ರಾಜ್ಯದಲ್ಲಿ ಒಂದೇ ದಿನ 36 ಜನರಲ್ಲಿ ವೈರಸ್ ಪತ್ತೆ: ಫಾರ್ಮಾ ಕಂಪನಿ ಮತ್ತು ಜಮಾತ್ ಪಾಲು ಹೆಚ್ಚು!

ದಿನೇ ದಿನೇ ತನ್ನ ಪ್ರಭಾವವನ್ನು ಹೆಚ್ಚಿಸುತ್ತಿರುವ ಕೊರೋನಾ ವೈರಸ್ ಗುರುವಾರ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟಿಸಿದೆ. ಒಂದೇ ದಿನ ದಾಖಲೆಯ 36 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 315ಕ್ಕೇರಿದೆ. 

Published: 17th April 2020 07:20 AM  |   Last Updated: 17th April 2020 12:33 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ಬೆಂಗಳೂರು: ದಿನೇ ದಿನೇ ತನ್ನ ಪ್ರಭಾವವನ್ನು ಹೆಚ್ಚಿಸುತ್ತಿರುವ ಕೊರೋನಾ ವೈರಸ್ ಗುರುವಾರ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟಿಸಿದೆ. ಒಂದೇ ದಿನ ದಾಖಲೆಯ 36 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 315ಕ್ಕೇರಿದೆ. 

ಈ ಹಿಂದೆ ಬುಧವಾರವಷ್ಟೇ 19 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈ ವರೆಗಿನ ದಾಖಲೆಯಾಗಿತ್ತು. ಈ ಮಧ್ಯೆ ಮಾ.9ಕ್ಕೆ ರಾಜ್ಯದಲ್ಲಿ ಮೊದಲ ಪ್ರಕರಣ ದೃಢಪಟ್ಟ 25 ದಿನಗಳ ಬಳಿಕ 150ನೇ ಸೋಂಕು ಖಚಿತಗೊಂಡಿತ್ತು. ಇದೀಗ 10 ದಿನಗಳಲ್ಲಿ ಆ ಸಂಖ್ಯೆ ದ್ವಿಗುಣಗೊಂಡಿದೆ. 

ಆತಂಕಕಾರಿ ವಿಚಾರವೆಂದರೆ ಗುರುವಾರ ಬೆಳಗಾವಿಯೊಂದರಲ್ಲಿಯೇ 17 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 36ಕ್ಕೇರಿದೆ. ಅವರೆಲ್ಲಾ ದೆಹಲಿಯ ತಬ್ಲೀಘಿ ಜಮಾತ್ ನಲ್ಲಿ ಪಾಲ್ಗೊಂಡವರು ಅಥವಾ ಅವರ ಜೊತೆಗೆ ಸಂಪರ್ಕ ಹೊಂದಿದ್ದವರಾಗಿದ್ದಾರೆಂದು ಹೇಳಲಾಗುತ್ತಿದೆ. 

ಇದರೊಂದಿಗೆ ರಾಜ್ಯದಲ್ಲಿ ತಬ್ಲೀಘಿ ನಂಟಿನ ಪ್ರಕರಣಗಳ ಸಂಖ್ಯೆ 46ಕ್ಕೇರಿದೆ. ಇನ್ನು ವಿಜಯಪುರದಲ್ಲಿ 7, ಬೆಂಗಳೂರು 5, ಮೈಸೂರು ಕಲಬುರಗಿಯಲ್ಲಿ ತಲಾ 3 ಹಾಗೂ ಗದಗದಲ್ಲಿ 1 ಸೋಂಕು ಪ್ರಕರಣ ದೃಢಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,

ರಾಜ್ಯದಲ್ಲಿ 315 ಪ್ರಕರಣಗಳಲ್ಲಿ 46 ಪ್ರಕರಣಗಳು ದೆಹಲಿಯ ನಿಜಾಮುದ್ದೀನ್ ತಬ್ಲೀಘಿ ಜಮಾತ್'ನಲ್ಲಿ ಭಾಗಿಯಾಗಿದ್ದವರು ಮತ್ತು ಅವರ ಸಂಪರ್ಕ ಪಡೆದವರದ್ದಾಗಿವೆ. 

ನಿನ್ನೆ ಬೆಳಗಾವಿಯಲ್ಲಿ ಪತ್ತೆಯಾಗಿರುವ 17ರಲ್ಲಿ 5 ಪ್ರಕರಣಗಳು ದೆಹಲಿಗೆ ಹೋಗಿ ಬಂದ ತಬ್ಲೀಘಿಗಳಲ್ಲಿ ಪತ್ತೆಯಾಗಿದೆ. ಹೀಗಾಗಿ ನೇರವಾಗಿ ಜಮಾತ್'ನಲ್ಲಿ ಪಾಲ್ಗೊಂಡು ಬಂದ 46 ಜನರಲ್ಲಿ ಸೋಂಕು ದೃಢಪಟ್ಟಿದೆ. 

ಇದರಂತೆ ಮೈಸೂರಿನ ನಂಜನಗೂಡಿನ ಔಷಧಿ ಕಂಪನಿಯೊಂದಿಗೆ ಸಂಪರ್ಕ ಹೊಂದಿದ್ದ 49 ಮಂದಿಯಲ್ಲೂ ವೈರಸ್ ದೃಢಪಟ್ಟಿದೆ. 

ಸೋಂಕಿತ ಪ್ರಕರಣಗಳು ಇದೇ ರೀತಿ ದಾಖಲಾಗುತ್ತಿದ್ದರೆ, ಗ್ರಾಮೀಣ ಪ್ರದೇಶಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗುತ್ತದೆ. ಜನರು ಸಂಪೂರ್ಣವಾಗಿ ನಿಯಮವನ್ನ ಪಾಲನೆ ಮಾಡುತ್ತಿಲ್ಲ. ಶೇ.100ರಷ್ಟು ಲಾಕ್'ಡೌನ್ ಪಾಲನೆಯಾಗುತ್ತಿಲ್ಲ. ಲಾಕ್'ಡೌನ್ ಪರಿಣಾಮಕಾರಿಯಾಗಿಲ್ಲ. ಕಂಟೇನ್ಮೆಂಟ್ ಝೋನ್ ನಲ್ಲಿ ಯಾರೊಬ್ಬರೂ ಒಳಗೆ ಬರುವಂತಿಲ್ಲ ಹಾಗೂ ಹೊರಗೆ ಹೋಗುವಂತಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ. 

Stay up to date on all the latest ರಾಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp