ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಹೊಸ ದಾಖಲೆ: ಒಂದೇ ದಿನ 3552 ಕೇಸ್, 21 ಬಲಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ದಾಖಲೆಯ 3,552 ಕೊರೋನಾ ಸೋಂಕಿತರು ಪತ್ತೆಯಾಗುವುದರೊಂದಿಗೆ ಈವರೆಗಿನ ಸೋಂಕಿತರ ಸಂಖ್ಯೆ 1,67,183ಕ್ಕೆ ಏರಿಕೆಯಾಗಿದೆ. ಆ.15ರಂದು ನಗರದಲ್ಲಿ 3,495 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, ಈ ವರೆಗಿನ ದಾಖಲೆಯಾಗಿತ್ತು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ದಾಖಲೆಯ 3,552 ಕೊರೋನಾ ಸೋಂಕಿತರು ಪತ್ತೆಯಾಗುವುದರೊಂದಿಗೆ ಈವರೆಗಿನ ಸೋಂಕಿತರ ಸಂಖ್ಯೆ 1,67,183ಕ್ಕೆ ಏರಿಕೆಯಾಗಿದೆ. ಆ.15ರಂದು ನಗರದಲ್ಲಿ 3,495 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, ಈ ವರೆಗಿನ ದಾಖಲೆಯಾಗಿತ್ತು. 

ಸೆ.1ರಿಂದ 12ರವರೆಗೆ ಒಟ್ಟು 7 ಬಾರಿ ಮೂರು ಸಾವಿರಕ್ಕೂ ಅಧಿಕ ಕೊರೋನಾ ಸೋಂಕು ಪ್ರಕರಣಗಳು ನಗರದಲ್ಲಿ ಪತ್ತೆಯಾಗಿವೆ. ಸತತ 5 ದಿನಗಳಿಂದ ಮೂರು ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕು ಪತ್ತೆಯಾಗಿರುವ ವರದಿಯಾಗಿದೆ. 

ಇನ್ನು ನಿನ್ನೆ ಒಂದೇ ದಿನ 3,538 ಕೊರೋನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಈ ವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 1,23,862ಕ್ಕೆ ಏರಿಕೆಯಾಗಿದೆ. ಶನಿವಾರ 21 ಮಂದಿ ಮೃತಪಟ್ಟಿದ್ದು, ಈ ವರೆಗಿನ ಮೃತಪಟ್ಟವರ ಸಂಖಅಯೆ 2,391ಕ್ಕೆ ಏರಿಕೆಯಾಗಿದೆ. 

ನಗರದಲ್ಲಿ ಇನ್ನೂ 40,929 ಸಕ್ರಿಯ ಪ್ರಕರಣಗಳಿದ್ದು, 278 ಮಂದಿ ಸೋಂಕಿತರು ನಗರದ ವಿವಿಧ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಆಱೋಗ್ಯ ಇಲಾಖೆ ಮಾಹಿತಿ ನೀಡಿದೆ. 

ಒಟ್ಟು ಸೋಂಕಿತರ ಪೈಕಿ ಶೇ.74 ರಷ್ಟು ಮಂದಿ ಗುಣಮುಖರಾಗಿದ್ದಾರೆ. ಶೇ.24ರಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ.1.43 ಮಂದಿ ಮೃತಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com