ಶಾಸಕ ವಿಶ್ವನಾಥ್ ಹತ್ಯೆ ವಿಡಿಯೋ ಸ್ಟಿಂಗ್ ವಿಚಾರ; ಕೆದಕಿದಷ್ಟು ಹೊರಬರುತ್ತಿದೆ ರಹಸ್ಯ.. ನ.30ರ ಸಂಜೆ ಏನಾಯ್ತು!

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ್ದ ವಿಡಿಯೋವೊಂದರ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ವಿಶ್ವನಾಥ್ ವಿರುದ್ಧ ಚುನಾವಣೆಯಲ್ಲಿ ಸೋಲು ಕಂಡಿದ್ದ ಗೋಪಾಲಕೃಷ್ಣ ಹಾಗೂ ಸ್ಟಿಂಗ್ ವಿಡಿಯೋ ಮಾಡಿರುವ ನಟೋರಿಯಸ್ ಕುಳ್ಳ ದೇವರಾಜ್ ನನ್ನು ಸಿಸಿಬಿ ವಿಚಾರಣೆ ಮಾಡಿದೆ ಎನ್ನಲಾಗಿದೆ.
ವಿಶ್ವನಾಥ್
ವಿಶ್ವನಾಥ್

ಬೆಂಗಳೂರು: ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ್ದ ವಿಡಿಯೋವೊಂದರ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ವಿಶ್ವನಾಥ್ ವಿರುದ್ಧ ಚುನಾವಣೆಯಲ್ಲಿ ಸೋಲು ಕಂಡಿದ್ದ ಗೋಪಾಲಕೃಷ್ಣ ಹಾಗೂ ಸ್ಟಿಂಗ್ ವಿಡಿಯೋ ಮಾಡಿರುವ ನಟೋರಿಯಸ್ ಕುಳ್ಳ ದೇವರಾಜ್ ನನ್ನು ಸಿಸಿಬಿ ವಿಚಾರಣೆ ಮಾಡಿದೆ ಎನ್ನಲಾಗಿದೆ.

ಈ ಮಧ್ಯೆ, ಎಸ್‌. ಆರ್ ವಿಶ್ವನಾಥ್ ಹತ್ಯೆಗೆ ತಂತ್ರ ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10ಕ್ಕೂ ಹೆಚ್ಚು ಸಂಚುಕೋರರಿಗೆ ರಾಜಾನುಕುಂಟೆ ಪೊಲೀಸರಿಂದ ನೋಟಿಸ್ ಜಾರಿ ಮಾಡಲಾಗಿದೆ. ಗೋಪಾಲ ಕೃಷ್ಣ, ಕುಳ್ಳ ದೇವರಾಜ್, ಕಾಂತ, ಧರ್ಮ,ಮಂಜ ಹಾಗೂ ಸಹಚರಿಗೆ ನೋಟಿಸ್ ನೀಡಲಾಗಿದ್ದು, ತ್ವರಿತವಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಕುಳ್ಳ ದೇವರಾಜ್ ಸಂಚಿಗೆ ಬೆಂಬಲಿಸಿದವರಿಗೆ, ವಿಡಿಯೋ ಎಡಟಿಂಗ್ , ಸ್ಟಿಂಗ್ ಗೆ ಸಹಕರಿಸಿದವರಿಗೂ ನೊಟೀಸ್ ನೀಡಿರುವ ಪೊಲೀಸರು, ತ‌ನಿಖಾಧಿಕಾರಿ ದೊಡ್ಡಬಳ್ಳಾಪುರ ಇನ್ಸ್ ಪೆಕ್ಟರ್ ನವೀನ್ ಮುಂದೆ ತನಿಖೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.

