ಯೋಗಕ್ಕೆ ವಿಶ್ವ ಮಾನ್ಯತೆ ತಂದುಕೊಟ್ಟ ಮಹಾನ್ ನಾಯಕ ಮೋದಿ: ಸಚಿವ ವಿ.ಸೋಮಣ್ಣ

ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಶ್ರೀ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸಲಾಗಿತ್ತು.
ಯೋಗಾಸನ ಮಾಡುತ್ತಿರುವ ಸಚಿವ ಸೋಮಣ್ಣ
ಯೋಗಾಸನ ಮಾಡುತ್ತಿರುವ ಸಚಿವ ಸೋಮಣ್ಣ

ಬೆಂಗಳೂರು: ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಶ್ರೀ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸಲಾಗಿತ್ತು.

ಸ್ಥಳೀಯ ಶಾಸಕರು,ವಸತಿ ಸಚಿವರಾದ ವಿ.ಸೋಮಣ್ಣರವರು, ಖ್ಯಾತ ಚಲನಚಿತ್ರ ನಟಿ ಪ್ರಿಯಾಂಕ ಉಪೇಂದ್ರ, ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶೈಲಜ ಸೋಮಣ್ಣರವರು, ಅಂತರಾಷ್ಟ್ರೀಯ ಯೋಗಪಟು ಡಾ||ಭಾಗಿರಥಿ ಕನ್ನಡತಿರವರು ದೀಪಾ ಬೆಳಗಿಸಿ, ಯೋಗ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಸಾವಿರಾರು ಯೋಗಪಟುಗಳು ಸೂರ್ಯ ನಮಸ್ಕಾರ, ಪ್ರಾಣಯಾಮ ವಿವಿಧ ಆಸನಗಳ ಪ್ರದರ್ಶನ ಮಾಡಿದರು.ಸಚಿವರಾದ ವಿ.ಸೋಮಣ್ಣರವರು ಮಾತನಾಡಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನ ಹಮ್ಮಿಕೊಳ್ಳಲಾಗಿದೆ.

ಸುಖ, ಶಾಂತಿ ನೆಮ್ಮದ್ದಿ ಜೀವನಕ್ಕೆ ಯೋಗ ಮುಖ್ಯ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರಮೋದಿ ರಾಷ್ಟ್ರದ ಮೊಟ್ಟ ಮೊದಲ ವಿಶ್ವವಿದ್ಯಾಲಯವಾದ ಡಾ||ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಉದ್ಘಾಟನೆ ಮಾಡಿದರು. ನಮ್ಮ ಕ್ಷೇತ್ರ ಶರವೇಗದಲ್ಲಿ ಅಭಿವೃದ್ದಿ ಪಥದತ್ತ ಸಾಗುತ್ತಿದೆ.ಡಾ||ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣವನ್ನು ಇನ್ನ ಎರಡು ತಿಂಗಳಲ್ಲಿ ಲೋಕರ್ಪಣೆಯಾಗಲಿದೆ. ಪಂತರಪಾಳ್ಯ ಮತ್ತು ದಾಸರಹಳ್ಳಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 60 ಹಾಸಿಗೆ ಸಾಮಥ್ಯವುಳ್ಳ ಕಿಡ್ನಿ ಡಯಾಲಿಸಿಸ್ ಆಸ್ಪತ್ರೆ ಅತಿ ಶೀಘ್ರದಲ್ಲಿ ಉದ್ಘಾಟನೆಯಾಗಲಿದೆ.

ಇಂದು ಮಕ್ಕಳು ಮತ್ತು ಯುವ ಜನಾಂಗ ಆನಾರೋಗ್ಯ ಪೀಡಿತರಾಗುತ್ತಿರುವುದು ಶೋಚನಿಯ ಸಂಗತಿ. ರೋಗ ಮುಕ್ತವಾಗಲು,ಆರೋಗ್ಯವಂತ ಜೀವನ ಸಾಗಿಸಲು ಪ್ರತಿ ದಿನ ಎಲ್ಲರು ಯೋಗ ಮಾಡಿ ,ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ವಾರ್ಡ್ ನಲ್ಲಿ ಯೋಗ ಕೇಂದ್ರ ಆರಂಭಿಸಲಾಗಿದೆ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ಮುಖ್ಯ. ಯೋಗಕ್ಕೆ ವಿಶ್ವಮಾನ್ಯತೆ ತಂದುಕೊಟ್ಟ ಮಹಾನ್ ನಾಯಕ ಪ್ರಧಾನಿ ನರೇಂದ್ರಮೋದಿರವರು ಎಂದು ಹೇಳಿದರು.

ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ, ಕನ್ನಡ ಪರ ಹೋರಾಟಗಾರ ಪಾಲನೇತ್ರರವರು, ಮಾಜಿ ಬಿ.ಬಿ.ಎಂ.ಪಿ.ಸದಸ್ಯರು ಕೆ.ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ವಾಗೇಶ್, ದಾಸೇಗೌಡರು, ರೂಪಲಿಂಗೇಶ್ವರ್, ಪಲ್ಲವಿ ಚನ್ನಪ್ಪ, ಬಿ.ಜೆ.ಪಿ.ಮುಖಂಡರಾದ ರಾಜಪ್ಪರವರು ಪಾಲ್ಗೊಂಡಿದ್ದರು.

ನಟಿ ಪ್ರಿಯಾಂಕ ಉಪೇಂದ್ರ ಮತ್ತು ಅಂತರಾಷ್ಟ್ರೀಯ ಯೋಗಪಟು ಭಾಗಿರಥಿ ಕನ್ನಡತಿರವರಿಗೆ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com