ಬೆಂಗಳೂರು: ಡಿಆರ್ ಡಿಒ ದಿಂದ 45 ದಿನಗಳಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ; ರಾಜನಾಥ್ ಸಿಂಗ್ ಉದ್ಘಾಟನೆ
ಬೆಂಗಳೂರಿನಲ್ಲಿ ಡಿಆರ್ ಡಿಒ ಕೇವಲ 45 ದಿನಗಳಲ್ಲಿ ನಿರ್ಮಿಸಿದ ಏಳು ಅಂತಸ್ತಿನ ಫ್ಲೈಟ್ ಕಂಟ್ರೋಲ್ ಸಿಸ್ಟಮ್ ನೂತನ ಕಟ್ಟಡವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಉದ್ಘಾಟನೆ ಮಾಡಿದರು.
Published: 17th March 2022 10:06 PM | Last Updated: 18th March 2022 01:33 PM | A+A A-

ಕಟ್ಟಡ ಉದ್ಘಾಟಿಸಿದ ರಾಜನಾಥ್ ಸಿಂಗ್
ಬೆಂಗಳೂರು: ಬೆಂಗಳೂರಿನಲ್ಲಿ ಡಿಆರ್ ಡಿಒ ಕೇವಲ 45 ದಿನಗಳಲ್ಲಿ ನಿರ್ಮಿಸಿದ ಏಳು ಅಂತಸ್ತಿನ ಫ್ಲೈಟ್ ಕಂಟ್ರೋಲ್ ಸಿಸ್ಟಮ್ ನೂತನ ಕಟ್ಟಡವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಉದ್ಘಾಟನೆ ಮಾಡಿದರು.
ಸಿವಿ ರಾಮನ್ ನಗರದಲ್ಲಿ ADE( ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟ್ಯಾಬ್ಲಿಶ್ಮೆಂಟ್) ಕ್ಯಾಂಪಸ್ ನಲ್ಲಿರುವ FCS ಕಟ್ಟಡ ನೂತನ ತಂತ್ರಜ್ಞಾನ ಬಳಸಿ ಕೇವಲ 45 ದಿನಗಳಲ್ಲಿ ನಿರ್ಮಾಣ ಮಾಡಲಾಗಿದ್ದು, ಡಿ ಆರ್ ಡಿಒ ನಿರ್ಮಾಣ ಕಾರ್ಯವನ್ನು ಎಲ್ ಅಂಡ್ ಟಿ ಕಂಪನಿಗೆ ವಹಿಸಿತ್ತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು. ಕರ್ನಾಟಕಕ್ಕೆ ಆಗಮಿಸಿರುವ ನಮ್ಮ ಗೌರವಾನ್ವಿತ ಕೇಂದ್ರ ಸಚಿವ ರಾಜನಾಥ್ ಸಿಂಗ್ ರವರು ಬೆಂಗಳೂರಿಗೆ ಬಂದು ಉದ್ಘಾಟನೆ ಮಾಡಿದ್ದಕ್ಕೆ ಧನ್ಯವಾದಗಳು. ಕೇವಲ 45 ದಿನಗಳಲ್ಲೇ 7 ಮಹಡಿಯ 1 ಲಕ್ಷದ 30 ಸಾವಿರ ಚದರ ಅಡಿಯಲ್ಲಿ ನಿರ್ಮಾಣ ಮಾಡಿರುವುದು ನಿಜಕ್ಕೂ ಗ್ರೇಟ್. ನಮ್ಮ ರಾಜ್ಯದಲ್ಲಿ ಟೆಂಡರ್ ಪ್ರೋಸಸ್ಸೇ 45 ದಿನ ಇರುತ್ತೆ. ಆದರೆ ನಿಜಕ್ಕೂ ಈ ತಂಡ ಅದ್ಭುತ ಕೆಲಸ ಮಾಡಿದೆ ಎಂದು ಪ್ರಶಂಸಿದರು.
ಇದನ್ನು ಓದಿ: ಕೇವಲ 45 ದಿನಗಳಲ್ಲಿ 7 ಅಂತಸ್ತಿನ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಿದ ಡಿಆರ್ ಡಿಒ
ಪ್ರಧಾನಿ ಮೋದಿಯವರ ಆತ್ಮನಿರ್ಭರ್ ಅಡಿ ತಂತ್ರಜ್ಞಾನ ವಲಯ ಕೂಡ ಭಾರೀ ಮುಂಚೂಣೆ ಪಡೆಯುತ್ತಿದೆ. ಮೋದಿಯವರು ದೇಶಕ್ಕೆ ಬಹಳ ಮಹತ್ವ ಕೊಡ್ತಾರೆ, ಎಲ್ಲೂ ಕೂಡ ಕಾಂಪ್ರಮೈಸ್ ಆಗೋದಿಲ್ಲ. ಅವರ ನಾಯಕತ್ವದಿಂದ ನಮ್ಮ ದೇಶ ತುಂಬಾ ಪ್ರಬಲವಾಗಿ ಹೊರಹೊಮ್ಮುತ್ತಿದೆ ಎಂದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಘಟನೆಗಳು ನಡೆಯುತ್ತವೆ ಸಮಸ್ಯೆ ಬಗೆಹರಿಸಿಕೊಳ್ಳಲು ನಮ್ಮ ದೇಶದತ್ತ ತಿರುಗಿ ನೋಡುತ್ತಿದ್ದಾರೆ. ಪ್ಲಾನಿಂಗ್ ಹಾಗೂ ಟೆಕ್ನಾಲಜಿಯಲ್ಲಿ ಹೊಸ ಹೊಸ ಆವಿಷ್ಕಾರವಾಗಲಿ ಅಂತಾ ಬಯಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಅವರು ಸಿಎಂ ಹೇಳಿದರು.