ನೈಟ್ ಕರ್ಫ್ಯೂ: ನಿರ್ಬಂಧಗಳು ಹೊಟೆಲ್ ರೂಮ್ ಗಳಿಗೆ ಅನ್ವಯಿಸುವುದಿಲ್ಲ; ಪೊಲೀಸ್ ಸ್ಪಷ್ಟನೆ

ಓಮಿಕ್ರಾನ್ ಭೀತಿ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಜಾರಿಯಾಗಿರುವ ರಾತ್ರಿ ಕರ್ಫ್ಯೂ ಕುರಿತಂತೆ ಕೆಲ ಗೊಂದಲಗಳು ಮುಂದುವರೆದಿದ್ದು, ಈ ನಡುವೆ ಪೊಲೀಸ್ ಇಲಾಖೆ ಹೊಟೆಲ್ ರೂಮ್ ಗಳಿಗೆ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಓಮಿಕ್ರಾನ್ ಭೀತಿ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಜಾರಿಯಾಗಿರುವ ರಾತ್ರಿ ಕರ್ಫ್ಯೂ ಕುರಿತಂತೆ ಕೆಲ ಗೊಂದಲಗಳು ಮುಂದುವರೆದಿದ್ದು, ಈ ನಡುವೆ ಪೊಲೀಸ್ ಇಲಾಖೆ ಹೊಟೆಲ್ ರೂಮ್ ಗಳಿಗೆ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಈ ಕುರಿತು ಮಾತನಾಡಿದ ಪೊಲೀಸ್ ಆಯುಕ್ತ ಕಮಲ್ ಪಂತ್, 'ರಾತ್ರಿ ಕರ್ಫ್ಯೂ ಸಮಯದಲ್ಲಿ ಸಾರ್ವಜನಿಕರು ಮನೆಯಿಂದ ಹೊರಗೆ ಬರದಂತೆ ಮನವಿ ಮಾಡಿದರು. ''ನಗರದಾದ್ಯಂತ ಪೊಲೀಸರನ್ನು ನಿಯೋಜಿಸಲಾಗುವುದು ಮತ್ತು ಗಸ್ತು ತೀವ್ರಗೊಳಿಸಲಾಗುವುದು. ರಾತ್ರಿ 10ರ ನಂತರ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ಅನುಮತಿಸಲಾಗುವುದಿಲ್ಲ. ಆದರೆ ಹೊಟೆಲ್ ರೂಮ್ ಗಳಲ್ಲಿ ತಂಗುವ ಗ್ರಾಹಕ ಮತ್ತು ರೂಮ್ ಸರ್ವಿಸ್ ಇರುವ ಹೊಟೆಲ್ ಗಳಿಗೆ ನಿರ್ಬಂಧ ಅನ್ವಯಿಸುವುದಿಲ್ಲ. ಎರಡೂ ಡೋಸ್ ಲಸಿಕೆಯನ್ನು ತೆಗೆದುಕೊಂಡ ಅತಿಥಿಗಳಿಗೆ ಮಾತ್ರ ರೆಸ್ಟೋರೆಂಟ್‌ಗಳು ಅವಕಾಶ ನೀಡುತ್ತಿವೆಯೇ ಎಂಬುದನ್ನು ಪರಿಶೀಲಿಸಲು ನಾವು ಬಿಬಿಎಂಪಿ ಸಿಬ್ಬಂದಿಯ ಸಹಾಯವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಅಂತೆಯೇ, 'ರಾತ್ರಿ ಕರ್ಫ್ಯೂ ಅವಧಿಯಲ್ಲಿ ಒಂದು ಅಥವಾ ಎರಡು ದಿನದಲ್ಲಿ ಫ್ಲೈಓವರ್‌ಗಳನ್ನು ಮುಚ್ಚಲಾಗುವುದು ಮತ್ತು ಯಾವ ಫ್ಲೈಓವರ್‌ಗಳನ್ನು ಮುಚ್ಚಬೇಕೆಂದು ನ್ಯಾಯವ್ಯಾಪ್ತಿಯ ಪೊಲೀಸರು ನಿರ್ಧರಿಸುತ್ತಾರೆ. ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು ಮತ್ತು ನಿರ್ಬಂಧಗಳನ್ನು ಉಲ್ಲಂಘಿಸುವುದು ಕಂಡುಬಂದಲ್ಲಿ ಜನರನ್ನು ದಾಖಲಿಸಲಾಗುತ್ತದೆ. ಡಿ.31ರ ರಾತ್ರಿ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಮತ್ತು ಇಂದಿರಾನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಸಾರ್ವಜನಿಕ ಆಚರಣೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.

