45 ಲಕ್ಷ ಮೌಲ್ಯದ ಚಿನ್ನದ ಬಿಸ್ಕೆಟ್ ದೋಚಿ ಆರೋಪಿಗಳು ಎಸ್ಕೇಪ್!

ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ ದರೋಡೆಕೋರರಿಬ್ಬರು ಚಿನ್ನದ ವ್ಯಾಪಾರಿಯೊಬ್ಬರ ಬಳಿಯಿದ್ದ ಸುಮಾರು 45 ಲಕ್ಷ ಮೌಲ್ಯದ ಚಿನ್ನದ ಬಾರ್ ಗಳನ್ನು ದೋಚಿ ಪರಾರಿಯಾಗಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಉಡುಪಿ: ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ ದರೋಡೆಕೋರರಿಬ್ಬರು ಚಿನ್ನದ ವ್ಯಾಪಾರಿಯೊಬ್ಬರ ಬಳಿಯಿದ್ದ ಸುಮಾರು 45 ಲಕ್ಷ ಮೌಲ್ಯದ ಚಿನ್ನದ ಬಾರ್ ಗಳನ್ನು ದೋಚಿ ಪರಾರಿಯಾಗಿದ್ದಾರೆ. 

ಉಡುಪಿಯ ಬೀಡಿನಗುಡ್ಡೆಯಲ್ಲಿ, ವಿಜಯ್ ಜಾಧವ್ ಹೆಸರಿನ ವ್ಯಾಪಾರಿ ಚಿನ್ನ ಕರಗಿಸುವ ಕುಲುಮೆ ಕೇಂದ್ರವನ್ನು ನಡೆಸುತ್ತಿದ್ದು, ಇವರ ಬಳಿಯಿದ್ದ ಗೋಲ್ಡ್ ಬಾರ್ ಗಳನ್ನು ದೋಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ, ಅವರು ಒಂದು ಕಿಲೋಗ್ರಾಂಗಿಂತ ಹೆಚ್ಚು ತೂಕದ ಚಿನ್ನದ ಬಾರ್ ಗಳಿದ್ದ ಚೀಲ ಹೊತ್ತುಕೊಂಡು ತಮ್ಮ ಅಂಗಡಿಯನ್ನು ತೆರೆಯುತ್ತಿದ್ದರು, ಈ ವೇಳೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೆಲ್ಮೆಟ್ ಧರಿಸಿದ್ದ ಇಬ್ಬರು ವ್ಯಕ್ತಿಗಳು ಚಿನ್ನದ ಬಾರ್ ಗಳಿದ್ದ ಚೀಲ ಕಸಿದು ಕತ್ತಲೆಯಲ್ಲಿ  ಪರಾರಿಯಾಗಿದ್ದಾರೆ ಎನ್ನಲಾಗಿದೆ.

ವಿಜಯ್ ಜಾಧವ್ ಅವರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com