ಇನ್ನೂ ಪತ್ತೆಯಾಗಿಲ್ಲ ಕಪಿಲಾ ನದಿಗೆ ಹಾರಿದ್ದ ಯುವಕನ ಶವ: ಕೊಲೆ ಎಂದು ಯುವಕನ ತಂದೆ ಆರೋಪ

ಕಪಿಲಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಹೆಜ್ಜಿಗೆ ಗ್ರಾಮದ ಬಳಿ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: ಕಪಿಲಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಹೆಜ್ಜಿಗೆ ಗ್ರಾಮದ ಬಳಿ ಸಂಭವಿಸಿದೆ.

ಹೆಜ್ಜಿಗೆ ಗ್ರಾಮದ ಸೇತುವೆಯಿಂದ ಮೂವರು ಯುವಕರು ನದಿಗೆ ಹಾರಿದ್ದರು. ಮೂವರಲ್ಲಿ ಇಬ್ಬರು ಈಜಿ ದಡ ಸೇರಿದ್ದಾರೆ. ಆದರೆ ಓರ್ವ ನಾಪತ್ತೆಯಾಗಿದ್ದ. ಅಬ್ದುಲ್ ಕರೀಂ ನೀರು ಪಾಲಾಗಿರುವ ಯುವಕ. ಅಬ್ದುಲ್ ಕರೀಂಗಾಗಿ ನದಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ಮಗ ನಾಪತ್ತೆಯಾಗಿರುವ ಬಗ್ಗೆ ಮಾತನಾಡಿದ ಅಬ್ದುಲ್ ಕರೀಂನ ತಂದೆ ಮುನಾವರ್ ಪಾಷಾ, ನನ್ನ ಮಗನನ್ನು ಕೊಲೆ ಮಾಡಿದ್ದಾರೆ. ನನ್ನ ಮಗ ಚಪ್ಪಲಿ ಬಿಡದೆ, ಬಟ್ಟೆ ಬಿಚ್ಚದೆ ನೀರಿಗೆ ಬಿದ್ದಿದ್ದಾನೆ. ಮಗನ ಜೊತೆಯಲ್ಲಿದ್ದವರೇ ಕೊಲೆ ಮಾಡಲು ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com