ನವೆಂಬರ್ 30ರಂದು ಸಂಜೆ ಏನಾಯ್ತು?
ನವೆಂಬರ್ 30ರ ಸಂಜೆ ಗಾಂಧಿನಗರದ ಸ್ಪೆಕ್ಟಾಮ್ ಹೋಟೆಲ್ ನಲ್ಲಿದ್ದ ಗೋಪಾಲಕೃಷ್ಣರನ್ನ ವಶಕ್ಕೆ ಪಡೆದಿದ್ದೆ ತಡ ಅದೊಂದು ಕರೆ ಪೊಲೀಸರಿಗೆ ಬಂದಿತ್ತು. ಈ ಸಂದರ್ಭದಲ್ಲಿ ಮಾಜಿ ಸಚಿವರೊಬ್ಬರು ಖುದ್ದು ಕಮೀಷನರ್ ಗೆ ಕಾಲ್ ಮಾಡಿದ್ರಾ? ಇಂಟೆನ್ಷನಲಿ ಟ್ರ್ಯಾಪ್ ಮಾಡೋಕೆ ವೀಡಿಯೊ ಮಾಡಿರೋದು ಗೊತ್ತಾಗ್ತಿದೆ. ನೀವು ಅರೆಸ್ಟ್ ಮಾಡಬೇಕು ಅನ್ನೋದಾದ್ರೆ ಮಾಡಿ. ನಾನು ಸದನದಲ್ಲಿ ವಿಚಾರ ಪ್ರಸ್ತಾಪ ಮಾಡ್ತೀನಿ ಅಂತಾ ಕಾಲ್ ಕಟ್ ಮಾಡಿದ್ರಾ ಆ ಮಾಜಿ ಸಚಿವ? ಈ ವಿಚಾರಗಳು ಇನ್ನೂ ರಹಸ್ಯವಾಗಿರುವುಗಾಲೇ ಈ ದೂರವಾಣಿ ಬಳಿಕವಷ್ಟೇ ಕೇಸ್ ನ ಪೂರ್ವಾಪರ ಕೆದಕಿದ್ದ ಕಮೀಷನರ್, ನಂತರ ಸಿಸಿಬಿ ತಂಡ ಗೋಪಾಲಕೃಷ್ಣರನ್ನು ಬಿಟ್ಟು ಮನೆಗೆ ಕಳುಹಿಸಿದ್ದರು ಅನ್ನೋದನ್ನು ಬಲ್ಲ ಮೂಲಗಳು ತಿಳಿಸಿವೆ. ಆದ್ರೆ, ಗೋಪಾಲಕೃಷ್ಣ , ಕುಳ್ಳದೇವರಾಜ್ ನನ್ನು ವಶಕ್ಕೆ ಪಡೆದು ವಿಷಯವನ್ನು ಸಿಸಿಬಿ ಅಧಿಕಾರಿಗಳು ಮುಚ್ಚಿಟ್ಟಿದ್ರಾ ಅನ್ನೋದು ಗೊತ್ತಾಗಬೇಕಿದೆ.

ಪೊಲೀಸರಿಂದ ಜಾಣ ಕುರಡುತನ ಪ್ರದರ್ಶನ!:
ಶಾಸಕಪ ದೂರಿನಲ್ಲಿ ಕುಳ್ಳ ದೇವರಾಜ್ ಹೆಸರು ಸೂಚಿಸಿದ್ದರೂ ಕೂಡ ಆರೋಪ ಮಾಡದ ಪೊಲೀಸರು, ಕುಳ್ಳ ದೇವರಾಜ್ ಬೆನ್ನಿಗೆ ರಾಜಾನುಕುಂಟೆ ಪೊಲೀಸರು ನಿಂತ್ರಾ ಅನ್ನೋದು ಜನರ ಶಂಕೆಗೆ ಕಾರಣವಾಗುತ್ತಿದೆ. ಎಫ್ಐಆರ್ ಪ್ರತಿಯಲ್ಲಿ ಗೋಪಾಲಕೃಷ್ಣ ಒಬ್ಬರನ್ನೆ ಆರೋಪಿ ಮಾಡಿರೋ ಪೊಲೀಸರು, ವಿಡಿಯೋದಲ್ಲಿ ಕೊಲೆ ಮಾಡೊದಾಗಿ ಮಾತಾಡೋ ಕುಳ್ಳ ದೇವರಾಜ್ ನನ್ನ ಆರೋಪಿ ಮಾಡದ ಪೊಲೀಸರು, ಪ್ರಕರಣದ ದಿಕ್ಕು ತಪ್ಪಿಸೋ ಪ್ರಯತ್ನಕ್ಕೆ ಕೈ ಹಾಕಿದ್ರಾ ಅನ್ನೋ ಶಂಕೆ ಮೂಡುತ್ತಿದೆ. ಆರೋಪಿ ಕಾಲಂನಲ್ಲಿ ಗೋಪಾಲಕೃಷ್ಣ ಅಂಡ್ ಅದರ್ಸ್ ಅಂತ ಹಾಕಿ ಕೈ ತೊಳೆದುಕೊಂಡ ತನಿಖಾಧಿಕಾರಿ ಬಬಿತ, ಶಾಸಕ ವಿಶ್ವನಾಥ್ ಹಾಗೂ ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಮಣಿದ್ರಾ ಅನ್ನೋದು ಸಂಶಯಕ್ಕೆ ಕಾರಣವಾಗುತ್ತಿದೆ. ಎಫ್ ಐಆರ್ ನೋಡಿದ್ರೆ ಶಾಸಕ ವಿಶ್ವನಾಥ್ ಅಣತಿಯಂತೆಯೇ ತನಿಖೆ ನಡೆಯುತ್ತಿದೆ ಅನ್ನೋ ಶಂಕೆ ಜನಸಾಮಾನ್ಯರಲ್ಲಿ ಮೂಡುವಂತೆ ಮಾಡಿದೆ.

