ಭಾರತದಲ್ಲಿ 'ಜನಸಂಖ್ಯಾ ಸ್ಫೋಟ'ವಿಲ್ಲ: ತಜ್ಞರ ಅಭಿಮತ

ದೇಶದಲ್ಲಿ ಜನಸಂಖ್ಯಾ ನಿಯಂತ್ರಣದ ಕುರಿತ ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ತಜ್ಞರ ತಂಡವೊಂದು ದೇಶದಲ್ಲಿ ಜನಸಂಖ್ಯಾ ಸ್ಫೋಟವಾಗಿಲ್ಲ ಎಂಬ ಸಮಾಧಾನಕರ ಮಾಹಿತಿಯನ್ನು ಹೊರಹಾಕಿದ್ದಾರೆ.
ಭಾರತ ಜನಸಂಖ್ಯೆ (ಸಂಗ್ರಹ ಚಿತ್ರ)
ಭಾರತ ಜನಸಂಖ್ಯೆ (ಸಂಗ್ರಹ ಚಿತ್ರ)

ಬೆಂಗಳೂರು: ದೇಶದಲ್ಲಿ ಜನಸಂಖ್ಯಾ ನಿಯಂತ್ರಣದ ಕುರಿತ ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ತಜ್ಞರ ತಂಡವೊಂದು ದೇಶದಲ್ಲಿ ಜನಸಂಖ್ಯಾ ಸ್ಫೋಟವಾಗಿಲ್ಲ ಎಂಬ ಸಮಾಧಾನಕರ ಮಾಹಿತಿಯನ್ನು ಹೊರಹಾಕಿದ್ದಾರೆ.

ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗವು ಜನಸಂಖ್ಯಾ ನಿಯಂತ್ರಣ ಮಸೂದೆಯ ಕರಡನ್ನು ಬಿಡುಗಡೆ ಮಾಡಿದ್ದು, ಇದು ಒಂದರಿಂದ ಎರಡು ಮಕ್ಕಳಿರುವ ಸಣ್ಣ ಕುಟುಂಬಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ಈ ನಿಯಮ ಪಾಲಿಸದವರಿಗೆ ಸರ್ಕಾರಿ ಅನುದಾನಗಳನ್ನು ತಡೆಯುವ ಅಂಶಗಳನ್ನು ಹೊಂದಿದೆ. ಇದೇ  ಕಾರಣಕ್ಕೆ ಉತ್ತರ ಪ್ರದೇಶ ಸರ್ಕಾರದ ಈ ನೂತನ ನಿಯಮದ ವಿರುದ್ಧ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. 

ಉತ್ತರ ಪ್ರದೇಶ ಮಾತ್ರವಲ್ಲದೇ ದೇಶದ 8 ರಾಜ್ಯಗಳು ಅಂದರೆ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಗುಜರಾತ್, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ ಮತ್ತು ಉತ್ತರಾಖಂಡ ರಾಜ್ಯ ಎರಡು ಮಕ್ಕಳ ನಿಯಮಗಳನ್ನು ಹೊಂದಿವೆ. ಉತ್ತರ ಪ್ರದೇಶ ಈ ನಿಯಮವನ್ನು ಜಾರಿಗೆ ಮಾಡಿದ ಒಂಬತ್ತನೆಯ ರಾಜ್ಯವಾಗಿದೆ. ಸಣ್ಣ  ಕುಟುಂಬಗಳನ್ನು ಪ್ರೋತ್ಸಾಹಿಸಲು ಕರ್ನಾಟಕವೂ ಇದೇ ರೀತಿಯ ನೀತಿಯನ್ನು ರೂಪಿಸುತ್ತಿದೆ ಎನ್ನಲಾಗಿದೆ. 

ಈ ಕುರಿತಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಪೂನಮ್ ಮುತ್ರೇಜಾ ಅವರು, ಪ್ರಸ್ತಾವಿತ ಶಾಸನ ಮತ್ತು ಮಹಿಳೆಯರ ಮೇಲೆ ಅದರ ಪ್ರಭಾವ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಹಕ್ಕಿನ ಕುರಿತು  ಹಲವು ಅಂಶಗಳನ್ನು ಹಂಚಿಕೊಂಡಿದ್ದಾರೆ. 

