ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊರೋನಾ ವಿರುದ್ಧ ಕ್ರಮ: ಸಿಲಿಕಾನ್ ಸಿಟಿ ಜನತೆಗೆ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿರುವ ಪೊಲೀಸರು

ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಸಂದರ್ಭದಲ್ಲಿ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ಜನರ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಅವರ ಹಾಗೂ ಅವರ ಕುಟುಂಬಸ್ಥರ ಆರೋಗ್ಯ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. 

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಸಂದರ್ಭದಲ್ಲಿ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ಜನರ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಅವರ ಹಾಗೂ ಅವರ ಕುಟುಂಬಸ್ಥರ ಆರೋಗ್ಯ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. 

ಐಟಿಐ ಲೇಔಟ್ ನಿವಾಸಿಯಾಗಿರುವ ಶೆರಿನ್ ಎಂಬುವವರಿಗೂ ಬೆಂಗಳೂರಿನ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಕರೆ ಹೋಗಿದ್ದು, ಆರಂಭದಲ್ಲಿ ಶೆರಿನ್ ಅವರು ಗಾಬರಿಗೊಂಡಿದ್ದಾರೆ. 

ಪೊಲೀಸರು ಕರೆ ಮಾಡಿದ್ದಾರೆಂದ ಕೂಡಲೇ ಆರಂಭದಲ್ಲಿ ಭಯ ಹಾಗೂ ಆಶ್ಚರ್ಯವಾಗಿತ್ತು. ಬಳಿಗ ನನಗೆ ಸುರಕ್ಷತೆಯಿಂದಿರುವ ಭಾವನೆ ಎದುರಾಯಿತು. ಪೊಲೀಸರ ಇಂತಹ ಕ್ರಮಗಳು ನಮ್ಮಲ್ಲಿ ಸುರಕ್ಷಿತ ಭಾವ ಮೂಡಿಸುತ್ತದೆ. ಪ್ರಮುಖವಾಗಿ ಕೊರೋನಾದಂತಹ ಇಂತಹ ಸಂದರ್ಭದಲ್ಲಿ. ವೈರಸ್ ಹರಡುತ್ತಿರುವುದು ಹೆಚ್ಚಾಗುತ್ತಿರುವುದು ನಮ್ಮಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಬೆಂಗಳೂರು ಪೊಲೀಸ ಈ ಕ್ರಮ ಅತ್ಯುತ್ತಮವಾಗಿದೆ ಎಂದು ಹೇಳಿದ್ದಾರೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್ ಮುಖ್ಯಸ್ಥ ಭಾಸ್ಕರ್ ರಾವ್ ಅವರು, ಪ್ರತೀನಿತ್ಯ ನಾವು 1,000 ಜನರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದೇವೆ. ದೂರವಾಣಿ ಕರೆಯಲ್ಲಿ ಮಾತನಾಡಿರುವ ಕೆಲ ಹಿರಿಯ ನಾಗರೀಕರು ಹೊರಗೆ ಹೋಗಲು ಕಷ್ಟವಾಗುತ್ತಿದೆ. ಕೆಲವರು ಡಯಾಲಿಸಿಸ್'ಗೆ ಹೋಗಬೇಕು. ಆದರೆ, ಒಬ್ಬಂಟಿಯಾಗಿ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೂಡಲೇ ನಾವು ಹೊಯ್ಸಳ ವಾಹನಗಳು, ಗಸ್ತು ವಾಹನಗಳನ್ನು ಕಳುಹಿಸಿ ಸಹಾಯ ಮಾಡುತ್ತಿದ್ದೇವೆ. ಇನ್ನು ಕೆಲವರು ಬೇರೆ ರಾಜ್ಯದಲ್ಲಿ ತಮ್ಮ ಪುತ್ರಿ ಒಬ್ಬಂಟಿಯಾಗಿದ್ದು, ಅವಳನ್ನು ನೋಡಲು ಹೋಗಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ವೇಳೆ ಕೂಡ ನಾವು ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುತ್ತಿದ್ದೇವೆಂದು ತಿಳಿಸಿದ್ದಾರೆ. 

ನಮ್ಮಲ್ಲಿ ಡೆಟಾ ಆಧಾರದಲ್ಲಿ ದೂರವಾಣಿ ಸಂಖ್ಯೆಗಳಿದ್ದು, ಪ್ರತೀಯೊಬ್ಬರಿಗೂ ಕರೆ ಮಾಡುತ್ತಿದ್ದಾರೆ. ಕೆಲವರು ತಮ್ಮ ಮನೆಗಳಲ್ಲಿ ತಮ್ಮ ಮೇಲಾಗುತ್ತಿರುವ ದೌರ್ಜನ್ಯ ಕಳ್ಳತನದ ಕುರಿತು ಮಾಹಿತಿ ನೀಡುತ್ತಿ್ದಾದರೆ. ಈ ವೇಳೆ ಸ್ಥಳಕ್ಕೆ ಕೂಡಲೇ ಹೊಯ್ಸಳ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ಕಳುಹಿಸುತ್ತಿದ್ದಾರೆ. ಇಂತಹ ಬೆಳವಣಿಗೆಗೆಳು ಜನರ ಹಾಗೂ ಪೊಲೀಸರ ನಡುವಿನ ಸಂಬಂಧವನ್ನು ಉತ್ತಮಗೊಳಿಸುತ್ತದೆ ಎಂದಿದ್ದಾರೆ. 

ಇದಲ್ಲದೆ ಮತ್ತೊಂದು ನಾನು ಕೂಡ ಬೆಂಗಳೂರು ಪೊಲೀಸ್ ಎಂಬ ಕಾರ್ಯಕ್ರಮವನ್ನು ಬೆಂಗಳೂರು ಪೊಲೀಸರು ಆರಂಭಿಸಿದ್ದಾರೆ. ಈ ಹೊಸ ಕಾರ್ಯದಲ್ಲಿ ಒಬ್ಬ ವ್ಯಕ್ತಿ ಶಿಸ್ತುಬದ್ಧವಾಗಿರಬೇಕು. ಕೆಲ ಕ್ರೀಡಾಪಟುಗಳು ಹಾಗೂ ಸೆಲೆಬ್ರಿಟಿಗಳು ಕೂಡ ಹ್ಯಾಶ್'ಟ್ಯಾಗ್ ನೊಂದಿಗೆ ವಿಡಿಯೋ ಹಾಕಿ. ಸಾಮಾಜಿಕ ಅಂತರ ಹಾಗೂ ಕೊರೋನಾ ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ ಕುರಿತು ಜನರಿಗೆ ಮಾಹಿತಿ ನೀಡಲಾಗುತ್ತಿದೆ. 

Related Stories

No stories found.

Advertisement

X
Kannada Prabha
www.kannadaprabha.com