6 ತಿಂಗಳ ಮೊದಲೆ ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಲಾಗಿತ್ತಾ?
ಎರಡು ತಿಂಗಳ ಹಿಂದೆ ವಿಶ್ವನಾಥ್ ಗೊತ್ತಿದ್ರೂ ಮೌನವಹಿಸಿದ್ದೇಕೆ..? ಎಲ್ಲಾ ಗೊತ್ತಿದ್ದು ಶಾಸಕ ವಿಶ್ವನಾಥ್ ಮಾಹಿತಿ ನೀಡದಿರೋದಕ್ಕೆ ಕಾರಣ ಏನು..? ಕೊನೆಯ ಪಕ್ಷ ಪೊಲೀಸ್ ಹಿರಿಯ ಅಧಿಕಾರಿಗಳು ಮಾಹಿತಿ ನೀಡದೆ ಗೌಪ್ಯತೆ ವಹಿಸಿದ್ದೇಕೆ..? ಇನ್ನು ಒಳ್ಳೆ ಸಮಯಕ್ಕಾಗಿ ಕಾಯ್ತ ಇದ್ರಾ ಶಾಸಕ ವಿಶ್ವನಾಥ್..? ಹಲವು ಗೊಂದಲಗಳಿಗೆ ಮತ್ತು ಅನುಮಾನಗಳಿಗೆ ಸ್ಟಿಂಗ್ ವಿಡಿಯೋ ಪ್ರಕರಣ ಎಡೆಮಾಡಿಕೊಟ್ಟಿದೆ. ಎಫ್ ಐ ಆರ್ ನಲ್ಲಿ ಕೇವಲ ಗೋಪಾಲಕೃಷ್ಣ ಮತ್ತು ಇತರರು ಎಂದು ಉಲ್ಲೇಖಿಸಿರೋದು. ಪ್ರಕರಣ ಬೆಳಕಿಗೆ ಬರೋದಕ್ಕೂ ಮೊದಲು ಓರ್ವ ಪೊಲೀಸ್ ಅಧಿಕಾರಿ ವಿಶ್ವನಾಥ್ ಗೆ ಸಾಥ್ ನೀಡಿರುವ ಶಂಕೆ ಹಾಗೂ ಇದೀಗ ರಾಜಾನಕುಂಟೆ ಪೊಲೀಸರಿಂದಲೂ ಜಾಣ ಕುರುಡುತನ ಪ್ರದರ್ಶನ. ಆರೋಪಿಗಳ ಹೆಸರು ಗೊತ್ತಿದ್ದರು ಎಫ್ ಐ ಆರ್ ನಲ್ಲಿ ಗೋಪಾಲ ಕೃಷ್ಣ ಹೆಸರು ಮಾತ್ರ ನಮೂದಿಸಿರುದ ಪಿಎಸ್ ಐ ಬಬಿತ. ದೂರಿನಲ್ಲಿ ಕುಳ್ಳಾ ದೇವರಾಜ್ ಹೆಸರಿದ್ರೂ ಎಫ್ ಐ ಆರ್ ನಲ್ಲಿ ಕೈ ಬಿಟ್ಟು ಇದೀಗ ನೋಟಿಸ್ ನಾಟಕ ಮಾಡುತ್ತಿದ್ದಾರೆ ಎಂಬ ಶಂಕೆ ಪಿ ಎಸ್ ಐ ಬಬಿತಾ ಅವರ ಮೇಲೆ ಮೂಡುವಂತೆ ಮಾಡಿದೆ. 

ಸಿಎಂ ಹೇಳಿದ್ದೇನು?
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ರಾಜ್ಯ ಸರ್ಕಾರದ ಯಾವುದೇ ಹಸ್ತಕ್ಷೇಪ ಇರುವುದಿಲ್ಲ. ಪ್ರಾಥಮಿಕ ಹಂತದ ತನಿಖೆ ಪೂರ್ಣಗೊಂಡ ಬಳಿಕ, ಉನ್ನತಮಟ್ಟದ ತನಿಖೆ ನಡೆಸಬೇಕೆ ಅಥವಾ ಬೇಡವೇ ಅನ್ನೋದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸುವುದಾಗಿ ಅವರು ತಿಳಿಸಿದರು. ಒಟ್ಟಿನಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆ ಸ್ಟಿಂಗ್ ವಿಡಿಯೋ ತನಿಖೆ ಮುಂದಿನ ದಿನಗಳಲ್ಲಿ ಯಾವ ದಿಕ್ಕು ಪಡೆದುಕೊಳ್ಳಲಿದೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com