*ಭಾರತದಲ್ಲಿ ಜನಸಂಖ್ಯಾ ಸ್ಫೋಟವಿದೆಯೇ? ಕಳೆದ 10 ವರ್ಷಗಳಲ್ಲಿ ಜನನ ಪ್ರಮಾಣ ಹೆಚ್ಚಾಗಿದೆಯೇ?
ದೇಶದಲ್ಲಿ ಜನಸಂಖ್ಯೆಯ ಸ್ಫೋಟದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಭಾರತದಲ್ಲಿ ಜನಸಂಖ್ಯಾ ಪರಿವರ್ತನೆ ನಡೆಯುತ್ತಿದ್ದು, ಜನಸಂಖ್ಯೆಯ ಕುರಿತಾದ ಭಾರತೀಯ ಜನಗಣತಿಯ ಮಾಹಿತಿಯು 2001-2011ರ ಅವಧಿಯಲ್ಲಿ ದಶಕದ ಬೆಳವಣಿಗೆಯ ದರವು 1991-2001ರ ಅವಧಿಯಲ್ಲಿ 21.5% ರಿಂದ 17.7% ಕ್ಕೆ ಇಳಿದಿದೆ.  ಭಾರತದ ಒಟ್ಟು ಜನನ ಫಲವತ್ತತೆ ದರವು 2018 ರ ಮಾದರಿ ನೋಂದಣಿ ವ್ಯವಸ್ಥೆಯ ಪ್ರಕಾರ 2000 ರಲ್ಲಿ 3.2 ರಿಂದ 2.2 ಕ್ಕೆ ಗಣನೀಯವಾಗಿ ಕುಸಿದಿದೆ.

ತೀರಾ ಇತ್ತೀಚೆಗೆ, ಎನ್‌ಎಫ್‌ಹೆಚ್‌ಎಸ್-5 (2019-20) ರ ಮೊದಲ ಹಂತದ ದತ್ತಾಂಶವು ಸಮೀಕ್ಷೆಯ 17 ರಾಜ್ಯಗಳು ಮತ್ತು ಐದು ಕೇಂದ್ರಾಡಳಿತಗಳಲ್ಲಿ ಸಮೀಕ್ಷೆ ಮಾಡಲಾಗಿದ್ದು, ಈ ಪೈಕಿ ಬಿಹಾರ, ಮಣಿಪುರ ಮತ್ತು ಮೇಘಾಲಯದಲ್ಲಿ ಮಾತ್ರ ಇನ್ನೂ 2.1 ಅಥವಾ ಅದಕ್ಕಿಂತ ಕಡಿಮೆ ಟಿಎಫ್‌ಆರ್  ಸಾಧಿಸಬೇಕಿದೆ. ಬಹುತೇಕ ಎಲ್ಲ ರಾಜ್ಯಗಳು ಫಲವತ್ತತೆಯ ಬದಲಿ ಮಟ್ಟವನ್ನು ಸಾಧಿಸಿವೆ, ಇದನ್ನು ಜನಸಂಖ್ಯೆಯು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಬದಲಿಸುವ ದರ ಎಂದು ವ್ಯಾಖ್ಯಾನಿಸಲಾಗಿದೆ.

