ಕೋವಿಡ್-19 ಅನ್'ಲಾಕ್: ಜನರ ಬೇಜವಾಬ್ದಾರಿ; ನಗರದಲ್ಲಿ ನಿಯಮ ಉಲ್ಲಂಘಿಸುವವರ ಸಂಖ್ಯೆಯಲ್ಲಿ ಹೆಚ್ಚಳ!

ರಾಜ್ಯದಲ್ಲಿ ಅನ್'ಲಾಕ್ 2.0 ಹಾಗೂ ಅನ್ ಲಾಕ್ 3.0 ಆರಂಭವಾಗುತ್ತಿದ್ದಂತೆಯೇ ಜನರಲ್ಲಿ ಬೇಜವಾಬ್ದಾರಿತನ ಹೆಚ್ಚಾಗುತ್ತಿದ್ದು, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೋನಾ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಅನ್'ಲಾಕ್ 2.0 ಹಾಗೂ ಅನ್ ಲಾಕ್ 3.0 ಆರಂಭವಾಗುತ್ತಿದ್ದಂತೆಯೇ ಜನರಲ್ಲಿ ಬೇಜವಾಬ್ದಾರಿತನ ಹೆಚ್ಚಾಗುತ್ತಿದ್ದು, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೋನಾ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿದೆ. 

ಲಾಕ್ಡೌನ್ ಸಮಯದಲ್ಲಿ ಪ್ರತೀನಿತ್ಯ ಮಾಸ್ಕ್ ಧರಿಸದೆ, ಕೋವಿಡ್ ನಿಯಮ ಉಲ್ಲಂಘಿಸುತ್ತಿದ್ದ 200 ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಅನ್ ಲಾಕ್ ಘೋಷಣೆಯಾದ ಬಳಿಕ ಈ ಸಂಖ್ಯೆ 900ಕ್ಕೆ ತಲುಪಿದೆ. 

ಅನ್ ಲಾಕ್ 2.0 (ಜೂನ್ 21-ಜುಲೈ 5) ರಲ್ಲಿ ಶೇ.50 ಸಾಮರ್ಥ್ಯದ ಜನರೊಂದಿಗೆ ಸಾರಿಗೆ ಬಸ್ ಸೇವೆ, ಶೇ.50ರಷ್ಟು ಜನರ ಸಾಮರ್ಥ್ಯದೊಂದಿಗೆ ಹೋಟೆಲ್, ಕ್ಲಬ್, ಜಿಮ್, ಲಾಡ್ಜ್ ಹಾಗೂ ರೆಸಾರ್ಟ್ ಗಳಿಗೆ ಅನುಮತಿ ನೀಡಲಾಗಿತ್ತು. ಅನ್'ಲಾಕ್ 3.0 (ಜುಲೈ 5-ಜುಲೈ 19) ರಲ್ಲಿ ಮಾಲ್, ಮದುವೆ ಸಮಾರಂಭಗಳಿಗೆ ಅವಕಾಶ ನೀಡಲಾಗಿತ್ತು. ಈ ಬೆಳವಣಿಗೆ ಬಳಿಕ ನಗರದಲ್ಲಿ ಕೋವಿಡ್ ನಿಯಮ ಉಲ್ಲಂಘಿಸುತ್ತಿರವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ. 

ಬಿಬಿಎಂಪಿ ಮಾಹಿತಿ ಮಾಹಿತಿ ನೀಡಿರುವ ಪ್ರಕಾರ ನಗರದಲ್ಲಿ ಜೂನ್ 14 ಮತ್ತು 21 ರ ನಡುವೆ ಬೆಂಗಳೂರಿನಲ್ಲಿ ಲಾಕ್‌ಡೌನ್ ಸಡಿಲಗೊಂಡಿದ್ದು, ಇದೇ ಅವಧಿಯಲ್ಲಿ ಪಾಸಿಟಿವಿಟಿ ಪ್ರಮಾಣ ಕೂಡ ಕುಸಿತ ಕಂಡಿತ್ತು. ಈ ಸಮಯಲ್ಲಿ ಮಾಸ್ಕ್ ಧರಿಸದೆ ಕೋವಿಡ್ ನಿಯಮ ಉಲ್ಲಂಘಿಸುತ್ತಿದ್ದ 106-191 ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಜೂನ್.21-ಜುಲೈ 15 ರ ಬಳಿಕ ಈ ಸಂಖ್ಯೆ 242-996ಕ್ಕೆ ಏರಿಕೆಯಾಗಿದೆ. ಜುಲೈ 6-17ರವರೆಗೆ ಈ ಸಂಖ್ಯೆ 800-900ಕ್ಕೆ ತಲುಪಿದೆ ಎಂದು ತಿಳಿಸಿದೆ. 

