ನಾನು ಕಾನೂನು ಪಾಲನೆ ಬಿಟ್ಟು ಬೇರೇನೂ ಟ್ವೀಟ್ ಮಾಡಿಲ್ಲ: ನಟಿ ಕಂಗನಾಗೆ ಡಿ.ರೂಪಾ ತಿರುಗೇಟು

ಕರ್ನಾಟಕದಲ್ಲಿ ದೀಪಾವಳಿಗೆ ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ತನ್ನ ಹಾಗೂ ಚಿತ್ರನಟಿ ಕಂಗನಾ ನಡುವಿನ ಟ್ವೀಟ್ ವಾರ್ ವಿಚಾರವಾಗಿ ಪ್ರತಿಕ್ರಿಯಿಸಿದ ಎಡಿಜಿಪಿ ರೂಪಾ ನಾನು ಕಾನೂನು ಪಾಲನೆ ಬಿಟ್ಟು ಬೇರೇನೂ ಟ್ವೀಟ್ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಡಿ ರೂಪ-ಕಂಗನಾ ರಣಾವತ್
ಡಿ ರೂಪ-ಕಂಗನಾ ರಣಾವತ್
Updated on

ಬೆಂಗಳೂರು: ಕರ್ನಾಟಕದಲ್ಲಿ ದೀಪಾವಳಿಗೆ ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ತನ್ನ ಹಾಗೂ ಚಿತ್ರನಟಿ ಕಂಗನಾ ನಡುವಿನ ಟ್ವೀಟ್ ವಾರ್ ವಿಚಾರವಾಗಿ ಪ್ರತಿಕ್ರಿಯಿಸಿದ ಎಡಿಜಿಪಿ ರೂಪಾ ನಾನು ಕಾನೂನು ಪಾಲನೆ ಬಿಟ್ಟು ಬೇರೇನೂ ಟ್ವೀಟ್ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ರೂಪಾ, ನಾನು ಕಾನೂನು ಪಾಲನೆ‌ ದೃಷ್ಟಿಯಿಂದ ಟ್ವೀಟ್ ಮಾಡಿ ಪಟಾಕಿ ಸಿಡಿಸದಂತೆ ಜನರಿಗೆ ತಿಳಿಸಿದ್ದೆ. ನನ್ನ ಶ್ರದ್ಧೆ ಪ್ರಾಮಾಣಿಕತೆ ಜನರಿಗೆ ಗೊತ್ತಿದೆ. ಸಾಮಾನ್ಯರ ಸಮಸ್ಯೆಗೆ ನಾನು ಸ್ಪಂದಿಸುವ ರೀತಿಯೂನನಗೆ ಗೊತ್ತಿದೆ. ನಾನು ಕಾನೂನು ಪಾಲನೆ ಬಿಟ್ಟು ಬೇರೆನೂ ಟ್ವೀಟ್ ಮಾಡಿಲ್ಲ ಎಂದರು.

ಪಟಾಕಿ ಬ್ಯಾನ್ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಅದನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಡಿ. ರೂಪಾ ನವೆಂಬರ್‌ 14ರಂದು ಹಾಕಿದ್ದ ಪೋಸ್ಟ್ ನಲ್ಲಿ 'ಪಟಾಕಿ ಸಿಡಿಸುವುದು ಹಿಂದೂ ಸಂಸ್ಕೃತಿಯಲ್ಲ, ವಿದೇಶಿಗರಿಂದ ಬಂದ ಸಂಪ್ರದಾಯ ಎಂದಿದ್ದರು. ರೂಪಾ ಟ್ವೀಟ್ ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿತ್ತು. ಅದರಲ್ಲಿಯೂ ಟ್ರೂ ಇಂಡಾಲಜಿ ಖಾತೆ ಜೊತೆಗಿನ ಚರ್ಚೆ ರೂಪಾ ಅವರನ್ನು ಕೆರಳಿಸಿತ್ತು. 

ಸಾಮಾನ್ಯ ಜನರ ಮೂಲಭೂತ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಡಿ.ರೂಪಾ ಅವರಂತಹ ಜನರನ್ನು ನೇಮಿಸುತ್ತದೆ. ಆದರೆ, ಅವರು ನೋಡಿದರೆ ಸತ್ಯ ಆಧಾರಗಳಿಂದ ವಾದದಲ್ಲಿ ಗೆಲ್ಲುವ ಬದಲು ಖಾತೆಗಳನ್ನೇ ಬ್ಲಾಕ್ ಮಾಡಿದ್ದಾರೆ. ನಿಮಗೆ ನಾಚಿಗೆಯಾಗಬೇಕು ಎಂದಿತ್ತು. ಆಗ ಡಿ.ರೂಪಾ ವಿರುದ್ದ ನಟಿ ಕಂಗನಾ ಸೇರಿದಂತೆ ಹಲವರು ಪರ ವಿರೋಧ ಚರ್ಚೆ ನಡೆಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com