ಮಾಸ್ಕ್ ಧರಿಸದಿದ್ದವರಿಗೆ ಭಾರೀ ದಂಡ: ಮೊದಲ ದಿನವೇ ರೂ.2,600 ದಂಡ ವಸೂಲಿ ಮಾಡಿದ ಅಧಿಕಾರಿಗಳು

ಕೊರೋನಾ ವೈರಸ್ ಆರ್ಭಟ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಈ ನಡುವೆ ಮಾಸ್ಕ್ ಧರಿಸದೇ ರಸ್ತೆಗಳಲ್ಲಿ ಓಡಾಡುವ ಸಾರ್ವಜನಿಕರಿಗೆ ಬಿಬಿಎಂಪಿ ಭಾರಿ ದಂಡ ವಿಧಿಸುತ್ತಿದೆ. ಈಗಾಗಲೇ ಕಾರ್ಯಾಚರಣೆಯನ್ನು ಆರಂಭಿಸಿರುವ ಬಿಬಿಎಂಪಿ ಅಧಿಕಾರಿಗಳು ಮೊದಲ ದಿನವೇ ರೂ.2,600 ದಂಡ ವಸೂಲಿ ಮಾಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಆರ್ಭಟ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಈ ನಡುವೆ ಮಾಸ್ಕ್ ಧರಿಸದೇ ರಸ್ತೆಗಳಲ್ಲಿ ಓಡಾಡುವ ಸಾರ್ವಜನಿಕರಿಗೆ ಬಿಬಿಎಂಪಿ ಭಾರಿ ದಂಡ ವಿಧಿಸುತ್ತಿದೆ. ಈಗಾಗಲೇ ಕಾರ್ಯಾಚರಣೆಯನ್ನು ಆರಂಭಿಸಿರುವ ಬಿಬಿಎಂಪಿ ಅಧಿಕಾರಿಗಳು ಮೊದಲ ದಿನವೇ ರೂ.2,600 ದಂಡ ವಸೂಲಿ ಮಾಡಿದ್ದಾರೆ. 

ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರಹ ಸರ್ಕಾರದ ಮಾರ್ಗಸೂಚಿಯಂತೆ, ಶುಕ್ರವಾರದಿಂದ ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅದರಂತೆ ಶುಕ್ರವಾರದಿಂದ ದಂಡ ವಿಧಿಸುವ ಕಾರ್ಯ ಆರಂವಭವಾಗಿದ್ದು, ಮೊದಲ ದಿನ ನಾಲ್ವರಿಗೆ ದಂಡ ಬಿಬಿಎಂಪಿ ಮಾರ್ಷಲ್ ಗಳು ದಂಡ ವಿಧಿಸಿದ್ದಾರೆ. 

ಮಾಸ್ಕ್ ಧರಿಸದ ಕಾರಣಕ್ಕೆ ಬೆಂಗಳೂರಿನ ಮೊದಲ ದಂಡ ಪಾವತ ಮಾಡಿದ ವ್ಯಕ್ತಿ ಲಕ್ಕಸಂದ್ರ ವಾರ್ಡ್ ನಿವಾಸಿಗಾಯಿದ್ದಾರೆ. ಅದೇ ವಾರ್ಡ್'ನ ಮತ್ತೊಬ್ಬರು 2ನೇ ವ್ಯಕ್ತಿಯಾಗಿದ್ದಾರೆ. ಇಬ್ಬರೂ ತಲಾ ರೂ 1 ಸಾವಿರ ಗಳಂತೆ 2 ಸಾವಿರವನ್ನು ಬಿಬಿಎಂಪಿ ಮಾರ್ಷಲ್ ಗಳು ವಸೂಲಿ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com