಟ್ ಬಳಿಯಿಂದ ಬಿಇಎಮ್ ಎಲ್ ಜಂಕ್ಷನ್ ಮಾರ್ಗವಾಗಿ ಎನ್ ಜಿಇಎಫ್ ಜಂಕ್ಷನ್ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಎದುರಿನಿಂದ ನೋಂದಣಿ ಸಂಖ್ಯೆ ಇಲ್ಲದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. 

ಪರಿಣಾಮ ಅವರ ಕೆಳಗೆ ಬಿದ್ದಿದ್ದು, ತಲೆ, ದೇಹದ ಭಾಗಗಳಲ್ಲಿ ಗಂಭೀರ ಗಾಯಗಳಾಗಿದ್ದ ಪರಿಣಾಮ ಮೃತಪಟ್ಟಿದ್ದಾರೆ‌ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜೆಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com