ಬೆಂಗಳೂರು: ಮಾಸ್ಕ್ ಧರಿಸದಿದ್ದಕ್ಕೆ ಒಂದೇ ದಿನದಲ್ಲಿ ರೂ.51 ಸಾವಿರ ದಂಡ!

ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಿದವರಿಂದ ಬಿಬಿಎಂಪಿ ಮಾರ್ಷಲ್ ಗಳು ಶನಿವಾರ ಒಂದೇ ದಿನ ಬರೋಬ್ಬರಿ ರೂ.51 ಸಾವಿರ ದಂಡ ವಸೂಲಿ ಮಾಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಿದವರಿಂದ ಬಿಬಿಎಂಪಿ ಮಾರ್ಷಲ್ ಗಳು ಶನಿವಾರ ಒಂದೇ ದಿನ ಬರೋಬ್ಬರಿ ರೂ.51 ಸಾವಿರ ದಂಡ ವಸೂಲಿ ಮಾಡಿದ್ದಾರೆ. 

ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸದ ಮೊದಲ ದಿನವಾದ ಶುಕ್ರವಾರ ಕೇವಲ ನಾಲ್ಕು ಮಂದಿಯಿಂದ ರೂ.2,600 ದಂಡ ವಸೂಲಿ ಮಾಡಲಾಗಿತ್ತು. 2ನೇ ದಿನವಾದ ಶನಿವಾರ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ ಬಿಬಿಎಂಪಿ ಮಾರ್ಷಲ್ ಗಳು ಎಂಟು ವಲಯದಲ್ಲಿ 86 ಮಂದಿಗೆ ರೂ.51,700 ದಂಡ ವಿಧಿಸಲಾಗಿದೆ. ಯಲಹಂಕ ವಲಯದಲ್ಲಿ ಯಾವುದೇ ದಂಡ ವಿಧಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ದಂಡ ಸಂಗ್ರಹಿಸುವ ಉದ್ದೇಶದಿಂದ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲ್ಲ. ಕೊರೋನಾ ಸೋಂಕು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಉದ್ಯೋಗದ ಸ್ಥಳಗಳಲ್ಲಿ ಜನ ಮಾಸ್ಕ್ ಧರಿಸುವಂತಾಗಬೇಕು. ಈ ನಿಯಮ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗುತ್ತಿದೆ. ಬಿಬಿಎಂಪಿ ಹಿರಿಯ, ಕಿರಿಯ ಆರೋಗ್ಯಾಧಿಕಾರಿಗಳು ಹಾಗೂ ಮಾರ್ಷಲ್ ಗಳು ಮಾಸ್ಕ್ ಬಳಿಕ ಮಾಡದವರಿಗೆ ದಂಡ ವಿಧಿಸುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com