ರಾಜ್ಯ

ಲಾಕ್ ಡೌನ್ 3.0 ಘೋಷಣೆ ಬೆನ್ನಲ್ಲೇ ಬೆಂಗಳೂರು ಕಂಟೈನ್ ಮೆಂಟ್ ಝೋನ್ ಪಟ್ಟಿ ಪರಿಷ್ಕರಿಸಿದ ಬಿಬಿಎಂಪಿ

ಲಾಕ್ ಡೌನ್ 3.0 ಘೋಷಣೆ ಬೆನ್ನಲ್ಲೇ ಬೆಂಗಳೂರು ಕಂಟೈನ್ ಮೆಂಟ್ ಝೋನ್ ಪಟ್ಟಿ ಪರಿಷ್ಕರಿಸಿದ ಬಿಬಿಎಂಪಿ
ಸಂಗ್ರಹ ಚಿತ್ರ
Published On :

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ 2 ವಾರಗಳ ಲಾಕ್ ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಯ ವಾರ್ಡ್ ಗಳ ಕಂಟೈನ್ ಮೆಂಟ್ ಝೋನ್ ಗಳನ್ನು ಪರಿಷ್ಕರಿಸಿದೆ.

ಈ ಹಿಂದೆ ನಗರದ 23 ವಾರ್ಡ್ ಗಳನ್ನು ಕಂಟೈನ್ ಮೆಂಟ್ ಝೋನ್ ಪಟ್ಟಿಯನ್ನು ಇದೀಗ ಬಿಬಿಎಂಪಿ 23 ರಿಂದ 26ಕ್ಕೆ ಏರಿಕೆ ಮಾಡಿದೆ. ಈ ಹಿಂದೆ 23ರಷ್ಟಿದ್ದ ಬೆಂಗಳೂರಿನ ಕಂಟೈನ್ ಮೆಂಟ್ ಝೋನ್ ಗಳ ಪಟ್ಟಿಗೆ ಇದೀಗ ಮತ್ತೆ ಮೂರು ವಾರ್ಡ್ ಗಳು ಸೇರ್ಪಡೆಯಾಗಿದ್ದು, ಆ ಮೂಲಕ  ಕಂಟೈನ್ ಮೆಂಟ್ ಝೋನ್ ಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ಬಿಡುಗಡೆ ಮಾಡಿರುವ ಕಂಟೈನ್ ಮೆಂಟ್ ಝೋನ್  ಗಳ ಪರಿಷ್ಕೃತ ಪಟ್ಟಿಯಲ್ಲಿ ಬೊಮ್ಮನ ಹಳ್ಳಿಯ 2, ಮಹದೇವಪುರದ 2, ಬೆಂಗಳೂರು ಪೂರ್ವ ವಲಯದ 5, ಬೆಂಗಳೂರು ದಕ್ಷಿಣ ವಲಯದ 10, ಬೆಂಗಳೂರು  ಪಶ್ಚಿಮ ವಲಯದ 4 ಮತ್ತು ರಾಜರಾಜೇಶ್ವರಿ ನಗರದ 2 ವಾರ್ಡ್ ಗಳನ್ನು ಕಂಟೈನ್ ಮೆಂಟ್ ಜೋನ್ ಗಳ ಪಟ್ಟಿಗೆ ಸೇರಿಸಲಾಗಿದೆ.

Story image

ರೆಡ್ ಝೋನ್ ನಲ್ಲಿ 2 ವಾರ್ಡ್ ಗಳು
ಇನ್ನು ರೆಡ್ ಝೋನ್ ನಲ್ಲಿ 2 ವಾರ್ಡ್ ಗಳಿದ್ದು, 35 ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವ ಪಾದರಾಯನಪುರ (ವಾರ್ಡ್ ನಂಬರ್ 135) ಮತ್ತು) 29 ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವ ಹೊಂಗಸಂದ್ರ (ವಾರ್ಡ್ ನಂಬರ್ 189) ರೆಡ್ ಝೋನ್ ನಲ್ಲಿವೆ.

