ಕೊರೋನಾ ವೈರಸ್: ರಾಜ್ಯದಲ್ಲಿ ಇಬ್ಬರು ಸೋಂಕಿತರು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

ಕೊರೋನಾ ಭೀತಿಯಿಂದಾಗಿ ಸಾಕಷ್ಟು ಆತಂಕಕ್ಕೊಳಗಾಗಿದ್ದ ಜನತೆಗೆ ತುಸು ಸಮಾಧಾನದ ಸುದ್ದಿ ಸಿಕ್ಕಿದೆ. ಮಹಾಮಾರಿಯ ಸೋಂಕಿನಿಂದ ಬಳಲುತ್ತಿದ್ದ ರಾಜ್ಯದ ಇಬ್ಬರು ವ್ಯಕ್ತಿಗಳು ಗುಣಮುಕರಾಗಿದ್ದು, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಭೀತಿಯಿಂದಾಗಿ ಸಾಕಷ್ಟು ಆತಂಕಕ್ಕೊಳಗಾಗಿದ್ದ ಜನತೆಗೆ ತುಸು ಸಮಾಧಾನದ ಸುದ್ದಿ ಸಿಕ್ಕಿದೆ. ಮಹಾಮಾರಿಯ ಸೋಂಕಿನಿಂದ ಬಳಲುತ್ತಿದ್ದ ರಾಜ್ಯದ ಇಬ್ಬರು ವ್ಯಕ್ತಿಗಳು ಗುಣಮುಕರಾಗಿದ್ದು, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ. 

ಬೆಂಗಲೂರಿನಲ್ಲಿ ಕೊರೋನಾ ಸೋಂಕು ಖಚಿತಪಟ್ಟ ಮೊದಲ ವ್ಯಕ್ತಿಯ ಪತ್ನಿ ಹಾಗೂ ಮಧುಚಂದ್ರಕ್ಕೆ ಗ್ರೀಸ್'ಗೆ ತೆರಳಿ ಕೊರೋನಾ ಸೋಂಕಿನೊಂದಿಗೆ ಬೆಂಗಳೂರಿಗೆ ಮಮರಳಿದ್ದ 26 ವರ್ಷದ ಟೆಕ್ಕಿ ಇಬ್ಬರಿಗೂ ಸೋಂಕು ಗುಣವಾಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಹೇಳಿದ್ದಾರೆ. 

ಇವರು ಆಸ್ಪತ್ರೆಯಿಂದ ಬಿಡುಗಡೆಯಾಗುವುದರಿಂದ ಜನರಲ್ಲಿ ವಿಶ್ವಾಸ ಮೂಡಲಿದೆ. ಬಿಡುಗಡೆಗೆ ಮೊದಲು 24 ಗಂಟಗಳಲ್ಲಿ ಎರಡು ಬಾರಿ ರಕ್ತ ಹಾಗೂ ಸ್ವ್ಯಾಬ್ ಪರೀಕ್ಷೆ ನಡೆಸಲಾಗಿದ್ದು, ಎರಡೂ ಸಲ ವರದಿ ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಇದರಿಂದ ಸೋಂಕು ಎಲ್ಲರಿಗೂ ಪ್ರಾಣಹಾನಿ ಉಂಟು ಮಾಡುವುದಿಲ್ಲ. ಇದು ಗುಣಪಡಿಸಬಲ್ಲ ಸೋಂಕು ಎಂದು ಎಲ್ಲಾ ಸಾರ್ವಜನಿಕರಿಗೂ ಅರಿವಾಗಲಿದೆ. 

ಇನ್ನು ಪ್ರತಿನಿತ್ಯವೂ ಆಸ್ಪತ್ರೆಯಿಂದ ಸೋಂಕಿತರು ಸೋಂಕು ಗುಣಪಟ್ಟು ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ಸುಧಾಕರ್ ತಿಳಿಸಿದ್ದಾರೆ. ಆದರೆ, ಬಿಡುಗಡೆಯಾಗಲಿರುವ ಇಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ 14 ದಿನ ಮನೆಯಲ್ಲಿಯೇ ಪ್ರತ್ಯೇಕವಾಗಿಟ್ಟು ನಿಗಾವಹಿಸಲಾಗುುದು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com