ಮಕ್ಕಳು ಕನ್ನಡ ಮಾತನಾಡಿದ್ರೆ ದಂಡ: ರಾಜ್ಯದ ಈ ಶಾಲೆಯ ಸುತ್ತೋಲೆಗೆ ಪ್ರಾಧಿಕಾರ ಆಕ್ಷೇಪ

ನಗರದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಮಕ್ಕಳು ಕನ್ನಡ ಮಾತನಾಡಿದರೆ ದಂಡ ವಿಧಿಸಲು ಶಾಲೆಯ ಆಡಳಿತ ಮಂಡನಿ ನಿರ್ಧಾರ ಕೈಗೊಂಡಿದ್ದು, ಈ ಕುರಿತು ಸುತ್ತೋಲೆಯನ್ನು ಹೊರಡಿಸಿದೆ. ಶಾಲೆಯ ಈ ಕ್ರಮಕ್ಕೆ ಇದೀಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪ ವ್ಯಕ್ತಪಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಮಕ್ಕಳು ಕನ್ನಡ ಮಾತನಾಡಿದರೆ ದಂಡ ವಿಧಿಸಲು ಶಾಲೆಯ ಆಡಳಿತ ಮಂಡನಿ ನಿರ್ಧಾರ ಕೈಗೊಂಡಿದ್ದು, ಈ ಕುರಿತು ಸುತ್ತೋಲೆಯನ್ನು ಹೊರಡಿಸಿದೆ. ಶಾಲೆಯ ಈ ಕ್ರಮಕ್ಕೆ ಇದೀಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪ ವ್ಯಕ್ತಪಡಿಸಿದೆ. 

ಹೊರಮಾವು ಬಳಿ ಚೆನ್ನಸಂದ್ರದಲ್ಲಿರುವ ಎಸ್ಎಲ್ಎಸ್ ಇಂಟರ್ ನ್ಯಾಷನಲ್ ಗುರುಕುಳ ಎಂಬ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳು ಕನ್ನಡ ಮಾತನಾಡಿದರೆ, ರೂ.50 ಹಾಗೂ ಎರಡನೇ ಬಾರಿ ಮಾತನಾಡಿದರೆ ರೂ.100 ದಂಡ ವಿಧಿಸಲು ಸಂಸ್ಥೆ ತೀರ್ಮಾನಕೈಗೊಂಡಿದೆ. 

ಇದಷ್ಟೇ ಅಲ್ಲದೆ, ಶಾಲೆಯಲ್ಲಿ ಕನ್ನಡ ಬೋದನೆಗೂ ಸಮಯವನ್ನು ನಿಗದಿ ಮಾಡಿಲ್ಲ. ಶಾಲೆಯಲ್ಲಿ ಅಗತ್ಯವಿರುವಷ್ಟು ಕನ್ನಡ ಶಿಕ್ಷಕರೂ ಕೂಡ ಇಲ್ಲದಿರುವುದು ಕಂಡು ಬಂದಿದೆ. ಇನ್ನು ಶಾಲಾ ಮಕ್ಕಳ ಮೇಲೆ ದೌರ್ಜನ್ಯಗಳೂ ಕೂಡ ನಡೆಯುತ್ತಿದ್ದು, ಇಲ್ಲಸಲ್ಲದ ನಿಯಮ ಹೇರಿ ಮಕ್ಕಳನ್ನು ಶಾಲೆಯಿಂದ ಹೊರಹಾಕುತ್ತಿರುವ ಆರೋಪ ಕೂಡ ಕೇಳಿಬಂದಿದೆ. 

ಈ ವಿಚಾರ ತಿಳಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಶಾಲಾ ಮುಖ್ಯಸ್ಥರಿಗೆ ನೋಟಿಸ್ ಜಾರಿಗೆ. ಅಲ್ಲದೆ, ಶಿಕ್ಷಣ ಇಲಾಖೆಗೂ ಪತ್ರ ಬರೆದಿರುವ ಪ್ರಾಧಿಕಾರ, ಇಂತಹ ತೀರ್ಮಾನಗಳನ್ನು ರದ್ದುಪಡಿಸುವಂತೆ ಶಾಲೆಗೆ ಆದೇಶಿಸುವಂತೆ ಮನವಿ ಮಾಡಿಕೊಂಡಿದ್ದಾರೆ. 

ಪ್ರಕಱಣ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥ ಟಿ.ಎಸ್.ನಾಗಾಭರಣ ಅವರು ಇತರೆ ಅಧಿಕಾರಿಗಳೊಂದಿಗೆ ಶಾಲೆಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶಾಲೆ ಸುತ್ತೋಲೆ ಹೊರಡಿಸಿರುವುದು ನಿಜ ಎಂಬುದು ಸ್ಪಷ್ಟವಾಗಿದೆ. 

ಸುತ್ತೋಲೆ ಕುರಿತಂತೆ ಇದೀಗ ಶಾಲೆಯ ಪ್ರಾಂಶುಪಾಲರು ಕ್ಷಮೆಯಾಚಿಸಿದ್ದು, ಮುಂದೆ ಇಂತಹ ತಪ್ಪುಗಳಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com