ಬಿಬಿಎಂಪಿ ಬಿಡುಗಡೆ ಮಾಡಿರುವ ಕಂಟೈನ್ ಮೆಂಟ್ ಝೋನ್ ಪಟ್ಟಿ ವಿವರ ಇಂತಿದೆ.

Story image


ಬೊಮ್ಮನ ಹಳ್ಳಿ
ವಾರ್ಡ್ ನಂಬರ್ 188 ಬಿಳೇಕಹಳ್ಳಿ ಮತ್ತು ವಾರ್ಡ್ ನಂಬರ್ 189 ಹೊಂಗಸಂದ್ರ

ಮಹದೇವಪುರ
ವಾರ್ಡ್ ನಂಬರ್ 25 ಹೊರಮಾವು ಮತ್ತು ವಾರ್ಡ್ ನಂಬರ್ 84 ಹಗದೂರು

ಬೆಂಗಳೂರು ಪೂರ್ವವಲಯ
ವಂಸತನಗರ (ವಾರ್ಡ್ ನಂಬರ್ 93), ರಾಧಾಕೃಷ್ಣ ದೇಗುಲ (ವಾರ್ಡ್ ನಂಬರ್ 18), ಸಿವಿರಾಮನ್ ನಗರ  (ವಾರ್ಡ್ ನಂಬರ್ 57), ರಾಮಸ್ವಾಮಿ ಪಾಳ್ಯ (ವಾರ್ಡ್ ನಂಬರ್ 62) ಮತ್ತು ಮಾರುತಿ ಸೇವಾನಗರ  (ವಾರ್ಡ್ ನಂಬರ್ 59)

ಬೆಂಗಳೂರು ದಕ್ಷಿಣ ವಲಯ
ಸುಧಾಮನಗರ (ವಾರ್ಡ್ ನಂಬರ್ 118), ಕರೆಸಂದ್ರ (ವಾರ್ಡ್ ನಂಬರ್ 166), ಗುರಪ್ಪನಪಾಳ್ಯ (ವಾರ್ಡ್ ನಂಬರ್ 171), ಶಾಕಾಂಬರಿನಗರ (ವಾರ್ಡ್ ನಂಬರ್ 179), ಜೆಪಿನಗರ (ವಾರ್ಡ್ ನಂಬರ್ 177), ಬಾಪೂಜಿನಗರ (ವಾರ್ಡ್ ನಂಬರ್ 134), ಹೊಸಹಳ್ಳಿ (ವಾರ್ಡ್ ನಂಬರ್ 124),   ಹಂಪಿನಗರ  (ವಾರ್ಡ್ ನಂಬರ್ 133), ಬೈರಸಂದ್ರ (ವಾರ್ಡ್ ನಂಬರ್ 169), ದೀಪಾಂಜಲಿ ನಗರ (ವಾರ್ಡ್ ನಂಬರ್ 158)

ಬೆಂಗಳೂರು ಪಶ್ಚಿಮ ವಲಯ
ಪಾದರಾಯನಪುರ (ವಾರ್ಡ್ ನಂಬರ್ 135), ಕೆಆರ್ ಮಾರುಕಟ್ಟೆ (ವಾರ್ಡ್ ನಂಬರ್ 139), ಛಲವಾದಿಪಾಳ್ಯ (ವಾರ್ಡ್ ನಂಬರ್ 138) ಮತ್ತು ಜಗಜೀವನ ರಾಂನಗರ (ವಾರ್ಡ್ ನಂಬರ್ 136)

ರಾಜರಾಜೇಶ್ವರಿ ನಗರ
ರಾಜರಾಜೇಶ್ವರಿ ನಗರ ವಾರ್ಡ್ ನಂಬರ್ 160 ಮತ್ತು ಯಶವಂತಪುರ ವಾರ್ಡ್ ನಂಬರ್ 37

Story image

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.