ಬೆಂಗಳೂರು: ಬಿಟ್ಟುಬಿಡುವಂತೆ ಕಣ್ಣೀರು ಹಾಕಿದರೂ ಬಿಡದೆ ಪುಂಡರಿಂದ ಬಾಲಕರಿಗೆ ಚಿತ್ರಹಿಂಸೆ!

ಸಿಲಿಕಾನ್ ಸಿಟಿಯಲ್ಲಿ ಮದ್ಯಪಾನ ಮಾಡಿದ ಪುಂಡರು ಬಾಲಕರಿಗೆ ತೀವ್ರ ಹಿಂಸೆ ನೀಡಿದ ದಾರುಣ ಘಟನೆ ನಡೆದಿದೆ.
ಮೊಬೈಲ್ ದೃಶ್ಯ
ಮೊಬೈಲ್ ದೃಶ್ಯ
Updated on: 

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮದ್ಯಪಾನ ಮಾಡಿದ ಪುಂಡರು ಬಾಲಕರಿಗೆ ತೀವ್ರ ಹಿಂಸೆ ನೀಡಿದ ದಾರುಣ ಘಟನೆ ನಡೆದಿದೆ.

ನಗರದ ಬಿ.ನಾರಾಯಣಪುರದಲ್ಲಿ ದುರ್ಘಟನೆ ನಡೆದಿದೆ. ಇದು ಎರಡು ದಿನದ ಹಿಂದೆ ನಡೆದಿದೆ. ತಡವಾಗಿ ಬೆಳಕಿಗೆ ಬಂದಿದೆ.

ಬಾಲಕರು ಶಾಲಾ ಮೈದಾನಕ್ಕೆ ಆಟವಾಡಲು ಹೋದಾಗ ಈ ಘಟನೆ ನಡೆದಿದೆ. ಅವರನ್ನು ಸುತ್ತುವರಿದ ಯುವಕರ ಗುಂಪು ಒಂದು ತಾಸಿಗೂ ಹೆಚ್ಚು ಸಮಯ ಹಿಂಸೆ ನೀಡಿದ್ದಾರೆ. ಮರಕ್ಕೆ ಕಟ್ಟಿಹಾಕಿ ಬೀಡಿ ಸೇದುವಂತೆ ಒತ್ತಾಯಿಸಿದ್ದಾರೆ. ಮಕ್ಕಳು ಬಿಟ್ಟುಬಿಡುವಂತೆ ಕಣ್ಣೀರು ಹಾಕಿದರೂ ಬಿಡದ ಪುಂಡರು ವಿಕೃತಿ ಮೆರೆದಿದ್ದು  ಇದೆಲ್ಲವನ್ನೂ ವಿಡಿಯೋ ಸಹ ಮಾಡಿದ್ದಾರೆ.

ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೃತ್ಯದ ಬಗ್ಗೆ ಮಕ್ಕಳು ಪೋಷಕರಿಗೆ ತಿಳಿಸಿದ್ದು ನಂತರ ಮಹದೇವಪುರ ಪೊಲೀಸರಿಗೆ ದೂರು ನೀಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com