*ತಾಯಿಯ ಮತ್ತು ನವಜಾತ ಶಿಶುಗಳ ಮರಣಕ್ಕೆ ಸಂಬಂಧಿಸಿದಂತೆ ಭಾರತ ಯಾವ ಸ್ಥಾನದಲ್ಲಿದೆ?
2007-09 ಮತ್ತು 2016-18ರ ನಡುವೆ, ಭಾರತವು ತಾಯಂದಿರ ಮರಣ ಪ್ರಮಾಣವನ್ನು ಶೇ.47 ರಷ್ಟು ಇಳಿಸಿದೆ. ಉತ್ತರ ಪ್ರದೇಶ ಮತ್ತು ಅಸ್ಸಾಂ ಎರಡೂ ರಾಜ್ಯಗಳಲ್ಲಿ ಶೇ45 ರಷ್ಟು ಕುಸಿತ ಕಂಡಿವೆ. ಎನ್‌ಎಫ್‌ಹೆಚ್‌ಎಸ್ -5 (2019-20) ಪ್ರಕಾರ, ತ್ರಿಪುರ, ಮಣಿಪುರ ಮತ್ತು ಮೇಘಾಲಯವನ್ನು  ಹೊರತುಪಡಿಸಿ ಎಲ್ಲಾ ರಾಜ್ಯಗಳು ಎನ್‌ಎಫ್‌ಹೆಚ್‌ಎಸ್ -4 (2015-16) ಮತ್ತು ಎನ್‌ಎಫ್‌ಹೆಚ್ಎಸ್ -5 (2019-20) ನಡುವಿನ ನವಜಾತ ಶಿಶು ಮರಣ ಪ್ರಮಾಣ ಕುಸಿತವನ್ನು ವರದಿ ಮಾಡಿದೆ. 2019-20ರಲ್ಲಿ ಕೇರಳ (3.4) ಮತ್ತು ಬಿಹಾರ (34.5) ಕ್ರಮವಾಗಿ ಕಡಿಮೆ ಮತ್ತು ಅತಿ ಹೆಚ್ಚು  ಎನ್‌ಎನ್‌ಎಂಆರ್ ದಾಖಲಿಸಿದೆ.

*ಕರ್ನಾಟಕದಲ್ಲಿ ಅಪೇಕ್ಷಿತ ಕುಟುಂಬ ಗಾತ್ರ ಇಬ್ಬರು ಮಕ್ಕಳು ಎಂದು ಸಮೀಕ್ಷೆಯೊಂದು ತೋರಿಸಿದ್ದು, ಕರ್ನಾಟಕದ ಅಂಕಿಅಂಶಗಳು ಹೇಗಿವೆ? 
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -5 ರ ಪ್ರಕಾರ, ಕರ್ನಾಟಕದ ಒಟ್ಟು ಜನನ ಫಲವತ್ತತೆ ದರವು ಶೇ1.7 ಆಗಿದೆ. ಇದು ರಾಷ್ಟ್ರೀಯ ಸರಾಸರಿ 2.2 ಗಿಂತ ಕಡಿಮೆಯಿದೆ ಮತ್ತು ಬದಲಿ ಹಂತದ ಫಲವತ್ತತೆ 2.1 ಕ್ಕಿಂತ ಕಡಿಮೆಯಾಗಿದೆ, ಇದು ಜನಸಂಖ್ಯೆಯು ತನ್ನನ್ನು ತಾನೇ ಬದಲಾಯಿಸಿಕೊಳ್ಳುತ್ತಿದೆ  ಎಂಬುದಕ್ಕೆ ನಿದರ್ಶನ, ಎನ್‌ಎಫ್‌ಹೆಚ್‌ಎಸ್ -5 ರ ದತ್ತಾಂಶವು ಅಪೇಕ್ಷಿತ ಫಲವತ್ತತೆ ದರವನ್ನು ತೋರಿಸುತ್ತಿದ್ದು, (ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರ ಸರಾಸರಿ ಮಕ್ಕಳ ಸಂಖ್ಯೆ) ಇನ್ನೂ ಶೇ.1.38 ರಷ್ಟಿದೆ. ಬಲವಂತದ ಜನಸಂಖ್ಯಾ ನೀತಿಯಿಲ್ಲದೆ, ಪುರುಷರು ಮತ್ತು ಮಹಿಳೆಯರು ಸಣ್ಣ ಕುಟುಂಬಗಳನ್ನು  ಬಯಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಆದ್ದರಿಂದ ರಾಜ್ಯವು ಗರ್ಭನಿರೋಧಕ ಆಯ್ಕೆಗಳ ಯೋಜನೆಯನ್ನು ವಿಸ್ತರಿಸುವ ಅಗತ್ಯವಿದೆ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com