ಸಿನಿಮಾ ಥಿಯೇಟರ್, ಹೊಟೆಲ್ ರೂಂ​ಗಳಿಗೆ  ನಿಮಯ ಅನ್ವಯವಿಲ್ಲ
ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಡಿ.31ರ ರಾತ್ರಿ ಹೊಸ ವರ್ಷ ಆಚರಿಸುವಂತಿಲ್ಲ. ಸಭೆ ಸಮಾರಂಭಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೇ ಹಗಲಿನಲ್ಲೂ ಬಾರ್, ಪಬ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಮಿತಿಗೊಳಿಸಲಾಗಿದೆ. ಪಬ್, ಬಾರ್, ರೆಸ್ಟೋರೆಂಟ್ ಗಳಲ್ಲಿ 50:50 ನಿಯಮ ಜಾರಿಗೊಳಿಸಲಾಗಿದೆ. ಸಿನಿಮಾ ಥಿಯೇಟರ್​ಗಳಿಗೆ ಸದ್ಯ ಈ ನಿಮಯ ಅನ್ವಯವಾಗುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಹೋಟೆಲ್‌ ಉದ್ಯಮಕ್ಕೊಂದು ನ್ಯಾಯ, ಚಿತ್ರಮಂದಿರಕ್ಕೊಂದು ನ್ಯಾಯ
ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಪೈಕಿ; ಡಿಸೆಂಬರ್‌ 28 ರಿಂದ ಜನವರಿ 2 2022ರವರೆಗೆ ಹೋಟೆಲ್‌‌, ರೆಸ್ಟೋರೆಂಟ್, ಪಬ್‌, ಬಾರ್‌ಗಳಲ್ಲಿ 50% ಆಸನಕ್ಕೆ ಮಾತ್ರ ಅವಕಾಶ ನೀಡಿದೆ. ಆದರೆ ಚಿತ್ರಮಂದಿರಗಳಿಗೆ ಮಾತ್ರ 100% ಅವಕಾಶ ಕೊಡಲಾಗಿದೆ. ಜೊತೆಗೆ ಡಿಸೆಂಬರ್‌ 28 ರಂದು ರಾತ್ರಿ 10ರಿಂದ ಜನವರಿ 7ರ 5ರ ವೆರೆಗೆ ನೈಟ್‌ ಕರ್ಫ್ಯೂ ಜಾರಿಯಲ್ಲಿದೆ. ಇದರ ಜೊತೆಗೆ ಮದುವೆ, ಸಭೆ, ಸಮಾರಂಭಗಳಿಗೆ 300 ಜನರಿಗೆ ಮಾತ್ರ ಅವಕಾಶ ಕಲ್ಪಿಸೊಕೊಡಲಾಗಿದೆ. ಸರ್ಕಾರ ಈ ನಡೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹೊಸವರ್ಷ ಆಚರಣೆಗೆ ಸರ್ಕಾರ ಹೊರಡಿಸಿದ ಈ ಗೈಡ್‌ ಲೈನ್ಸ್‌ ನಲ್ಲಿ ಹೋಟೆಲ್‌, ರೆಸ್ಟೋರೆಂಟ್‌, ಬಾರ್‌ ಮತ್ತು ಪಬ್‌ ಗಳಿಗೆ 50% ಆಸನ ವ್ಯವಸ್ಥೆಗೆ ಅವಕಾಶ ಕೊಡಲಾಗಿರುವ ಬಗ್ಗೆ ಇದೀಗ ಅನುಮಾನಗಳು ಮೂಡಿವೆ. ಇದೇ ವೇಳೆ ಚಿತ್ರಮಂದಿರಗಳಿಗೆ ಮಾತ್ರ 100% ಅವಕಾಶ ಕೊಡಲಾಗಿದೆ.  

10 ದಿನಗಳವರೆಗೆ ವಿಧಿಸಲಾದ 7 ಗಂಟೆಗಳ ನಿರ್ಬಂಧಗಳ ಬಗ್ಗೆ ವಿವಿಧ ವಲಯಗಳು, ವಿಶೇಷವಾಗಿ ಆತಿಥ್ಯ ವಲಯದಿಂದ ಅಸಮಾಧಾನದ ನಡುವೆ, ಮಂಗಳವಾರ ರಾತ್ರಿ 10 ಗಂಟೆಗೆ ನಗರದಾದ್ಯಂತ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದೀಗ ದಿಢೀರನೆ ನಾಲ್ಕು ದಿನಗಳಿರುವಾಗಲೇ ಸರ್ಕಾರ ಈ ರೀತಿಯಾದ ಆದೇಶ ಹೊರಡಿಸಿರುವುದು ಸರಿ ಅಲ್ಲ. ಬೆಂಗಳೂರಿನ ಹೋಟೆಲ್‌ ಉದ್ಯಮ ಪ್ರತಿವರ್ಷ ಸಾವಿರಕ್ಕೂ ಅಧಿಕ ಕೋಟಿ ತೆರಿಗೆಯನ್ನು ಪಾವತಿಸುತ್ತದೆ. ಕೊರೋನಾ ಲಾಕ್‌ ಡೌನ್‌ ಸಮಯದಲ್ಲಿ ಸಂಪೂರ್ಣವಾಗಿ ನೆಲಕ್ಕಚ್ಚಿತ್ತು. ಈ ವೇಳೆ ಸರ್ಕಾರದಿಂದಲೂ ಯಾವುದೇ ಸಹಾಯ ನಮಗೆ ಸಿಕ್ಕಿರಲಿಲ್ಲ. ಅದಾಗಿಯೂ ಇತ್ತೀಚೆಗೆ ಉದ್ಯಮ ಚೇತರಿಕೆ ಕಂಡುಕೊಳ್ಳುತ್ತಿದೆ. ಈ ವರ್ಷಕ್ಕೆ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಾಣುವುದರಲ್ಲಿತ್ತು. ಈ ವೇಳೆಯೇ ಈ ರೀತಿ ನಮಗೆ ಮಾತ್ರ ನಿರ್ಬಂಧ ಹೇರಿರುವುದು ಸಂಜಸವಲ್ಲ. ಆದರೆ ಇದೇ ವೇಳೆ ಚಿತ್ರಮಂದಿರಗಳಿಗೆ ಮಾತ್ರ 100% ಅವಕಾಶ ಕೊಟ್ಟಿರುವುದು ಓಲೈಕೆಯಲ್ಲದೆ ಮತ್ತೇನು ಅಲ್ಲ ಎಂದು ಹೊಟೆಲ್ ಉದ್ಯಮಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com