ವೈಟ್‌ಫೀಲ್ಡ್‌: ರಸ್ತೆ ಅಪಘಾತದಲ್ಲಿ ಹದಿಹರೆಯದ ಯುವತಿ ಸಾವು, ಇಬ್ಬರಿಗೆ ಗಾಯ

ಟ್ರಕ್ ವೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಹದಿಹರೆಯದ ಯುವತಿಯೊಬ್ಬಳು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಆಕೆಯ ತಾಯಿ ಹಾಗೂ ಸಹೋದರಿ  ಗಾಯಗೊಂಡಿರುವ ಘಟನೆ ವೈಟ್ ಫೀಲ್ಡ್ ನ ವರ್ತೂರು ಮುಖ್ಯರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಟ್ರಕ್ ವೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಹದಿಹರೆಯದ ಯುವತಿಯೊಬ್ಬಳು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಆಕೆಯ ತಾಯಿ ಹಾಗೂ ಸಹೋದರಿ  ಗಾಯಗೊಂಡಿರುವ ಘಟನೆ ವೈಟ್ ಫೀಲ್ಡ್ ನ ವರ್ತೂರು ಮುಖ್ಯರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. 

ಜಯಶ್ರೀ ಮೃತಪಟ್ಟ ಯುವತಿಯಾಗಿದ್ದಾಳೆ. ಆಕೆಯ ತಾಯಿ ವಿನಿಮಾಲ ಮತ್ತು 10 ವರ್ಷದ ಆಕೆಯ ಸಹೋದರಿ ಜಯ ಮಾಣಿಕಂ ಅವರು ಗಾಯಗೊಂಡಿದ್ದಾರೆ. 

ವಿನಿಮಾಲಾ ಸ್ಕೂಟರ್ ಓಡಿಸುತ್ತಿದ್ದರೆ ಅವರ ಮೂವರು ಮಕ್ಕಳಾದ ಜಯಶ್ರೀ, ಜಯ ಮಾಣಿಕಂ ಮತ್ತು ಏಳು ವರ್ಷದ  ಹುಡುಗಿ ಸ್ಕೂಟರ್ ಹಿಂಭಾಗದಲ್ಲಿ ಕುಳಿತಿದ್ದರು. ವರ್ತೂರು ಪೊಲೀಸ್ ಠಾಣೆ ಬಳಿ ಅತಿ ವೇಗದಲ್ಲಿ ಬಂದ ಕಾಂಕ್ರಿಟ್ ಮಿಕ್ಸರ್ ವಾಹನದ ಚಾಲಕ ಸ್ಕೂಟರ್ ಹತ್ತಿರಕ್ಕೆ ಬಂದು ಓವರ್ ಟೇಕ್ ಮಾಡಲು ಯತ್ನಿಸಿದ್ದಾನೆ. 

ಆಗ ವಿನಿಮಾಲಾ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದು, ಕೆಳಗೆ ಬಿದಿದ್ದಾರೆ. ಜಯಶ್ರೀ ಲಾರಿ ಚಕ್ರದಡಿ ಸಿಲುಕಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.  ವಿನಿಮಲ ಮತ್ತು ಮಾಣಿಕಂ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಏಳು ವರ್ಷದ ಹುಡುಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಡ್ರೈವರ್ ಬಂಧಿಸಲಾಗಿದ್ದು, ಲಾರಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ವೈಟ್ ಫೀಲ್ಡ್ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com