ಬಾಲ್ಡ್ ವಿನ್ ಶಾಲೆಯಲ್ಲಿ ಅಧಿಕ ಶುಲ್ಕ ವಸೂಲಿ: ಸಿಎಂ ಗೆ ಪೋಷಕರ ಪತ್ರ

ಬಾಲ್ಡ್ ವಿನ್ ಸಂಸ್ಥೆಯ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿರುವ ಪೋಷಕರು ಶಾಲೆಯ ವಿರುದ್ದ ಹಲವು ಆರೋಪಗಳನ್ನು ಮಾಡಿ ಇತ್ತೀಚೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಬಾಲ್ಡ್ ವಿನ್ ಸಂಸ್ಥೆಯ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿರುವ ಪೋಷಕರು ಶಾಲೆಯ ವಿರುದ್ದ ಹಲವು ಆರೋಪಗಳನ್ನು ಮಾಡಿ ಇತ್ತೀಚೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.

ಶಾಲೆ ನಿಗದಿ ಪಡಿಸಿದ ಮಾರಾಟಗಾರರ ಬಳಿಯೇ ಪಠ್ಯ ಪುಸ್ತಕಗಳನ್ನು ಖರೀದಿಸಬೇಕೆಂದು ಪೋಷಕರ ಮೇಲೆ ಒತ್ತಡ, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಅಧಿಕ ಶುಲ್ಕ, ವಿಧಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಕಳೆದ ವರ್ಷ ಪೋಷಕರು ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಬಾಲ್ಡ್ವಿನ್ ಪ್ರೌ ಢ ಶಾಲೆಯಿಂದ 1.82 ಕೋಟಿ ರೂ. ಮತ್ತು ಬಾಲಕಿಯರ ಮತ್ತು ಬಾಲಕರ ಶಾಲೆಗಳಿಂದ 2.83 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಆಪಾದಿಸಿದ್ದಾರೆ.

ಬಾಲ್ಡ್ ವಿನ್ ಸರಣಿಯ ಐದು ಶಾಲೆಗಳಿಗೆ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಬೆಂಗಳೂರು ದಕ್ಷಿಣ ವಲಯದ ಬಿಇಓಗಳಿಗೆ ನೋಟಿಸ್ ನೀಡುವಂತೆ ಸೂಚಿಸಿತ್ತು. ಆದರೆ ಇಲ್ಲಿಯವರೆಗೂ ಯಾವುದೇ ಅಪ್ ಡೇಟ್ ಆಗಿಲ್ಲ. ವರದಿ ಕೂಡ ಸಲ್ಲಿಸಿಲ್ಲ.

24 ಸಾವಿರ ರು ಟ್ಯೂಷನ್ ಪೀಸು ಪಡೆಯುವ ಶಾಲೆ ಪ್ರತಿ ವರ್ಷವೂ ಕಟ್ಟಡ ಶುಲ್ಕವನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತಿದೆ, ಈ ವರ್ಷ ಯಾವುದೇ ಶುಲ್ಕವನ್ನು ವಿಂಗಡಿಸಿಲ್ಲ, ಬದಲಾಗಿ 64 ಸಾವಿರ ಶುಲ್ಕ ವಿಧಿಸಿದ್ದಾರೆ ಎಂದು ಮೊಹಮದ್ ಶಕೀಲ್ ಎಂಬ ಪೋಷಕರು ಆರೋಪಿಸಿದ್ದಾರೆ. ಶಾಲೆ ಸೂಚಿಸಿದ ಮಾರಾಟಗಾರರು ಪಠ್ಯ ಪುಸ್ತಕಗಳಿಗೆ ದುಪ್ಪಟ್ಟು ದರ ವಿಧಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಆದರೆ ಈ ಎಲ್ಲಾ ಆಪಾದನೆಗಳಿಗೆ ಪ್ರತಿಕ್ರಿಯಿಸಿರುವ ಬಾಲ್ಡ್ವಿನ್ ಕೋ-ಎಜುಕೇಶಷನ್ ಸೊಸೈಟಿ ಪ್ರಿನ್ಸಿಪಾಲ್ ನಾವು ಈ ವರ್ಷ ಶುಲ್ಕ ಏರಿಸಿಲ್ಲ, ಹಾಗೂ ಯಾವುದೇ ಮಾರಾಟಗಾರರ ಜೊತೆ ಒಪ್ಪಂದ ಮಾಡಿಕೊಂಡಿಲ್ಲ, ಸರ್ಕಾರದ ಮಾರ್ಗಸೂಚಿ ಪಾಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ವರದಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ದಕ್ಷಿಣ ವಿಭಾಗದ ಡಿಡಿಪಿಐ ರಾಜೇಂದ್ರ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com