ಹುಬ್ಬಳ್ಳಿ: ಬಿಜೆಪಿ ನಾಯಕನ ಸಂಬಂಧಿ ಹತ್ಯೆ, ಕೇವಲ 3 ಗಂಟೆಗಳಲ್ಲಿ ಆರೋಪಿಗಳು ಅಂದರ್!

ಭಾರತೀಯ ಜನತಾ ಪಕ್ಷ ನಾಯಕನ ಸೋದರ ಸಂಬಂಧಿಯನ್ನು ಹತ್ಯೆ ಮಾಡಿದ್ದ ಆರೋಪಿಗಳನ್ನು ಹುಬ್ಬಳ್ಳಿ ಪೋಲೀಸರು ಕೇವಲ ಮೂರು ಗಂಟೆಗಳಲ್ಲಿ ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷ ನಾಯಕನ ಸೋದರ ಸಂಬಂಧಿಯನ್ನು ಹತ್ಯೆ ಮಾಡಿದ್ದ ಆರೋಪಿಗಳನ್ನು ಹುಬ್ಬಳ್ಳಿ ಪೋಲೀಸರು ಕೇವಲ ಮೂರು ಗಂಟೆಗಳಲ್ಲಿ ಬಂಧಿಸಿದ್ದಾರೆ.

ಬಿಜೆಪಿಯ ರೈತ ಮೋರ್ಚಾದ ಈಶ್ವರಗೌಡ ಪಾಟೀಲ ಅವರ ಸೋದರ ಸಂಬಂಧಿ ಎನ್ನಲಾದ ಅಭಿಷೇಕ್ ಪಾಟೀಲ್ ನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ  ಪ್ರವೀಣ್ ಬೇವಿನ ಕಟ್ಟಿ, ಸಾಯಿ ಉಣಕಲ್ ಹಾಗೂ ಕುಮಾರ್ ಇದ್ದಲಗಿ ಎಂಬುವವರನ್ನು ಪೋಲೀಸರು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಆರೋಪಿ ಪ್ರವೀಣ್ ಬೇವಿನ ಕಟ್ಟಿ, ಹತ್ಯೆಗೀಡಾದ ಅಭಿಷೇಕ್ ಜತೆ ಜಗಳವಾಡಿದ್ದ ಅಲ್ಲದೆ ಮನೆ ಮುಂದಿದ್ದ ಕಾರಿನ ಗಾಜು ಒಡೆದಿದ್ದ. ಭಾನುವಾರ ಮತ್ತೆ ಆತ ತನ್ನ ಸ್ನೇಹಿತನೊಂದಿಗೆ ಆಗಮಿಸಿ ಅಭಿಷೇಕ್ ನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಹಲ್ಲೆಯಿಂದಾಗಿ ತೀವ್ರ ಗಾಯಗೊಂಡಿದ್ದ ಅಭಿಷೇಕ್ ನನ್ನು ಹುಬ್ಬಳ್ಳಿಯ  ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವನು ಸಾವನ್ನಪ್ಪಿದ್ದಾನೆ.

ಇದೀಗ ಅಶೋಕ ನಗರ ಠಾಣೆ ಪೋಲೀಸರು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com