ಬಿಜೆಪಿಯವರಿಗೆ ಗೋ ಮಾತೆ ಮೇಲಿನ ಪ್ರೀತಿ ಕೇವಲ ಮತಕ್ಕಾಗಿ ಮಾತ್ರ- ಪ್ರಿಯಾಂಕ್ ಖರ್ಗೆ ಕಿಡಿ

ಬಿಜೆಪಿಯವರಿಗೆ ಗೋ ಮಾತೆ ಮೇಲಿನ ಪ್ರೀತಿ ಕೇವಲ ಚುನಾವಣೆಯಲ್ಲಿ ಮತ ಗಳಿಸುವುದಕ್ಕಾಗಿ ಮಾತ್ರ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಸಾಲು- ಸಾಲಾಗಿ ಬಿದ್ದ ಗೋವುಗಳು
ಸಾಲು- ಸಾಲಾಗಿ ಬಿದ್ದ ಗೋವುಗಳು
Updated on

ಬೆಂಗಳೂರು: ಬಿಜೆಪಿಯವರಿಗೆ ಗೋ ಮಾತೆ ಮೇಲಿನ ಪ್ರೀತಿ ಕೇವಲ ಚುನಾವಣೆಯಲ್ಲಿ ಮತ ಗಳಿಸುವುದಕ್ಕಾಗಿ ಮಾತ್ರ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ರಸ್ತೆಯಲ್ಲಿ ಹಸುಗಳು ಸಾಲು ಸಾಲಾಗಿ ಬಿದ್ದಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಹಂಚಿಕೊಂಡಿರುವ  ಪ್ರಿಯಾಂಕ್ ಖರ್ಗೆ, ಬಿಜೆಪಿ ಸರ್ಕಾರದ ಕೆಟ್ಟ ನೀತಿಗಳ ಪರಿಣಾಮದಿಂದ ಬಿಡಾಡಿ ದನಗಳ ಸಮಸ್ಯೆ ಮಾತ್ರವಲ್ಲದೇ ಹಸುಗಳನ್ನು ಎಲ್ಲೆಂದರಲ್ಲಿ ಬಿಡಲಾಗುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಗೋಹತ್ಯೆ ಮಸೂದೆಯನ್ನು ಮರು ಪರಿಶೀಲಿಸದಿದ್ದರೆ ಇದು ಕರ್ನಾಟಕದಲ್ಲಿಯೂ ಸಂಭವಿಸುತ್ತದೆ. ಇದರಿಂದ ಸ್ಪಷ್ಟವಾಗುವ ವಿಚಾರ ಎಂದರೆ, ಬಿಜೆಪಿಯವರಿಗೆ ಗೋ ಮಾತೆ ಮೇಲಿನ ಪ್ರೀತಿ ಮತಕ್ಕಾಗಿ ಮಾತ್ರ' ಎಂದು ಅವರು ಟೀಕಿಸಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com