ಚಾಮರಾಜನಗರ: ಚಕ್ರ ಮುರಿದು ಉರುಳಿ ಬಿದ್ದ ರಥ, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಭಕ್ತರು! ವಿಡಿಯೋ

ಚಕ್ರ ಮುರಿದ ಪರಿಣಾಮ ರಥ ಉರುಳಿ ಉರುಳಿಬಿದ್ದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ರಥದ ಚಿತ್ರ
ರಥದ ಚಿತ್ರ
Updated on: 

ಚಾಮರಾಜನಗರ: ದೇವಾಲಯವೊಂದರ ರಥದ  ಚಕ್ರ ಮುರಿದ ಪರಿಣಾಮ ರಥ ಉರುಳಿ ಉರುಳಿಬಿದ್ದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಚಾಮರಾಜನಗರ ತಾಲೂಕಿನ ಚೆನ್ನಪ್ಪನಪುರ ಗ್ರಾಮದ ವೀರಭದ್ರೇಶ್ವರ ಸ್ವಾಮಿ ರಥೋತ್ಸದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ದೇವಾಲಯದ ಹೊರ ಆವರಣದಲ್ಲಿ ರಥೋತ್ಸವ ನಡೆಯುತ್ತಿದ್ದಾಗ ರಥದ ಬಲಗಡೆಯ ಚಕ್ರ ಮುರಿದು, ರಥ ಕೆಳಗೆ ಉರುಳಿ ಬಿದ್ದಿದೆ.

ತಕ್ಷಣ ಭಕ್ತರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯವಾಗಿಲ್ಲ 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com