ಈ ಹಿಂದೆ ಪ್ರತೀನಿತ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದ 15-16 ಪ್ರಕರಣಗಳಿಗೆ ದಂಡ ವಿಧಿಸಲಾಗುತ್ತಿತ್ತು. ಕಳೆದ ಎರಡು ವಾರಗಳಿಂದ ಈ ಸಂಖ್ಯೆ 30ಕ್ಕೆ ಏರಿಕೆಯಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. 

ಬಿಬಿಎಪಿ ಮುಖ್ಯ ಮಾರ್ಷಲ್ ಅಧಿಕಾರಿ ರಾಜ್ಬೀರ್ ಸಿಂಗ್ ಅವರು ಮಾತನಾಡಿ, ಅನ್ ಲಾಕ್ ಬಳಿಕ ನಿಯಮ ಉಲ್ಲಂಘಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಪ್ರತೀನಿತ್ಯ 800-1000 ಜನರಿಗೆ ದಂಡ ವಿಧಿಸಲಾಗುತ್ತಿದೆ. ಬೀದಿ-ಬದಿಗಳಲ್ಲಿ ತಿಂಡಿ ತಿನಿಸು ಅಂಗಡಿಗಳ ಬಳಿ, ಮಾರುಕಟ್ಟೆ, ಮಾಲ್ ಗಳಲ್ಲಿ ಹೆಚ್ಚೆಚ್ಚು ಜನರು ಸೇರುತ್ತಿದ್ದಾರೆಂದು ಹೇಳಿದ್ದಾರೆ. 

ಕಡಿಮೆ ಆದಾಯ ಇರುವ ಪ್ರದೇಶಗಳಲ್ಲಿ ಅತೀ ಹೆಚ್ಚು ಕೋವಿಡ್ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಈ ಪ್ರದೇಶಗಳಲ್ಲಿ ಮಾರ್ಷಲ್ ಗಳು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಜನರಿಗೆ ಉಚಿತವಾಗಿ ಮಾಸ್ಕ್ ಗಳನ್ನು ವಿತರಣೆ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ. 

ಜುಲೈ 17ರವರೆಗೆ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳಲ್ಲಿ ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿದ ಅತೀ ಹೆಚ್ಚು ಪ್ರಕರಣಗಳು ಕಂಡು ಬಂದಿದೆ. ಪೂರ್ವ 187 ಮಂದಿ ನಿಯಮ ಉಲ್ಲಂಘಿಸಿದ್ದು, ರೂ.46,750 ದಂಡ ಸಂಗ್ರಹಿಸಲಾಗಿದೆ. ಪಶ್ಚಿಮ ವಲಯದಲ್ಲಿ 220 ಜನರು ನಿಯಮ ಉಲ್ಲಂಘಿಸಿದ್ದು, ರೂ. 55,000 ದಂಡ ಸಂಗ್ರಹಿಸಲಾಗಿದೆ. ಇನ್ನು ದಕ್ಷಿಣ ವಲಯದಲ್ಲಿ 146 ಜನರು ನಿಯಮ ಉಲ್ಲಂಘಿಸಿದ್ದು, ರೂ. 36,500 ದಂಡ ಸಂಗ್ರಹಿಸಲಾಗಿದೆ ಎಂದು ಸಿಂಗ್ ಅವರು ಮಾಹಿತಿ ನೀಡಿದ್ದಾರೆ. 

ಕಳೆದ 14 ದಿನಗಳಲ್ಲಿ ಅಂತರೆ ಜುಲೈ 4-17ರ ಅವಧಿಯಲ್ಲಿ ನಗರದಲ್ಲಿ ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿದ ಒಟ್ಟಾರೆ 12,482 ಪ್ರಕರಣಗಳು ದಾಖಲಾಗಿದ್ದು, ರೂ.31.2 ಲಕ್ಷ ದಂಡ ಸಂಗ್ರಹಿಸಲಾಗಿದೆ. ಇನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳದ 596 ಪ್ರಕರಣಗಳು ದಾಖಲಾಗಿದ್ದು, ರೂ.14.87 ಲಕ್ಷ ಸಂಗ್ರಹಿಸಲಾಗಿದೆ. 

ನಗರದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ರಸ್ತೆಗಳಲ್ಲಿ, ಮಾರುಕಟ್ಟೆ ಪ್ರದೇಶಗಳಲ್ಲಿ ಸುಖಾಸುಮ್ಮನೆ ನಿಲ್ಲುವ, ಓಡಾಡುವ ಜನರಿಗೆ ಕೋವಿಡ್ ಕುರಿತು ಮಾಹಿತಿ, ಶಿಕ್ಷಣ ನೀಡಿದರೂ ನಮ್ಮ ಮಾತನ್ನು ಅವರು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com