ಧಾರವಾಡದಲ್ಲಿ 4 ತಿಂಗಳ ಬಳಿಕ ಕೊರೋನಾ ಸಕ್ರಿಯ ಪ್ರಕರಣಗಳಲ್ಲಿ ಗಣನೀಯ ಇಳಿಕೆ!

ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಅಬ್ಬರ ಇಳಿಯುತ್ತಿದ್ದು, ಕಳೆದ ನಾಲ್ಕು ತಿಂಗಳ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಅಬ್ಬರ ಇಳಿಯುತ್ತಿದ್ದು, ಕಳೆದ ನಾಲ್ಕು ತಿಂಗಳ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. 

ಸೋಮವಾರ ಜಿಲ್ಲೆಯಲ್ಲಿ ಕೇವಲ 5 ಪ್ರಕರಣಗಳಷ್ಟೇ ಬೆಳಕಿದೆ ಬಂದಿದ್ದು, ಕಳೆದ 10 ದಿನಗಳಲ್ಲಿ ಕೇವಲ 21 ಪ್ರಕರಣಗಳು ಮಾತ್ರ ಪತ್ತೆಯಾಗಿವೆ. 

ರಾಜ್ಯದಲ್ಲಿ ಸೋಂಕಿನ ಪ್ರಮಾಣ ದಿನ ಕಳೆಯುತ್ತಿದ್ದಂತೆಯೇ ಕಡಿಮೆಯಾಗುತ್ತಲಿದ್ದು, ಕಳೆದೊಂದು ತಿಂಗಳಿಂದ ರಾಜ್ಯ ಯಾವುದೇ ಜಿಲ್ಲೆಯಲ್ಲೂ ಮೂರು ಅಂಕಿಗಳ ಪ್ರಮಾಣದ ಸೋಂಕಿನ ಸಂಖ್ಯೆ ಪತ್ತೆಯಾಗಿಲ್ಲ. ಅಕ್ಟೋಬರ್ 22ರವರೆಗೂ ಸಾಕಷ್ಟು ಜಿಲ್ಲೆಗಳಲ್ಲಿ 100ಕ್ಕಿಂತಲೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿತ್ತು. 

ಸೋಂಕು ಪ್ರಮಾಣ ಇಳಿಕೆಯಾಗುತ್ತಿರುವದರ ಜೊತೆಜೊತೆ ಸಕ್ರಿಯ ಪ್ರಕರಣ ಸಂಖ್ಯೆ ಕೂಡ ಇಳಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಗುಣಮುಖರಾಗುತ್ತಿರುವ ಪ್ರಮಾಣ ಹೆಚ್ಚಾಗುತ್ತಿದ್ದು, ಸಾವಿನ ಪ್ರಮಾಣ ಕೂಡ ಕಡಿಮೆಯಾಗುತ್ತಿದೆ. ಪ್ರತೀನಿತ್ಯ 1-2 ಸೋಂಕಿತರು ಸಾವನ್ನಪ್ಪುತ್ತಿರುವದು ಕಂಡು ಬರುತ್ತಿದೆ. ಸೋಂಕು ಹಾಗೂ ಸಕ್ರಿಯ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಕೊಂಚ ನಿರಾಳ ಎದುರಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com